ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲೇ ರೌಡಿಶೀಟರ್ ಹಂದಿ ಅಣ್ಣಿಯನ್ನು ಮಾರಕಾಸ್ತ್ರಗಳಿಂದ ಬರ್ಬರ ಹತ್ಯೆ ಮಾಡಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಹಂದಿ ಅಣ್ಣಿಯ ಶವ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ವಿನೋಬನಗರದ ಪೊಲೀಸ್ ಚೌಕಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂಭಾಗ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಹಂದಿ ಅಣ್ಣಿಯನ್ನು 6 ಜನರ ತಂಡ ಅಟ್ಟಾಡಿಸಿಕೊಂಡು ಲಾಂಗು-ಮಚ್ಚುಗಳಿಂದ ಮನಸ್ಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ. ವಿನೋಬನಗರ ಪೊಲೀಸ್ ಠಾಣೆ ಸಮೀಪವೇ ಕೊಲೆ ನಡೆದಿದ್ದು, ಜನರಲ್ಲಿ ಭಯ ಹುಟ್ಟಿಸಿದೆ.
ಲವ-ಕುಶ ಹತ್ಯೆಯ ಪ್ರಮುಖ ಆರೋಪಿ ಹಂದಿ ಅಣ್ಣಿ: ಸಾಗರ ರಸ್ತೆಯಲ್ಲಿ 2017ರಲ್ಲಿ ಹಾಡಹಗಲೇ ನಡೆದಿದ್ದ ರೌಡಿಶೀಟರ್‌ಗಳಾದ ಲವ-ಕುಶನ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಹಂದಿ ಅಣ್ಣಿ. ಕೆಲ ವರ್ಷ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಈತನ ಮೇಲೆ 8 ಕೊಲೆ ಪ್ರಕರಣಗಳಿದ್ದು, ಸಮಾಜಘಾತುಕ ಕೃತ್ಯಗಳನ್ನು ಮುಂದುವರಿಸಿದ್ದ. ಸಾವರ್‌ಲೈನ್ ರಸ್ತೆಯಲ್ಲಿ ವಾಸವಿದ್ದ. ಹಳೇ ವೈಷ್ಯಮದ ಹಿನ್ನೆಲೆ ಹಂದಿ ಅಣ್ಣಿಯನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ‘
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಮೆಗ್ಗಾನ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ
ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್ನಲ್ಲಿದೆ ಮಹತ್ವದ ಸಾಕ್ಷ್ಯ