More

    ‘ಪುನೀತ ನಮನ’ಕ್ಕೆ ಕ್ಷಣಗಣನೆ: ಯಾರೆಲ್ಲಾ ಬರ್ತಾರೆ, ಕಾರ್ಯಕ್ರಮ ಹೇಗಿರಲಿದೆ ಎಂಬುದರ ಮಾಹಿತಿ ಇಲ್ಲಿದೆ

    ಬೆಂಗಳೂರು: ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಇಂದು (ನ.16) ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೂ ಅರಮನೆ ಮೈದಾನದಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಭಾರತದ ಸಿನಿ ದಿಗ್ಗಜರು ಸೇರಿದಂತೆ 2 ಸಾವಿರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿರುವ ಈ ಕಾರ್ಯಕ್ರಮ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದ್ದು, ಪಾಸ್ ಇರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇದೆ. ಮಧ್ಯಾಹ್ನ 2.30ಕ್ಕೆ ಗೀತನಮನ ಕಾರ್ಯಕ್ರಮ ಶುರುವಾಗಲಿದೆ. ಶ್ರೀಧರ್ ಸಾಗರ್ (ಸಾಕ್ಸೋಫೋನ್) ಅವರಿಂದ ಸಂಗೀತ ಶುರುವಾಗುತ್ತೆ. ನಾಗೇಂದ್ರ ಪ್ರಸಾದ್ ರಚಿಸಿದ ಹಾಡು ಮೊಳಗಲಿದೆ. ಗುರುಕಿರಣ್, ವಿಜಯ್ ಪ್ರಕಾಶ್ ,ರಾಜೇಶ್ ಕೃಷ್ಣನ್ ಸೇರಿದಂತೆ ಕನ್ನಡದ ಎಲ್ಲ ಪ್ರಮುಖ ಗಾಯಕರು ಹಾಡಲಿದ್ದಾರೆ. ಮಧ್ಯಾಹ್ನ 3 ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ಪುನೀತ್ ಅವರ ಸಿನಿಮಾ ಜರ್ನಿಯ ತುಣುಕು- ಟ್ರಿಬ್ಯೂಟ್ ವಿಡಿಯೋ ಇರುತ್ತೆ.

    ಪುನೀತ ನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಇಡೀ ಚಿತ್ರರಂಗ ಸ್ವಯಂಪ್ರೇರಿತವಾಗಿ ಶೂಟಿಂಗ್​ಗಳಿಗೆ ಬ್ರೇಕ್ ಹಾಕಿದೆ. ಚಿತ್ರ ಪ್ರದರ್ಶನ, ಪ್ರೀ ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯಲಿವೆ. 2000 ಜನರಿಗೆ ಊಟ ಮತ್ತು ಆಸನ ವ್ಯವಸ್ಥೆ ಮಾಡಲಾಗಿದ್ದು, ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿದೆ.

    ಆಂದ್ರ, ತಮಿಳು, ಕೇರಳ, ತೆಲಂಗಾಣ ಫಿಲ್ಮ್ ಚೇಂಬರ್ ಕೂಡ ಪುನೀತ ನಮನ ಕಾರ್ಯಕ್ರಮಲ್ಲಿ ಭಾಗಿಯಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ನಟ-ನಟಿಯರು ಆಗಮಿಸಲಿದ್ದಾರೆ. ಜ್ಯೂ ಎನ್​ಟಿಆರ್, ಅಲ್ಲು ಅರ್ಜುನ್, ಮೋಹನ್ ಲಾಲ್​, ಶರತ್ ಕುಮಾರ್, ಪ್ರಕಾಶ್ ರಾಜ್, ವಿಶಾಲ್, ನಾಗಾರ್ಜುನ್, ಶ್ರೀಕಾಂತ್, ಶರತ್ ಕುಮಾರ್, ಪ್ರಭುದೇವ… ಸೇರಿದಂತೆ ಹಲವು ಸಿನಿದಿಗ್ಗಜರು ಆಗಮಿಸಲಿದ್ದಾರೆ. ಬಹುತೇಕರು ಮೊದಲು ಪುನೀತ್ ಸಮಾಧಿಗೆ ಭೇಟಿ ಕೊಟ್ಟ ನಂತರ ಅರಮನೆ ಮೈದಾನಕ್ಕೆ ತೆರಳಲಿದ್ದಾರೆ.

    ಅಪ್ಪು ಸಾವು ನ್ಯಾಯವೇ? ದೇವಿಗೆ ಅಭಿಮಾನಿ ಬರೆದ ಈ ಪತ್ರ ಓದುತ್ತಿದ್ದರೆ ಕಣ್ಣೀರಿನ ಜತೆಗೆ ಸಿಟ್ಟು ಬರುತ್ತೆ…

    ಪುನೀತ್​ ಆತ್ಮದ ಜತೆ ಮಾತಾಡಿದ್ದಾಗಿ ವಿಡಿಯೋ ಹಂಚಿಕೊಂಡ ಚಾರ್ಲಿ: ಆ ದೃಶ್ಯ ನೋಡುತ್ತಲೇ ಅಪ್ಪು ಅಭಿಮಾನಿಗಳ ಕಣ್ಣು ಕೆಂಪಾಯ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts