More

    ಸಾಹಿತಿ ಬಸವಣ್ಯಪ್ಪಗೆ ನುಡಿ ನಮನ

    ಸೊರಬ: ಬಸವಣ್ಯಪ್ಪ ಕಡಸೂರು ಅವರು ನಾಲ್ಕನೇ ತರಗತಿ ಓದಿದ್ದರೂ ಬಹುಭಾಷೆಗಳ ಮೇಲೆ ಹಿಡಿತದ ಜತೆಗೆ ಸಾಹಿತ್ಯಭಿರುಚಿ ಹೊಂದಿದ್ದರು ಎಂದು ಸಾಂಸ್ಕೃತಿಕ ಜಗಲಿ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.

    ತಾಲೂಕಿನ ಕಡಸೂರು ಗ್ರಾಮದಲ್ಲಿ ಸಾಹಿತಿ ಬಸವಣ್ಯಪ್ಪ ನಿಧನರಾದ ನಿಮಿತ್ತ ಭಾನುವಾರ ವಿವಿಧ ಸಂಘ-ಸಂಸ್ಥೆ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ನುಡಿ ನಮನದಲ್ಲಿ ಮಾತನಾಡಿ, ಬಸವಣ್ಯಪ್ಪ ಅವರು ಶಿವಗಾನ ಚಿಂತಾಮಣಿ, ಗುರುಗಾನ ಚಿಂತಾಮಣಿ, ಶ್ರೀ ಸತ್ಯನಾರಾಯಣ ವ್ರತ ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ದಕ್ಷಿಣ ಭಾರತ ಮಟ್ಟದ ಪ್ರಶಸ್ತಿ ದೊರೆತಿತ್ತು. ದೀವರ ಸಂಸ್ಕೃತಿ ಬಗ್ಗೆ ಕೃತಿ ಬರೆಯಲು ಮುಂದಾಗಿದ್ದರು ಎಂದು ಸ್ಮರಿಸಿದರು.
    ದಂತ ವೈದ್ಯ ಡಾ. ಎಚ್.ಇ.ಜ್ಞಾನೇಶ್ ಮಾತನಾಡಿ, ತಾಲೂಕಿನ ಹಿರಿಯ ಸಾಹಿತಿಗಳಾದ ಬಸವಣ್ಯಪ್ಪ ಅವರನ್ನು ಗುರುತಿಸುವ ಪ್ರಯತ್ನಗಳಾಗದಿರುವುದು ವಿಷಾದದ ಸಂಗತಿ. ಈಡಿಗ ಸಮಾಜದಲ್ಲಿ ಜನಿಸಿದ ಅವರು ವಿದ್ವತ್ ಪೂರ್ಣವಾದ ವ್ಯಕ್ತಿಯಾಗಿದ್ದರು ಎಂದರು.
    ಬಿಆರ್‌ಸಿ ಮಂಜಪ್ಪ ಹುಲ್ತಿಕೊಪ್ಪ ಮಾತನಾಡಿ, ಭಗವದ್ಗೀತೆ, ರಾಮಾಯಣ, ಮಹಾಭಾರತ ಕೃತಿಗಳ ವ್ಯಾಖ್ಯಾನ ಮಾಡುವ ಜತೆಗೆ ಸಾಹಿತ್ಯ ಕೃತಿಗಳನ್ನು ರಚಿಸಿ, ಸಂಗೀತ ಸೇವೆ ಸಲ್ಲಿಸಿದ ಬಸವಣ್ಯಪ್ಪ ಅವರು ಅನನ್ಯ ವ್ಯಕ್ತಿತ್ವದವರಾಗಿದ್ದರು ಎಂದು ಬಣ್ಣಿಸಿದರು.
    ಪ್ರಮುಖರಾದ ಶಿವಕುಮಾರ್ ಕಡಸೂರು, ಅರುಣ್ ಗೌಡ, ಎಸ್.ಎಂ.ನೀಲೇಶ್, ಕೇಶವಪ್ಪ, ಸದಾನಂದಗೌಡ, ಸತ್ಯನಾರಾಯಣ, ಕೆರೆಯಪ್ಪ, ರಾಮಪ್ಪ, ದಿನೇಶ್, ಗಣಪತಿ, ಶಿವಾನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts