More

    ಅರಣ್ಯದಲ್ಲಿ ಅವಧಿ ಮೀರಿದ ತಿನಿಸುಗಳ ರಾಶಿ ಸುರಿದಿರುವುದಕ್ಕೆ ಆಕ್ರೋಶ; ರಾತ್ರೋ ರಾತ್ರಿ ಗ್ರಾಮಸ್ಥರ ಪ್ರತಿಭಟನೆ

    ಸಾಗರ: ಅವಧಿ ಮೀರಿದ ತಿಂಡಿ, ತಂಪು ಪಾನೀಯ ಇತರ ತ್ಯಾಜ್ಯಗಳನ್ನು ಅರಣ್ಯದಲ್ಲಿ ಎಸೆದು ಹೋಗಿರುವುದನ್ನು ಖಂಡಿಸಿ ಭಾನುವಾರ ತಡರಾತ್ರಿ ಸಾಗರ ತಾಲೂಕಿನ ಕುಂಟುಗೋಡಿನಲ್ಲಿ ಗ್ರಾಮಸ್ಥರು ರಸ್ತೆ ತಡೆದು, ಸುರಿಯುವ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.

    ಪರಿಸರ ಪ್ರೇಮಿ ಅಖಿಲೇಶ್ ಚಿಪ್ಳಿ ಮಾತನಾಡಿ, ಕೆಲ ದುಷ್ಕರ್ಮಿಗಳು ಆವಿನಹಳ್ಳಿ ರಸ್ತೆಯಲ್ಲಿ ಬಂಗಾರಮ್ಮನ ಕೆರೆಗೆ ಹೋಗುವ ಮಾರ್ಗದಲ್ಲಿ ರಾಶಿರಾಶಿ ಅವಧಿ ಮೀರಿದ ತಿಂಡಿ, ತಂಪು ಪಾನೀಯದ ಪ್ಯಾಕೆಟ್‌ಗಳನ್ನು ಎಸೆದು ಹೋಗಿದ್ದಾರೆ. ಇದರಿಂದಾಗಿ ಅರಣ್ಯದಿಂದ ಸುತ್ತುವರೆದಿರುವ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಶಾಲೆಗೆ ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಅವರು ಇದನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಗರಕ್ಕೆ ತಾಗಿಕೊಂಡಿರುವ ಎಲ್ಲಾ ಹಳ್ಳಿಗಳ ಕಾಡಿನಲ್ಲೂ ಇದೇ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಗ್ರಾಪಂ ಮತ್ತು ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಾಪಂ ಇಒ, ತ್ಯಾಜ್ಯವನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
    ಕುಂಟುಗೋಡು ಸೀತಾರಾಮ್, ಎಲ್.ವಿ.ಅಕ್ಷರ, ಕಬೀರ್, ಸುರೇಶ್ ಗೌಡ, ಜಯಪ್ರಕಾಶ್ ಗೋಳಿಕೊಪ್ಪ, ಸಂಜೀವ ಚಿಪ್ಳಿ, ಮಾಪು ಇಕ್ಕೇರಿ, ಟಿ.ಎಸ್.ಅರುಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts