More

    ಉಗ್ರ ಸಂಘಟನೆ ಐಸಿಸ್ ಬೆಂಬಲಿಗ, ಕೇರಳ ಮೂಲದ ಟೆಕ್ಕಿ ಸಾವು? ಈತ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ…

    ಕಾಸರಗೋಡು: ಲಿಬಿಯಾದಲ್ಲಿ ಜಾಗತಿಕ ಉಗ್ರ ಸಂಘಟನೆ ಐಸಿಸ್ ಪರ ಹೋರಾಟ ನಡೆಸಿ ಕೇರಳ ಮೂಲದ ಟೆಕ್ಕಿಯೊಬ್ಬ ಮೃತಪಟ್ಟಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಕೇಂದ್ರ ತನಿಖಾ ಏಜನ್ಸಿಗಳು ತನಿಖೆ ಆರಂಭಿಸಿದೆ.

    ಲಿಬಿಯಾದ ಸೀರತ್ ಎಂಬಲ್ಲಿ ಅಮೆರಿಕ ಸೇನೆಯ ಆಕ್ರಮಣಕ್ಕೆ ಈತ ಬಲಿಯಾದ ಮಾಹಿತಿ ಲಭಿಸಿದ್ದರೂ, ಖಚಿತವಾಗಿಲ್ಲ. ಕೇರಳ ಮೂಲದ ಈತ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ. ಈ ಮಧ್ಯೆ, ಐಸಿಸ್ ಏಜೆಂಟ್ ಓರ್ವನ ಸಂಪರ್ಕ ಪಡೆದು ಲಿಬಿಯಾಕ್ಕೆ ತೆರಳಿದ್ದ.

    ನಾಲ್ಕೈದು ವರ್ಷಗಳಲ್ಲಿ ಕಾಸರಗೋಡು ಜಿಲ್ಲೆಯ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಹಲವರು ಐಸಿಸ್ ಸೇರಿರುವುದನ್ನು ಖಚಿತಪಡಿಸಲಾಗಿತ್ತು. ಈ ಪೈಕಿ ಸಾಕಷ್ಟು ಮಂದಿ ಐಸಿಸ್ ಕೇಂದ್ರದಲ್ಲಿ ಅಮೆರಿಕದ ದಾಳಿಗೆ ಹತರಾಗಿದ್ದಾರೆ. ಕೇರಳ ಮೂಲದವನೆಂಬ ಅನುಮಾನ ಮೂಡಿದೆ.

    ಜೂಜು ಅಡ್ಡೆ ಮೇಲೆ ದಾಳಿ: ಕೋಲಾರ ಸೈಬರ್ ಕ್ರೈಂ ಇನ್​ಸ್ಪೆಕ್ಟರ್, ಕೆಎಎಸ್​ ಅಧಿಕಾರಿ, ಉಪನ್ಯಾಸಕ ಸೇರಿ ಹಲವರ ಬಂಧನ

    ಬೆಳಗಾವಿಯಲ್ಲಿ ಆಪರೇಷನ್ ಚಿರತೆ ಮತ್ತೆ ವಿಫಲ: ಕಣ್ಣೆದುರೇ ಹೋದರೂ ಬಲೆಗೆ ಬೀಳದ ಚಿರತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts