More

    ಮನಸ್ಸಿಗೆ ನಾಟುತ್ತೆ ಹರ್ಷನ ಸಹೋದರಿ ಮಾತು: ಇದೆಲ್ಲಾ ಬೇಕಾ? ಕೈ ಮುಗಿದು ಬೇಡಿಕೊಳ್ಳುವೆ ಪ್ಲೀಸ್​ ಬಿಟ್ಬಿಡಿ…

    ಶಿವಮೊಗ್ಗ: ನೋಡಿ… ಅಲ್ಲಿ ನನ್ನ ತಮ್ಮ ಹೆಣವಾಗಿ ಬಿದ್ದಿದ್ದಾನೆ.. ಇದೆಲ್ಲ ಬೇಕಾ? ನಾನು ಎಲ್ಲರಿಗೂ ಬೇಡಿಕೋಳ್ತೇನೆ, ಮೊದ್ಲು ಅಪ್ಪ-ಅಮ್ಮಮನಿಗೆ ಒಳ್ಳೆಯ ಮಕ್ಕಳಾಗಿರಿ… ಹಿಂದು ಮತ್ತು ಮುಸ್ಲಿಂ ಸಮಾಜದ ಪ್ರತಿಯೊಬ್ಬ ಯುವಕರಲ್ಲೂ ನನ್ನ ಪ್ರಾರ್ಥನೆ ಇಷ್ಟೇ. ದಯವಿಟ್ಟು ಇಂಥದ್ದನ್ನೆಲ್ಲಾ ಬಿಟ್​ಬಿಡಿ. ಒಳ್ಳೆಯ ಮಕ್ಕಳಾಗಿರಿ… ಎಂದು ಮೃತ ಹರ್ಷನ ಅಕ್ಕ ಅಶ್ವಿನಿ ಕೈ ಮುಗಿದು ಬೇಡಿಕೊಂಡ ದೃಶ್ಯ ನೋಡಿದ್ರೆ ಕರುಳು ಚುರ್​ ಅನ್ನುತ್ತೆ.

    ಭಜರಂಗದಶ ಕಾರ್ಯಕರ್ತ ಹರ್ಷನ ಹತ್ಯೆ ಬಳಿಕ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಬಾಳಿ ಬದುಕಬೇಕಿದ್ದ ತಮ್ಮ ಚಿಕ್ಕ ವಯಸ್ಸಿಗೇ ದುರಂತ ಅಂತ್ಯ ಕಂಡದ್ದು ಸಹೋದರಿ ಅಶ್ವಿನಿಗೆ ಆಘಾತ ನೀಡಿದೆ. ತಮ್ಮನನ್ನು ಕಳೆದುಕೊಂಡ ನೋವಿನಲ್ಲೇ ಪತ್ರಕರ್ತರೊಂದಿಗೆ ಮಾತನಾಡಿದ ಅಶ್ವಿನಿ, ಸಹೋದರನ ಹೆಣ ಇರುವ ಜಾಗದ ಕಡೆ ಕೈ ತೋರಿಸುತ್ತಾ ನೋಡಿ ಅಲ್ಲಿ ಹೇಗೆ ಹೆಣವಾಗಿ ಮಲಗಿದ್ದಾನೆ. ಎಲ್ಲ ನನ್ನ ಅಣ್ಣ-ತಮ್ಮಂದಿರಲ್ಲಿ ಬೇಡಿಕೊಳ್ತೇನೆ. ಇಂಥದ್ದನ್ನೆಲ್ಲಾ ಬಿಟ್ಟುಬಿಡಿ. ಹಿಂದುಗಳಷ್ಟೇ ಅಲ್ಲ, ಮುಸ್ಲಿಂ ಸಹೋದರರಲ್ಲೂ ಪ್ರಾರ್ಥನೆ ಮಾಡಿಕೊಳ್ತೇನೆ. ಮೊದಲು ಅಪ್ಪ-ಅಮ್ಮಗೆ ಒಳ್ಳೆಯ ಮಕ್ಕಳಾಗಿ… ಎಂದರು. ಈ ಮಾತು ಹೇಳುವಾಗ ಅಶ್ವಿನಿ ಕಣ್ಣುಗಳಲ್ಲಿ ನೀರು ಇರಲಿಲ್ಲ. ಕಣ್ಣೀರು ಹಿಂಗಿ ಹೋಗಿದ್ದವು. ಸಹೋದರನನ್ನು ಕಳೆದುಕೊಂಡ ವೇದನೆ ಏನೆಂಬುದು ಮಾನವೀಯತೆ ಇರುವ ಪ್ರತಿಯೊಬ್ಬರಿಗೂ ಅವರ ಮುಖ ನೋಡಿದರೆ ಗೊತ್ತಾಗುತ್ತಿತ್ತು. ಅವರು ಹೆಚ್ಚು ಮಾತನಾಡಿಲ್ಲ. ಆಡಿರುವ ಎರಡೇ ಮಾತುಗಳು. ಆದರೆ ಅವರು ಹೇಳಿರುವ ಮಾತುಗಳು ಮನಸ್ಸಿಗೆ ನಾಟುವಂತಿದೆ.

    ಆದರೆ ಹರ್ಷನ ತಾಯಿಯ ಪ್ರತಿಕ್ರಿಯೆ ಅಶ್ವಿನಿ ಹೇಳಿಕೆಗೆ ತದ್ವಿರುದ್ಧವಾಗಿತ್ತು. ನಾನು ನನ್ನ ಮಗ ಹರ್ಷನನ್ನು ಭಾರತಾಂಬೆಗೆ ಅರ್ಪಿಸಿದ್ದೇನೆ. ನಿನ್ನೆವರೆಗೆ ನನ್ನ ಮಗ ಯಾರು? ಎಂಬುದು ಜನರಿಗೆ ಗೊತ್ತಿರಲಿಲ್ಲ. ಆದರೆ ಇಂದು ಇಡೀ ದೇಶಕ್ಕೆ ಹರ್ಷ ಯಾರು ಎಂಬುದು ಗೊತ್ತಾಗಿದೆ. ಮಗನನ್ನು ಕಳೆದುಕೊಂಡ ನೋವಿದ್ದರೂ ಅವನ ಬಗ್ಗೆ ಹೆಮ್ಮೆ ಇದೆ. ಯಾವ ತಾಯಿಗೂ ಇಂಥ ಸ್ಥಿತಿ ಬಾರದಿರಲಿ ಎಂದು ಹೇಳಿದ್ದಾರೆ. ಅವನು ನನ್ನ ಬಳಿ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಇದೀಗ ಮನೆಯ ಆಧಾರವಾಗಿದ್ದ ಮಗನೇ ಇಲ್ಲವಾಗಿರುವುದು ನೋವು ಉಂಟು ಮಾಡಿದೆ ಎನ್ನುತ್ತಲೇ ಗದ್ಗದಿತರಾದರು.

    https://www.vijayavani.net/a-radio-jocky-rj-rachana-is-no-more/

    ‘ಶಿವಮೊಗ್ಗದ ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋದ… ಹುಡುಗಿ ಜತೆ ಹೋದ… ಕೇಸ್ ಇಲ್ಲ’

    ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಮೇಲೂ ದಾಖಲಾಗಿತ್ತು 4 ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts