More

    ಸೇವಾಯೋಜನೆಯಿಂದ ಸೌಹಾರ್ದ ಭಾವ, ಪ್ರಾಧ್ಯಾಪಕ ಡಾ.ಶೇಷಪ್ಪ ಅಮೀನ್ ಕೆ. ಅಭಿಪ್ರಾಯ

    ಮಂಗಳೂರು: ರಾಷ್ಟೀಯ ಸೇವಾ ಯೋಜನೆ ಎಂದರೆ ಸೇವೆ ಎಂದರ್ಥ. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸೌಹಾರ್ದ ಭಾವನೆ ಕಲಿಯಬಹುದು ಎಂದು ಮುಡಿಪು ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಮಾಜಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಶೇಷಪ್ಪ ಅಮೀನ್ ಕೆ. ಹೇಳಿದರು.

    ಮಣ್ಣಗುಡ್ಡೆ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2023-24ನೇ ಸಾಲಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಮುದಾಯದ ಅಭಿವೃದ್ಧಿ ಶ್ರಮಕ್ಕೆ ಹೆಚ್ಚು ಆದ್ಯತೆ ನೀಡಬೇಕು. ನಾಯಕತ್ವ ಗುಣ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ನೆಸ್ಸೆಸ್ ಸಹಕರಿಸುತದೆ. ಗ್ರಾಮಗಳು ಮತ್ತು ಸಮಾಜವನ್ನು ಅರಿತುಕೊಂಡು ಅಭಿವೃದ್ಧಿ ಮಾಡುವುದು ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ದೇಶ ಎಂದರು.

    ಕಾಲೇಜು ಸಂಚಾಲಕ ವಸಂತ ಕಾರಂದೂರ್ ಶುಭ ಹಾರೈಸಿದರು. ಪ್ರಾಂಶುಪಾಲೆ ಡಾ.ಆಶಾಲತಾ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಬಾಲಚಂದ್ರ ಸ್ವಾಗತಿಸಿ, ರಕ್ಷಿತಾ ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

    ರಾಷ್ಟ್ರೀಯ ಸೇವಾ ಯೋಜನೆಯಿಂದ ಉತ್ತಮ ಜೀವನ ನಿರ್ವಹಣೆ ಸಾಧ್ಯ. ಮಹಾತ್ಮ ಗಾಂಧಿಯವರು ಸ್ವಚ್ಛತೆಗೆ ಪ್ರಮುಖ ಆದ್ಯತೆ ಕೊಟ್ಟವರು. ಅದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಲ್ಲಿ ಎನ್ನೆಸ್ಸೆಸ್ ಪ್ರಮುಖ ಪಾತ್ರ ವಹಿಸುತ್ತದೆ. ಸಮಯ ಪಾಲನೆ, ಶಿಸ್ತು, ಮೌಲ್ಯಯುತ ಜೀವನ ನಡೆಸುವಲ್ಲಿ ಎನ್ನೆಸ್ಸೆಸ್ ಪ್ರಮುಖ ಪಾತ್ರ ವಹಿಸುತ್ತದೆ.

    ಡಾ.ಆಶಾಲತಾ ಸುವರ್ಣ

    ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಪ್ರಾಂಶುಪಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts