More

    ಎಸ್ಸೆಸ್ಸೆಲ್ಸಿ ಫಲಿತಾಂಶದ ದಿನವೇ ಮನನೊಂದು ಸಾವಿನ ಮನೆಯ ಕದ ತಟ್ಟಿದ ವಿದ್ಯಾರ್ಥಿನಿ!

    ಬಾಗಲಕೋಟೆ: 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ಸಂಭವಿಸಿದೆ.

    ಐಶ್ವರ್ಯಾ ಸುಣಗಾರ(16) ಮೃತ ದುರ್ದೈವಿ. ಕಳೆದ ಜುಲೈ 29 ಮತ್ತು 31ರಂದು ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದ ಐಶ್ವರ್ಯಾ, ಹೆಚ್ಚು ಅಂಕ ನಿರೀಕ್ಷಿಸಿದ್ದಳು. ಆದರೆ, ಸೋಮವಾರ ಮಧ್ಯಾಹ್ನ ಫಲಿತಾಂಶ ಪ್ರಕಟಗೊಂಡಿದ್ದು, ನಿರೀಕ್ಷೆಯಷ್ಟು ಅಂಕ ಬಂದಿರಲಿಲ್ಲ. 625ಕ್ಕೆ 393 ಅಂಕ ಬಂದಿದ್ದು, ತುಂಬಾ ಕಡಿಮೆ ಆಯಿತು ಎಂದು ಮನನೊಂದ ವಿದ್ಯಾರ್ಥಿನಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆ ದಿನವೇ ನೇಣಿಗೆ ಕೊರಳೊಡ್ಡಿದ್ದಾಳೆ.

    ಐಶ್ವರ್ಯಾಳ ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ ನೆರವೇರಿತು. ಲೋಕಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಓರ್ವ ವಿದ್ಯಾರ್ಥಿ ಹೊರತಾಗಿ ಎಲ್ಲ ವಿದ್ಯಾರ್ಥಿಗಳೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್​ ಆಗಿರುವುದು ಈ ಷರ್ವದ ವಿಶೇಷ. ಓರ್ವ ವಿದ್ಯಾರ್ಥಿ ತನ್ನ ಬದಲಿಗೆ ಮತ್ತೊಬ್ಬರ ಕೈಯಲ್ಲಿ ಪರೀಕ್ಷೆ ಬರೆಸಿದ್ದರಿಂದ ಡಿಬಾರ್​ ಆಗಿದ್ದರು. ಹಾಗಾಗಿ ಆ ವಿದ್ಯಾರ್ಥಿ ಹೊರತಾಗಿ ಎಲ್ಲರನ್ನೂ ಪಾಸ್​ ಮಾಡಲಾಗಿದೆ. ಬಹುತೇಕ ಎಲ್ಲರೂ ಖುಷಿಯಾಗಿದ್ದಾರೆ. ಈ ಐಶ್ವರ್ಯಾ ಮಾತ್ರ ದುರಂತ ಅಂತ್ಯ ಕಂಡಿದ್ದು, ಕುಟುಂಬಸ್ಥ ಆಕ್ರಂದನ ಮುಗಿಲು ಮುಟ್ಟಿದೆ.

    ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

    ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

    ದೇವಿಯ ಪಾದುಕೆ ಮೇಲೆ ಗಂಟೆಗಟ್ಟಲೇ ಕುಳಿತು ಕೌತುಕ ಮೂಡಿಸಿದ ಕೌಜುಗ ಪಕ್ಷಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts