More

    VIDEO ] ಕೆಲವೊಮ್ಮೆ ಸಣ್ಣ ಪುಟ್ಟ ಸಂಗತಿಗಳೂ ಅತ್ಯದ್ಭುತ ಆನಂದವನ್ನು ನೀಡುತ್ತವೆ.. ಅಲ್ಲವೆ?

    ಈ ಜಗತ್ತೇ ಹಾಗೆ, ಎಲ್ಲರಿಗೂ ಒಂದು ಹಂತದಲ್ಲಿ ಕೌತುಕವೇ. ಪುಟ್ಟ ಮಕ್ಕಳು ಯಾವಾಗಲೂ ತಮ್ಮ ಸುತ್ತಲಿನ ವಿಷಯದ ಬಗ್ಗೆ ಅತ್ಯಂತ ಕುತೂಹಲವೆಂಬಂತೆ ಯೋಚಿಸುತ್ತಾರೆ. ಅವರು ಇರುವ ಜಗತ್ತು ವಿವಿಧ ರೀತಿಯ ಕೌತುಕಗಳಿಂದ ಕೂಡಿರುತ್ತದೆ ಮತ್ತು ಅವರು ಅದನ್ನು ಅನ್ವೇಷಿಸುತ್ತಲೇ ದೊಡ್ಡವರಾಗುತ್ತಾರೆ.
    ವಯಸ್ಸಾದವರಿಗೆ, ನೆನಪಿನಾಳಕ್ಕೆ ಹೋಗಲು ಇದು ಉತ್ತಮ ಸಮಯವಾಗಿರುತ್ತದೆ. ಅವರು ಮಕ್ಕಳಾಗಿದ್ದಾಗ, ಆಗಾಗ್ಗೆ ಏನನ್ನಾದರೂ ಗಮನಿಸುತ್ತಿದ್ದುದು, , ಅದು ಏನು ಮಾಡುತ್ತದೆ ಮತ್ತು ಅದನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನೋಡಲು ಪ್ರಯತ್ನಿಸಿರುತ್ತಾರೆ.

    ಇದನ್ನೂ ಓದಿ: ಫೇಸ್ಬುಕ್ ಸಹಭಾಗಿತ್ವದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸಿಬಿಎಸ್​​ಇ ಡಿಜಿಟಲ್ ಸುರಕ್ಷತಾ ಉಚಿತ ತರಬೇತಿ

    ಕೇವಲ ಅಮೂಲ್ಯ ವಸ್ತುಗಳು ಮಾತ್ರವಲ್ಲ, ಮಕ್ಕಳು ಮುಗ್ಧ ಪ್ರಶ್ನೆಗಳನ್ನು ಸಹ ಕೇಳುತ್ತಾರೆ, ಅವರಿಂದ ಎದುರಾದ ಪ್ರಶ್ನೆಗಳಿಗೆ ಪೋಷಕರು ಸರಿಯಾದ ಉತ್ತರ ಗೊತ್ತಿದ್ದರೆ ಉತ್ತರಿಸುತ್ತಾರೆ. ಇಲ್ಲದಿದ್ದರೆ ಅವರು ಕೇಳುವ ಪ್ರಶ್ನೆಗೆ ಅವರು ಮೂಕವಿಸ್ಮಿತರಾಗಿಯೇ ಉಳಿಯಬಹುದು.
    ಮನುಜ ಜಗತ್ತಿನಲ್ಲಿ ಏನೇ ಇರಲಿ, ಪ್ರಾಣಿ ಜಗತ್ತಿನಲ್ಲಿ ಅದು ಸ್ವಲ್ಪ ಸ್ವಲ್ಪ ಭಿನ್ನವಾಗಿರುತ್ತದೆ. ಅವುಗಳಿಗೆ ‘ಅನುಮಾನಗಳನ್ನು’ ವ್ಯಕ್ತಪಡಿಸಲು ಶಬ್ದೋಚ್ಛಾರಗಳನ್ನು ರೂಪಿಸುವ ಸಾಮರ್ಥ್ಯ ಇಲ್ಲ,  ಆದ್ದರಿಂದ ಅವು ಕೌತುಕಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ.
    ಅವು ಉತ್ತರವನ್ನು ಪಡೆಯುವ ಏಕೈಕ ಮಾರ್ಗವೆಂದರೆ ಅದನ್ನು ಸ್ವತಃ ಪ್ರಯತ್ನಿಸಿ ಮತ್ತು ಅದರೊಂದಿಗೆ ಸ್ವಲ್ಪ ಆನಂದಿಸುವುದರಿಂದ ಮಾತ್ರ.
    ಪ್ರಾಣಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕುತೂಹಲ ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವ ನೋಟವನ್ನು ನಾವು ಹೆಚ್ಚಾಗಿ ನೋಡುತ್ತೇವೆ.
    ಅಂತಹ ನೋಟಗಳು ಮನಸ್ಸಿಗೆ ಮುದ ನೀಡುವಂತಿರುತ್ತವೆ. ಇಲ್ಲಿನ ಒಂದು ವಿಡಿಯೋದಲ್ಲಿ ಸಣ್ಣ ಮರಿಗಳು ಅವುಗಳಿಗೆ ಕೌತಕವೆನಿಸುವ ಮರದ ದಿಮ್ಮಿಯೊಂದಿಗೆ ಪದೆ ಪದೆ ಆಟವಾಡುವುದನ್ನು ನಾವು ನೋಡುತ್ತೇವೆ.

    ಇದನ್ನೂ ಓದಿ: ಗುರುಪೂರ್ಣಿಮೆ ಶುಭಾಶಯ ಕೋರಿದ ಪ್ರಧಾನಿ ಮೋದಿ 


    ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊವೊಂದರಲ್ಲಿ, ಸಿಂಹ ಮರಿಗಳ ಗುಂಪೊಂದು ಇದೆ.
    ಪ್ಮರಾಣಿಗಖು ಮರದ ದಿಮ್ಮಿಯ ತುದಿಯಲ್ಲಿ ನಿಲ್ಲುತ್ತದೆ. ತುದಿಯಲ್ಲಿ ಯಾವುದೇ ಆಸರೆಯಿಲ್ಲದ ಮರದ ದಿಮ್ಮಿ ಸಹಜವಾಗಿಯೇ ಕೆಳಗಿಳಿಯುತ್ತದೆ. ಇದನ್ನೊಂದು ಕೌತುಕವೆಂಬಂತೆ ಪದೆ ಪದೆ ಈ ನೈಸರ್ಗಿಕ’ ಮೋಜನ್ನು ಮರಿಗಳು ಆನಂದಿಸುತ್ತಿವೆ.
    ಈ ದೃಶ್ಯಾವಳಿಯನ್ನು ದಕ್ಷಿಣ ಆಫ್ರಿಕಾದ ಮಾಲಾ ಮಾಲಾ ಗೇಮ್ ರಿಸರ್ವ್‌ನಲ್ಲಿ ಮಾರ್ಗದರ್ಶಿಯಾಗಿರುವ ಡೇನಿಯಲ್ ಬೈಲೆ ಸೆರೆಹಿಡಿದಿದ್ದಾರೆ.
    ಅವು ಮರದ ದಿಮ್ಮಿಯ ಮೇಲೆ ಎಚ್ಚರಿಕೆಯಿಂದ ನಡೆದರೂ ಎಡವಿ ಬೀಳುತ್ತವೆ. ಆದಾಗ್ಯೂ, ಇದು ಅವುಗಳಿಗೆ ಪುಟ್ಟ ಮೋಜಿನ ಆಟದಂತೆ ತೋರುತ್ತದೆ.
    ಆ ಪ್ರಾಣಿಗಳ ಆಟದ ಅಮೂಲ್ಯ ವೀಡಿಯೊವನ್ನು ನೆಟ್ಟಿಗರು ಮನತುಂಬಿ ಆನಂದಿಸಿದ್ದಾರೆ. ಇಂತಹ ಸರಳ, ಸಣ್ಣಪುಟ್ಟ ಸಂಗತಿಗಳು ತುಂಬ ಸಂತೋಷವನ್ನು ತರುತ್ತವೆ ಎಂದಿದ್ದಾರೆ. 

    ಕಬಿನಿ ಕಾಡಿನಲ್ಲಿದ್ದಾನೆ ಬಗೀರಾ…..! ಇಲ್ಲಿವೆ ಅಪರೂಪದ ಫೋಟೋಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts