More

    ರೈಲ್ವೆ ನಿಲ್ದಾಣದಲ್ಲಿ ಬಸ್ಕಿ ಹೊಡೆದರೆ ಉಚಿತ ಪ್ಲಾಟ್​ಫಾರ್ಮ್​ ಟಿಕೆಟ್​: ಫಿಟ್​ನೆಸ್​ ವಿಥ್​ ಸೇವಿಂಗ್​

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಫಿಟ್​ನೆಸ್​ ಚಾಲೆಂಜ್​ ನಿಮಗೆಲ್ಲರಿಗೂ ಗೊತ್ತೇ ಇದೆ. ಹಮ್​ ಫಿಟ್​ಥೋ ಇಂಡಿಯಾ ಫಿಟ್​ ಹೇ ಎಂದು ಹೇಳಿದ್ದರು ಪ್ರಧಾನಿಯವರು. ಇದೀಗ ಸಾರ್ವಜನಿಕರು ಫಿಟ್​ ಆಗಿರಲಿ ಎಂದು ಕಾಳಜಿ ತೋರಿಸಿರುವ ದೆಹಲಿಯ ರೈಲ್ವೆ ನಿಲ್ದಾಣವೊಂದು ಬಸ್ಕಿ ಹೊಡೆದರೆ ಉಚಿತ ಪ್ಲಾಟ್​ಫಾರ್ಮ್​ ಟಿಕೆಟ್​ ಕೊಡುವ ಮಷಿನ್​ನ್ನು ಇರಿಸಿದೆ.

    ದೆಹಲಿಯ ಆನಂದ ವಿಹಾರ್​ ರೈಲ್ವೆ ನಿಲ್ದಾಣದಲ್ಲಿ ಒಂದು ವಿಶೇಷವಾದ ಮಷಿನ್​ನ್ನು ಇಡಲಾಗಿದೆ. ಈ ಮಷಿನ್​ನ ಮುಂದೆ ನೀವು ಬಸ್ಕಿ ಹೊಡೆದರೆ ನಿಮಗೆ ಅದು ಉಚಿತ ಪ್ಲಾಟ್​ಫಾರ್ಮ್​ ಟಿಕೆಟ್​ನ್ನು ನೀಡುತ್ತದೆ.

    ಈ ಮಷಿನ್​ನ ಕುರಿತಾಗಿ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ರೈಲ್ವೆ ಸಚಿವ ಪಿಯೂಷ್​ ಗೋಯಲ್​, “ಫಿಟ್​ನೆಸ್​ನೊಂದಿಗೆ ಉಳಿತಾಯ: ದೆಹಲಿಯ ಆನಂದ್​ ವಿಹಾರ್​ ರೈಲ್ವೆ ನಿಲ್ದಾಣದಲ್ಲಿ ಫಿಟ್​ನೆಸ್​ನ್ನು ಉತ್ತೇಜಿಸಲು ವಿಶಿಷ್ಟ ಪ್ರಯೋಗವೊಂದನ್ನು ಮಾಡಲಾಗಿದೆ. ಇಲ್ಲಿ ಸ್ಥಾಪಿಸಲಾಗಿರುವ ಯಂತ್ರದ ಮುಂದೆ ಬಸ್ಕಿ ಹೊಡೆದರೆ ಅದು ನಿಮಗೆ ಉಚಿತ ಪ್ಲಾಟ್​ಫಾರ್ಮ್​ ಟಿಕೆಟ್​ಗಳನ್ನು ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts