More

    ಹಾಡಿಯಲ್ಲಿ ಶೀಘ್ರ ಕ್ಯಾಬಿನೆಟ್ ಸಭೆ

    ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಗಿರಿಜನ ಹಾಡಿಯಲ್ಲಿ ಶೀಘ್ರದಲ್ಲೇ ಮಿನಿ ಕ್ಯಾಬಿನೆಟ್ ಸಭೆ ನಡೆಸಿ ಜನರ ಮತ್ತು ಮೂಲಸೌಕರ್ಯದ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರ ಭರವಸೆ ನೀಡಿದರು.

    ಇತ್ತೀಚೆಗೆ ಬೆಂಗಳೂರಿನ ಸಚಿವರ ಕಾರ್ಯಾಲಯಕ್ಕೆ ತಾಲೂಕು ಒಡೆಯರ ಸಂಘಗಳ ಒಕ್ಕೂಟ ಮತ್ತು ಬುಡಕಟ್ಟು ಕೃಷಿಕರ ಸಂಘದ ನಿಯೋಗ ಭೇಟಿ ಮಾಡಿ ತಾಲೂಕಿನ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮನವರಿಕೆ ಮಾಡಿದ ಸಂದರ್ಭ ಮಾತನಾಡಿದರು.

    ಸಮಾಜದ ಕಟ್ಟ ಕಡೆಯ ಸಮುದಾಯದ ಜನರಿಗೆ ಸವಲತ್ತು ಕಲ್ಪಿಸಿ ಮುಖ್ಯವಾಹಿನಿಗೆ ತರುವುದು ನಮ್ಮ ಸರ್ಕಾರದ ಗುರಿ. ಅದಕ್ಕಾಗಿ ತಾಲೂಕಿನಲ್ಲಿ ಮಿನಿ ಕ್ಯಾಬಿನೆಟ್ ಸಭೆ ನಡೆಸಿ ಸಿಗಬೇಕಾಗಿದ್ದ ನ್ಯಾಯಯುತ ಹಕ್ಕುಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.

    ಹಾಡಿಗಳಿಗೆ ಮೂಲಸೌಕರ್ಯ ಮತ್ತು ಅರಣ್ಯ ಹಕ್ಕು ಕಾಯ್ದೆ- 2006ರ ಪ್ರೊ.ಮುಜಾಫರ್ ಅಸಾದಿ ಅವರ ವರದಿಯ ಅನ್ವಯ, ಸುಪ್ರೀಂ ಕೋರ್ಟ್ ಆದೇಶದಂತೆ ಪುನರ್ವಸತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ 3 ಬಾರಿ ತಾಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಮುಖಂಡರು ದೂರಿದರು.

    ಒಡೆಯನ ಸಂಘದ ತಾಲೂಕು ಗೌರವ ಅಧ್ಯಕ್ಷ ತಮ್ಮಯ್ಯ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ವಿಜಯ್‌ಕುಮಾರ್, ಕಾರ್ಯದರ್ಶಿ ಡಿ.ಎಂ.ಬಸವರಾಜು, ಸ್ವಾಮಿ, ರುದ್ರಪ್ಪ, ಸುರೇಶ್, ಚೆನ್ನಬಸವ, ಪೀಪಲ್ ಟೀ ಸಂಸ್ಥೆ ರಶೀದ್, ವಿವೇಕಾನಂದ ಸಂಸ್ಥೆಯ ರಾಜು, ಹೀವನ್‌ರಾಜ್, ಚಂದ್ರು, ಕೆಂಚ, ಬೊಮ್ಮಿ, ಕಮಲಮ್ಮ, ದೇವಮ್ಮ, ಕಾಳಪ್ಪ, ಜಯಲಲಿತಾ, ಮಹದೇವ, ವೆಂಕಟೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts