More

    ಕೊರೊನಾ ವೈರಸ್​ನಿಂದ ಬಚಾವಾಗಲು ಜಿರಾಫೆಯಾದ ಮಹಿಳೆ: ವೈರಲ್​ ಆಯ್ತು ಮಹಿಳೆಯ ಪ್ಲ್ಯಾನ್​

    ವುಹಾನ್​: ಮಹಿಳೆಯೊಬ್ಬಳು ಕೊರೊನಾ ವೈರಸ್​ನಿಂದ ಬಚಾವಾಗುವ ಸಲುವಾಗಿ ಜಿರಾಫೆ ವೇಷ ತೊಟ್ಟಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

    ಚೀನಾದ ಮಹಿಳೊಬ್ಬಳು ತನ್ನ ಕುಟುಂಬದವರಿಗೆ ಔಷಧಗಳನ್ನು ತೆಗೆದುಕೊಳ್ಳಬೇಕಿತ್ತಂತೆ. ಆದರೆ ಹೊರಗೆ ಹೋಗಲು ಕೊರೊನಾ ಭಯ. ಆಕೆಯ ಮಾಸ್ಕ್​ನ ವ್ಯಾಲಿಡಿಟಿ ಮುಗಿದಿದ್ದ ಕಾರಣ ಮಾಸ್ಕ್​ ತೊಟ್ಟು ಹೋಗುವುದಕ್ಕೂ ಸಾಧ್ಯವಾಗಿರಲಿಲ್ಲ. ದೇಶದಲ್ಲಿ ಮಾಸ್ಕ್​ಗಳಿಗೆ ಅಭಾವ ಬಂದಿದ್ದರಿಂದಾಗಿ ಹೊಸ ಮಾಸ್ಕ್​ನ್ನು ಸಹ ಕೊಳ್ಳಲಾಗಿಲ್ಲ. ಹಾಗಾಗಿ ಹೊಸ ಉಪಾಯವೊಂದನ್ನು ಮಾಡಿದ ಆಕೆ, ಆನ್​ಲೈನ್​ನಲ್ಲಿ ಎರಡು ಜಿರಾಫೆ ಉಡುಗೆಯನ್ನು ಬುಕ್​ ಮಾಡಿದ್ದಾಳೆ.

    ಜಿರಾಫೆ ಉಡುಗೆಯನ್ನು ಆನ್​ಲೈನ್​ ಮೂಲಕ ಕೊಂಡುಕೊಂಡ ಮಹಿಳೆ ಅದನ್ನು ತೊಟ್ಟುಕೊಂಡು ಆಸ್ಪತ್ರೆಗೆ ಹೋಗಿ ಔಷಧಗಳನ್ನು ತೆಗೆದುಕೊಂಡು ಬಂದಿದ್ದಾಳೆ.

    ಅಡಿಯಿಂದ ಮುಡಿವರೆಗೆ ಮುಚ್ಚಿರುವ ಜಿರಾಫೆ ಬಟ್ಟೆ ತೊಟ್ಟು ಆಕೆ ಆಸ್ಪತ್ರೆಯಲ್ಲಿ ನಡೆದಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts