More

    ರಕ್ತಸ್ರಾವದಿಂದ ಕರೊನಾ ಸೋಂಕಿತ ಗರ್ಭಿಣಿ ನರಳಾಡಿದರೂ ಚಿಕಿತ್ಸೆ ವಿಳಂಬ… ಮಗು ಬದುಕಲಿಲ್ಲ!

    ರಾಯಚೂರು: ಮೂರು ತಿಂಗಳ ಗರ್ಭಿಣಿಗೂ ಕರೊನಾ ಸೋಂಕು ತಗುಲಿದ್ದು, ಐಸೋಲೇಷನ್ ವಾರ್ಡ್​ನಲ್ಲಿದ್ದ ಇವರಿಗೆ ಭಾನುವಾರ ರಕ್ತಸ್ರಾವ ಕಾಣಿಸಿಕೊಂಡಿತ್ತು. ಆದರಿಂದು (ಮಂಗಳವಾರ) ಗರ್ಭಪಾತವಾಗಿದೆ.

    ಇಲ್ಲಿನ ಓಪೆಕ್ ಕೋವಿಡ್ ಆಸ್ಪತ್ರೆಯಲ್ಲಿದ್ದ ಗರ್ಭಿಣಿಗೆ ನಿನ್ನೆ(ಭಾನುವಾರ) ರಕ್ತಸ್ರಾವ ಕಾಣಿಸಿಕೊಂಡು ನೋವಿನಿಂದ ನರಳುತ್ತಿದ್ದರೂ ಚಿಕಿತ್ಸೆ ನೀಡುತ್ತಿಲ್ಲ ಎಂದು ಐಸೋಲೇಷನ್ ವಾರ್ಡ್​ನಲ್ಲಿದ್ದ ರೋಗಿಗಳು ಮಧ್ಯಾಹ್ನ ಊಟ ಬಿಟ್ಟು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಸಮಯಕ್ಕೆ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ಆರೋಪಿಸಿ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಇದನ್ನೂ ಓದಿರಿ ಕರೊನಾ ರೋಗಿಗಳಿಗಿನ್ನು ಮನೆಯೇ ಆಸ್ಪತ್ರೆ; ಜೇಬಿಗೆ ತಕ್ಕಂಥ ಟ್ರೀಟ್​ಮೆಂಟ್​ ಪ್ಯಾಕೇಜ್​

    ರೋಗಿಗಳ ಆಕ್ರೋಶಕ್ಕೆ ಮಣಿದು ಗರ್ಭಿಣಿಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ, ತೀವ್ರ ರಕ್ತಸ್ರಾವದಿಂದ ಗರ್ಭಪಾತವಾಗಿದೆ. ಸೋಂಕಿತ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿರಿ ಚಾಮರಾಜನಗರಕ್ಕೂ‌ ಕಂಟಕವಾಯಿತು ಮಹಾ ನಂಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts