More

    ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ಪ್ರೇಕ್ಷಕ: ಫೈನಲ್ ಪಂದ್ಯದಲ್ಲಿ ಭದ್ರತಾ ಲೋಪ

    ಅಹಮದಾಬಾದ್: ಇಂಡೋ- ಆಸೀಸ್‌ನ ನಡುವಿನ ೈನಲ್ ಪಂದ್ಯಕ್ಕೆ ಭಾರಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಇದರ ನಡುವೆಯೂ ಪಂದ್ಯದ ವೇಳೆ ಭದ್ರತಾ ಲೋಪ ಉಂಟಾಯಿತು. ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ 1.30 ಲಕ್ಷಕ್ಕೂ ಅಧಿಕ ಪ್ರೇಕ್ಷಕರಿಂದ ತುಂಬಿದ್ದ ಗ್ಯಾಲರಿಯಿಂದ, ಪ್ಯಾಲೆಸ್ತಿನ್ ಪರ ಬರಹವುಳ್ಳ ಟಿ-ಶರ್ಟ್, ಎಲ್‌ಜಿಬಿಟಿಕ್ಯು ಧ್ವಜದೊಂದಿಗೆ ಮುಖಗವಸು ಧರಿಸಿದ ಪ್ರೇಕ್ಷಕನೊಬ್ಬ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ. ಪಂದ್ಯಕ್ಕೆ ಅಡ್ಡಿಪಡಿಸಿದ ಅಭಿಮಾನಿಯನ್ನು ಆಸ್ಟ್ರೇಲಿಯಾದ ವೇಯ್ನ ಜಾನ್ಸನ್ ಎಂದು ಗುರುತಿಸಲಾಗಿದ್ದು, ಸ್ಥಳೀಯ ಪೋಲಿಸರು ವಶಕ್ಕೆ ಪಡೆದಿದ್ದಾರೆ.

    1.32 ಲಕ್ಷ ಪ್ರೇಕ್ಷಕರ ಎದುರು ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕ ರೋಹಿತ್ ಶರ್ಮ ಬಿರುಸಿನ ಆರಂಭ ಒದಗಿಸಿದರೂ, ನಂತರ ಅದೇ ಲಯದಲ್ಲಿ ಮುಂದುವರಿಯಲು ವಿಲವಾದ ಭಾರತ ತಂಡ, ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ (66 ರನ್, 107 ಎಸೆತ, 1 ಬೌಂಡರಿ) ಹಾಗೂ ವಿರಾಟ್ ಕೊಹ್ಲಿ (54 ರನ್, 63 ಎಸೆತ, 4 ಬೌಂಡರಿ) ಅರ್ಧಶತಕಗಳ ನಡುವೆ ಭರ್ತಿ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ, ಆರಂಭಿಕ ಆಘಾತದ ಬಳಿಕ ಟ್ರಾವಿಸ್ ಹೆಡ್-ಮಾರ್ನಸ್ ಲಬುಶೇನ್ (58*ರನ್, 110 ರನ್, 4 ಬೌಂಡರಿ) ಸಮಯೋಚಿತ ಜತೆಯಾಟದ ಬಲದಿಂದ ಆಸೀಸ್ 43 ಓವರ್‌ಗಳಲ್ಲಿ 4 ವಿಕೆಟ್‌ಗೆ 241 ರನ್‌ಗಳಿಸಿ ಇನ್ನೂ 42 ಎಸೆತ ಬಾಕಿಯಿರುವಂತೆಯೇ ಗೆಲುವಿನ ನಗೆ ಬೀರಿತು. ಟೂರ್ನಿಯುದ್ದಕ್ಕೂ ಎದುರಾಳಿ ಪಾಲಿಗೆ ದುಃಸ್ವಪ್ನವಾಗಿದ್ದ ಭಾರತದ ಬೌಲಿಂಗ್ ವಿಭಾಗವೂ, ಅದರಲ್ಲೂ ಪ್ರಮುಖವಾಗಿ ಸ್ಪಿನ್ ಬೌಲಿಂಗ್ ೈನಲ್‌ನಲ್ಲಿ ಭಾರಿ ನಿರಾಸೆ ಮೂಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts