More

    ಇದೇನು ನದಿಯೋ ಅಥವಾ ರಕ್ತದೋಕಳಿಯೋ? ಗಾಬರಿಯಿಂದ ಕಂಗಾಲಾದ ಸ್ಥಳೀಯರು

    ಮಾಸ್ಕೊ: ನಾವು ನಿತ್ಯ ನೋಡುವ ನದಿಯೊಂದು ಇದ್ದಕ್ಕಿದ್ದಂತೆ ರಕ್ತವಾಗಿ ಹರಿಯಲಾರಂಭಿಸಿದರೆ? ಇಂತಹ ಒಂದು ಸನ್ನಿವೇಶವನ್ನು ನೆನಪಿಸಿಕೊಂಡರೂ ಭಯವಾಗುತ್ತದೆ. ಇದೀಗ ಅದೇ ಭಯದಲ್ಲಿದ್ದಾರೆ ರಷ್ಯಾದ ಇಸ್ಕಿಟಿಮ್ಕಾ ನದಿಯ ಬಳಿ ಬದುಕುವವರು.

    ಇದನ್ನೂ ಓದಿ: ಕೆರೆ ಉಳಿಸಲು ಮೌನ ಪ್ರತಿಭಟನೆ, ಹೊಸಕೋಟೆ ದೊಡ್ಡ ಅಮಾನಿ ಕೆರೆ ಬಳಿ ಪರಿಸರ ಪ್ರೇಮಿಗಳಿಂದ ಹೋರಾಟ

    ರಷ್ಯಾದ ಇಸ್ಕಿಟಿಮ್ಕಾ ನದಿ ಇದ್ದಕ್ಕಿದ್ದಂತೆ ತನ್ನ ಬಣ್ಣವನ್ನೇ ಬದಲಾಯಿಸಿಕೊಂಡಿದೆ. ಇಲ್ಲಿನ ನೀರು ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗಿದೆ. ನೋಡಿದವರೆಲ್ಲರೂ ಇದೇನು ನದಿಯೋ ಅಥವಾ ರಕ್ತದೋಕಳಿಯೋ ಎನ್ನುವ ಗೊಂದಲಕ್ಕೀಡಾಗುವಂತಾಗಿದೆ. ನದಿಯಲ್ಲಿದ್ದ ಬಾತುಕೋಳಿಗಳೆಲ್ಲವೂ ಕೆಂಪು ನೀರಿಗೆ ಹೆದರಿ ದಡವೇರಿ ಕುಳಿತುಬಿಟ್ಟಿವೆ.

    ಇದನ್ನೂ ಓದಿ: ಮದುವೆಯಾಗುತ್ತಿದ್ದಂತೆಯೇ ಸೇವೆಗೆ ತೆರಳಿದ್ದ ಯೋಧ ಉಗ್ರರ ಗುಂಡಿಗೆ ಹುತಾತ್ಮ!

    ಪೂರ್ತಿ ನದಿ ಬಣ್ಣ ಬದಲಾವಣೆಯಾಗುವುದಕ್ಕೆ ಜಲ ಮಾಲಿನ್ಯವೇ ಕಾರಣವೆನ್ನಲಾಗಿದೆ. ಈ ನದಿಗೆ ಕೊಳಚೆ ನೀರನ್ನು ಬಿಡಲಾಗುತ್ತಿದೆ. ಅದು ಕೆಲ ದಿನಗಳಿಂದ ಯಾವುದೋ ಅಡೆತಡೆಗೆ ಸಿಕ್ಕು ನಿಂತುಬಿಟ್ಟಿದೆ. ಇದರಿಂದಾಗಿ ನೀರು ಬಣ್ಣ ಬದಲಾಯಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಈ ಹಿಂದೆ ರಷ್ಯಾದ ನರೋ ಫೋಮಿನ್ಸ್ಕ್​ ನದಿಯೂ ಕೆಂಪು ಬಣ್ಣಕ್ಕೆ ತಿರುಗಿತ್ತು. (ಏಜೆನ್ಸೀಸ್​)

    ಪತಿಯ ಪ್ರೇಯಸಿಗಾಗಿ 3 ವರ್ಷದ ದಾಂಪತ್ಯವನ್ನೇ ತ್ಯಾಗ ಮಾಡಿದ ಪತ್ನಿ! ಎಲ್ಲರಿಗೂ ಸಿಗುವುದಿಲ್ಲ ಇಂತಹ ಹೆಂಡತಿ

    ‘ಓದದೆ ನಾ ಬದುಕಲಾರೆ’ ಕರುಣಾಜನಕವಾಗಿದೆ ಐಎಎಸ್​ ಕನಸ ಕಂಡ ವಿದ್ಯಾರ್ಥಿನಿ ಆತ್ಮಹತ್ಯೆ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts