More

    ಹೆಚ್ಚುತ್ತಿದೆ ಸಾಂಕ್ರಾಮಿಕ ರೋಗ

    ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ, ತಂಪು ವಾತಾವರಣದಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದೆ. ಬೇಸಿಗೆ ಬಿಸಿಲಿನ ತಾಪಮಾನದ ಬಳಿಕ ಆರಂಭಗೊಂಡಿರುವ ಮಳೆ ಅಬ್ಬರದಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿವೆ.

    ಸತತ ಮಳೆಯಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ನಗರ ಪ್ರದೇಶವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಇದೆ ಪರಿಸ್ಥಿತಿ ಇದೆ.

    2019ರಲ್ಲಿ 250 ಜನರಲ್ಲಿ ಡೆಂಘ, 121 ಜನರಲ್ಲಿ ಚಿಕೂನ್ ಗುನ್ಯಾ ಹಾಗೂ 2020ರಲ್ಲಿ 36 ಜನರಲ್ಲಿ ಡೆಂಘ, 17 ಜನರಲ್ಲಿ ಚಿಕೂನ್​ಗುನ್ಯಾ, 8 ಜನರಲ್ಲಿ ಮಲೇರಿಯಾ ಪತ್ತೆಯಾಗಿತ್ತು. 2022ರ ಜನೆವರಿಯಿಂದ ಜು.27ರವರೆಗೆ 89 ಜನರಲ್ಲಿ ಡೆಂಘ, 11 ಜನರಲ್ಲಿ ಚಿಕೂನ್​ಗುನ್ಯಾ ಹಾಗೂ ಒಬ್ಬರಲ್ಲಿ ಮಲೇರಿಯಾ ಪತ್ತೆಯಾಗಿದೆ. ಮಳೆಗಾಲ ಆರಂಭವಾದ ಜೂನ್ ಒಂದೇ ತಿಂಗಳಲ್ಲಿಯೇ 43 ಜನರಲ್ಲಿ ಡೆಂಘ, 11 ಜನರಲ್ಲಿ ಚಿಕೂನ್​ಗುನ್ಯಾ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಈಗಾಗಲೇ ಗ್ರಾಮೀಣ ಭಾಗದಲ್ಲಿ ಸೀಜನ್ ಜ್ವರದ ಕಾಟ ಶುರುವಾಗಿದ್ದು, ಮೈ-ಕೈ ನೋವಿನ ಬಾಧೆಯಿಂದ ಬಳಲುತ್ತಿರುವ ಹಳ್ಳಿಗರನ್ನು ಸಾಂಕ್ರಾಮಿಕ ರೋಗಗಳು ಸದ್ದಿಲ್ಲದೆ ಪೀಡಿಸುತ್ತಿವೆ. ಜುಲೈನ ಮೊದಲ 15 ದಿನಗಳಲ್ಲೇ ಡೆಂಘ, ಚಿಕೂನ್​ಗುನ್ಯಾ ಸಂಖ್ಯೆ ಏರಿದೆ. ಹೀಗಾಗಿ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ಮಕ್ಕಳಲ್ಲೂ ಜ್ವರ, ವಾಂತಿ-ಭೇದಿ ಕಂಡು ಬಂದಿವೆ.

    ಡೆಂಘ ಹಾವಳಿ: 2018ರಲ್ಲಿ 112, 2019ರಲ್ಲಿ 250, 2020 ರಲ್ಲಿ 36 ಜನರಲ್ಲಿ ಡೆಂಘ ರೋಗ ದೃಢಪಟ್ಟಿತ್ತು. ಈ ಪೈಕಿ ಲಾಕ್​ಡೌನ್ ಸಮಯದಲ್ಲೇ (2020ರಲ್ಲಿ)

    ಡೆಂಘಗೆ ಹುಬ್ಬಳ್ಳಿಯಲ್ಲಿ ಒಬ್ಬರು ಮೃತಪಟ್ಟಿದ್ದರು. ಈ ವರ್ಷದ ಮೊದಲ 6 ತಿಂಗಳಲ್ಲಿ 579 ಜನರಲ್ಲಿ ಡೆಂಘ ರೋಗ ಲಕ್ಷಣ ಕಾಣಿಸಿದ್ದು, ತಪಾಸಣೆಗೆ ಒಳಪಡಿಸಿದಾಗ 89 ಜನರಲ್ಲಿ ಪತ್ತೆಯಾಗಿದೆ.

    ಚಿಕೂನ್​ಗುನ್ಯಾ: 2018ರಲ್ಲಿ 85, 2019ರಲ್ಲಿ 121, 2020ರಲ್ಲಿ 17 ಜನರಲ್ಲಿ ಚಿಕೂನ್​ಗುನ್ಯಾ ಕಾಣಿಸಿಕೊಂಡು ತೊಂದರೆ ಉಂಟು ಮಾಡಿತ್ತು. ಇದೀಗ ಆರು ತಿಂಗಳಲ್ಲಿ ರೋಗ ಲಕ್ಷಣವುಳ್ಳ 249 ಜನರನ್ನು ತಪಾಸಣೆಗೆ ಒಳಪಡಿಸಿದಾಗ 11 ಜನರಲ್ಲಿ ಧೃಡಪಟ್ಟಿದೆ. ಧಾರವಾಡ ಗ್ರಾಮೀಣದಲ್ಲಿ 5, ಹುಬ್ಬಳ್ಳಿ ಗ್ರಾಮೀಣದಲ್ಲಿ 2, ಕುಂದಗೋಳದಲ್ಲಿ 1, ಧಾರವಾಡ ಶಹರ ವ್ಯಾಪ್ತಿಯಲ್ಲಿ ಇಬ್ಬರಲ್ಲಿ ದೃಢಪಟ್ಟಿದೆ.

    ಮಲೇರಿಯಾ-ಮಿದುಳು ಜ್ವರ: 2018ರಲ್ಲಿ 25, 2019ರಲ್ಲಿ 17, 2020ರಲ್ಲಿ 8 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ ರೋಗವು, ಈ ವರ್ಷದ ಆರಂಭದಲ್ಲಿ ಕುಂದಗೋಳದಲ್ಲಿ ಒಬ್ಬರಲ್ಲಿ ಪತ್ತೆಯಾಗಿದ್ದರೆ, ಮೆದುಳು ಜ್ವರ ಲಕ್ಷಣಗಳು ಕಂಡು ಬಂದರೂ ತಪಾಸಣೆಯಲ್ಲಿ ಧೃಡಪಟ್ಟಿಲ್ಲ.

    ಡೆಂಘೆ, ಮಲೇರಿಯಾ, ಚಿಕೂನ್​ಗುನ್ಯಾ ಕಾಯಿಲೆ ತಡೆಗೆ ಆರೋಗ್ಯ ಇಲಾಖೆಯಿಂದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ತಗ್ಗು ಪ್ರದೇಶ, ಮನೆ ಪಕ್ಕದಲ್ಲಿ ನಿಂತ ನೀರಿನಿಂದ ಉತ್ಪತ್ತಿಯಾದ ಸೊಳ್ಳೆಗಳಿಂದ ಡೆಂಘೆ ಬರುತ್ತದೆ. ರೋಗ ಬರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಪಂಗಳ ಜತೆಗೂಡಿ ಫಾಗಿಂಗ್ ಸಹ ಮಾಡಲಾಗುತ್ತಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಸದಾ ಸಿದ್ಧರಾಗಿದ್ದೇವೆ.

    | ಡಾ. ಬಿ.ಸಿ. ಕರಿಗೌಡರ ಡಿಎಚ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts