More

    ಅಧ್ಯಾಪನಕ್ಕೆ ಅಧ್ಯಯನ ಅಡಿಪಾಯ

    ಶಿಕಾರಿಪುರ: ಶಿಕ್ಷಕರಾಗುವವರಿಗೆ ಅಧ್ಯಯನದ ಅಗತ್ಯವಿದೆ. ಕನ್ನಡ ಸಾಹಿತ್ಯ ಮತ್ತು ಜನಪದ ಸಾಹಿತ್ಯ ನಿಮಗೆ ಹೆಚ್ಚಿನ ಸಹಕಾರಿ ಆಗಬಲ್ಲವು. ಅಧ್ಯಯನ ಅಧ್ಯಾಪನಕ್ಕೆ ಅಡಿಪಾಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶೇಖರ್ ಹೇಳಿದರು.

    ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಸುಗಂಧ ಸಾಂಸ್ಕೃತಿಕ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಲಿಕೆ ಎನ್ನುವುದು ಸಾಗರ ಇದ್ದಂತೆ. ಎಷ್ಟು ಕಲಿತರೂ ಸಾಲದು. ನಮಗೆ ವಿದ್ಯಾ ದಾಹ ಇದ್ದರೆ ನಮಗರಿವಿಲ್ಲದಂತೆ ಎತ್ತರಕ್ಕೆ ಬೆಳೆಯುತ್ತೇವೆ. ಈಗ ಕಲಿಯುವವರಾಗಿರುವ ನೀವು ನಾಳೆ ಕಲಿಸುವ ಸ್ಥಾನಕ್ಕೆ ಬರುತ್ತೀರಿ. ನಿಮ್ಮಲ್ಲಿರುವ ವಿದ್ಯೆಯೇ ನಿಮಗೆ ಆಗ ಗುರುವಾಗಿ ಶ್ರೇಷ್ಠ ವಿದ್ಯಾರ್ಥಿಗಳ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ ಎಂದರು.
    ಸೃಜನಾತ್ಮಕ ಚಿಂತನೆಗಳು ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡುತ್ತವೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ನಾವು ಹೆಚ್ಚಿನ ಗಮನಹರಿಸಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಹಿಂಜರಿಕೆಗಳನ್ನು ಬಿಟ್ಟರೆ, ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗುತ್ತವೆ. ನಾನು ಏನಾದರೂ ಮಾಡುತ್ತೇನೆ ಎಂಬ ಅಚಲವಾದ ಗುರಿಗಳಿದ್ದರೆ ಉತ್ತಮ ಪ್ರತಿಫಲ ಪಡೆಯಲು ಸಾಧ್ಯ. ಜೀವನದಲ್ಲಿ ಕನಸುಗಳನ್ನು ಕಾಣಿರಿ, ಮುಂದೆ ಏನನ್ನಾದರೂ ಆಗುತ್ತೀರಿ. ವಿದ್ಯಾರ್ಥಿಗಳಾದವರು ಬಾಗಿ ನಡೆದರೆ ಮುಂದೆ ಬೀಗಿ ನಡೆಯಬಹುದು ಎಂದು ಹೇಳಿದರು.
    ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ಆಗ ಗುರಿ ತಲುಪಲು ಸಾಧ್ಯವಾಗುತ್ತದೆ. ಕೇವಲ ಪರೀಕ್ಷೆಗಾಗಿ ಓದಬೇಡಿ, ಯಶಸ್ಸನ್ನು ಪಡೆಯಲು ನಿರಂತರ ಓದು ವಿದ್ಯಾರ್ಥಿಗಳಿಗೆ ಮುಖ್ಯ. ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಯಶಸ್ಸನ್ನು ಪಡೆಯಿರಿ ಎಂದು ಕಿವಿಮಾತು ಹೇಳಿದರು.
    ವಾರ್ಷಿಕ ಸಂಚಿಕೆಗಳಾದ ಸುಜ್ಞಾನ, ಐಕ್ಯೂಎಸಿ ವರದಿ ಹಾಗೂ ಭಾಷಾ ಸಂಘ, ಸಮಾಜ ವಿಜ್ಞಾನ, ವಿಜ್ಞಾನ ಸಂಘಗಳ ವಾರ್ಷಿಕ ಸಂಚಿಕೆಗಳನ್ನು ಬಿಡುಗಡೆಗೊಳಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಕೆ.ಕುಬೇರಪ್ಪ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts