More

    ಮುಸ್ಲಿಮರ ಸಮಾಧಿಯ ಮೇಲೆ ರಾಮ ಮಂದಿರ ಕಟ್ಟುತ್ತೀರಾ?: ಮಂದಿರ ಟ್ರಸ್ಟ್​ಗೆ ಬರೆದ ಪತ್ರದಲ್ಲಿ ಮುಸ್ಲಿಂ ವಕೀಲ ಹೀಗೇಕೆ ಪ್ರಶ್ನಿಸಿದರು!

    ಅಯೋಧ್ಯೆ: ಶ್ರೀರಾಮ ಮಂದಿರದ ಜಮೀನು ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದ್ದರೂ, ಒಂದಿಲ್ಲೊಂದು ಅಡ್ಡಿ ಆತಂಕ ಮುಂದುವರಿದೇ ಇದೆ. ಕೆಲವು ಪ್ರಚೋದಿಸುವ ಕೆಲಸವೂ ನಡೆದೇ ಇದೆ. ಇಂತಹ ಪ್ರಯತ್ನಕ್ಕೆ ಈಗ ಮುಸ್ಲಿಂ ವಕೀಲರೊಬ್ಬರು ಮುಂದಾಗಿದ್ದು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ಗೆ ಪತ್ರ ಬರೆದು ಮುಸ್ಲಿಮರ ಸಮಾಧಿಯ ಮೇಲೆ ರಾಮನ ದೇವಸ್ಥಾನ ಕಟ್ಟುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಪ್ರಚೋದಿಸುವಂತಹ ವಿಷಯವನ್ನು ಸೌಮ್ಯಭಾವದಲ್ಲಿ ಕೇಳುವ ಪ್ರಯತ್ನವನ್ನು ಅವರು ಮಾಡಿದ್ದಾರೆ.

    ಟ್ರಸ್ಟ್​​ನ 10 ವಿಶ್ವಸ್ಥರಿಗೆ ಪತ್ರ ಬರೆದಿರುವ ಶಂಶಾದ್, ಅಯೋಧ್ಯೆಯಲ್ಲಿ ನೆಲಸಮವಾಗಿರುವ ಬಾಬರಿ ಮಸೀದಿ ಸುತ್ತ ಮುಸ್ಲಿಮರ ಸಮಾಧಿ ಇದೆ. 1885ರ ಗಲಭೆ ವೇಳೆ ಮೃತಪಟ್ಟ 75 ಮುಸ್ಲಿಮರ ಮೃತದೇಹವನ್ನು ಮಸೀದಿ ಸುತ್ತ ಸಮಾಧಿ ಮಾಡಲಾಗಿದೆ. ಈ ಪ್ರದೇಶವನ್ನು ಗಂಜ್ ಶಾಹೀದಾನ್ ಎಂದು ಕರೆಯಲಾಗುತ್ತದೆ. ಈ ವಿಷಯ ಫೈಜಾಬಾದ್ ಗಜೆಟಿಯರ್​ನಲ್ಲೂ ಉಲ್ಲೇಖಿಸಲ್ಪಟ್ಟಿದೆ ಎಂಬ ಅಂಶದತ್ತ ಗಮನಸೆಳೆದಿದ್ದಾರೆ.

    ಅಷ್ಟೇ ಅಲ್ಲ, ಶ್ರೀ ರಾಮಚಂದ್ರನ ಬೃಹತ್ ಭವ್ಯವಾದ ಮಂದಿರದ ನಿರ್ಮಾಣಕ್ಕೆ ಮುಸ್ಲಿಮರ ಸ್ಮಶಾನ ಬಳಸಬಾರದು ಎಂಬ ಅಂಶವನ್ನು ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಅದು ಈ ವಿಷಯದಲ್ಲಿ ‘ಧರ್ಮ’ವನ್ನು ಉಲ್ಲಂಘಿಸಿದೆ. ಸನಾತನ ಧರ್ಮದ ಧರ್ಮಗ್ರಂಥಗಳ ದೃಷ್ಟಿಯಿಂದ ಹೇಳುವುದಾದರೆ, ಮುಸ್ಲಿಮರ ಸ್ಮಶಾನದಲ್ಲಿ ಭಗವಾನ್ ಶ್ರೀರಾಮಚಂದ್ರನ ಮಂದಿರ ನಿರ್ಮಾಣ ಮಾಡಬಹುದೇ ಎಂಬುದನ್ನು ನಿರ್ಣಯಿಸುವ ಹೊಣೆಗಾರಿಕೆ ಈಗ ಟ್ರಸ್ಟ್ ಮೇಲಿದೆ. ಶ್ರೀರಾಮನ ಮೇಲಿನ ಭಯ, ಭಕ್ತಿ ಗೌರವಗಳ ಕಾರಣ ನಾನು ನಿಮ್ಮಲ್ಲಿ ಮನವಿ ಮಾಡುವುದೇನೆಂದರೆ, ನೆಲಸಮವಾಗಿರುವ ಮಸೀದಿಯ ಸುತ್ತ ಇರುವ ನಾಲ್ಕು ಐದು ಎಕರೆ ಸ್ಮಶಾನದ ಜಾಗವನ್ನು ಮುಸ್ಲಿಮರಿಗೆ ಬಿಟ್ಟುಕೊಡಿ ಎಂದು ಶಂಶಾದ್ ಪತ್ರದಲ್ಲಿ ವಿವರಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts