ತುಮಕೂರು: ಇಲ್ಲೊಬ್ಬ ಕಾಮುಕ ಸ್ಕ್ಯಾನಿಂಗ್ ಸೆಂಟರ್ವೊಂದರ ಶೌಚಗೃಹದಲ್ಲಿ ಮೊಬೈಲ್ ಇಟ್ಟು ಮಹಿಳೆಯರಿಗೆ ಗೊತ್ತಾಗದಂತೆ ಅವರ ದೃಶ್ಯ ಸೆರೆ ಹಿಡಿದು ವಿಕೃತಿ ಮರೆದು ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ನಗರದ ಗಾಂಧಿನಗರದಲ್ಲಿರುವ ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್ನ ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ಮಹಿಳೆಯರ ವಿಡಿಯೋ ತೆಗೆಯುತ್ತಿದ್ದವನಿಗೆ ಮಂಗಳವಾರ ಸಾರ್ವಜನಿಕರೇ ಥಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹರೀಶ್ (35) ಆರೋಪಿ. ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್ನಲ್ಲಿ ವರ್ಷದಿಂದ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಈತ ಶೌಚಗೃಹದ ಗೋಡೆ ಮೇಲೆ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ.
ಮಹಿಳೆಯೊಬ್ಬರು ಅನುಮಾನದಿಂದ ಮೊಬೈಲ್ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯ ಮೊಬೈಲ್ನಲ್ಲಿ ಮಹಿಳೆಯರ ಹಲವಾರು ವಿಡಿಯೋಗಳಿವೆ ಎನ್ನಲಾಗಿದ್ದು, ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್ಟಿಸಿ ಬಸ್ ಅನ್ನೇ ಕದ್ದ ಕಳ್ಳರು!
ಸಖತ್ ವೈರಲ್ ಆಗ್ತಿರೋ ಮದ್ವೆ ಫೋಟೋ ಹಿನ್ನೆಲೆ ಗೊತ್ತಾ? ಯುವತಿ ಹೇಳಿಕೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!