More

    ಚಂದನವನದಲ್ಲಿ ಒಟಿಟಿ ಅಲೆ: ಕನ್ನಡ ವೆಬ್​ಸಿರೀಸ್​ಗೂ ಡಿಮಾಂಡ್​

    ಆರು ತಿಂಗಳ ಹಿಂದಿನ ಮಾತು. ಲಾಕ್​ಡೌನ್​ ಮತ್ತು ಆ ನಂತರ ಸಂದರ್ಭದಲ್ಲಿ ಡಿಜಿಟಲ್​ ವೇದಿಕೆಯಲ್ಲಿ (ಒಟಿಟಿ) ಬೇರೆಬೇರೆ ಭಾಷೆಯ ಹಲವು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಅಷ್ಟೇ ಅಲ್ಲ, ಆ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಸಹ ನಡೆಯುತ್ತಿತ್ತು. ಆದರೆ, ಕನ್ನಡ ಚಿತ್ರಗಳು ಮಾತ್ರ ಯಾವುದೇ ವೇದಿಕೆಯಲ್ಲೂ ಕಾಣಿಸುತ್ತಿರಲಿಲ್ಲ. ಕಟ್​ ಮಾಡಿದರೆ, ಈಗ ಹಲವು ವೇದಿಕೆಗಳಲ್ಲಿ ಕನ್ನಡ ಚಿತ್ರಗಳು ಸಿಗುತ್ತಿವೆ. ಆರೇ ತಿಂಗಳಲ್ಲಿ ಪರಿಸ್ಥಿತಿ ಬದಲಾಗಿದ್ದು ಹೇಗೆ?

    | ಚೇತನ್​ ನಾಡಿಗೇರ್​
    ಒಂದೇ ವಾರದ ಅಂತರದಲ್ಲಿ ನಾಲ್ಕು ಕನ್ನಡ ಚಿತ್ರಗಳು ಬೇರೆಬೇರೆ ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಮೊದಲು ‘ಕನ್ನಡಿಗ’ ಚಿತ್ರ ಬಂತು. ಆ ನಂತರ ‘ಭಜರಂಗಿ 2’, ‘ಪುಕ್ಸಟ್ಟೆ ಲೈಫು’, ‘ಮದಗಜ’ದ ಸರದಿ. ಸಂಕ್ರಾಂತಿ ಹೊತ್ತಿಗೆ ‘ಗರುಡ ಗಮನ ವೃಷಭ ವಾಹನ’ ಬರಲಿದೆ. ಹೇಗೂ ನೈಟ್​ ಕರ್ಫ್ಯೂ ಮತ್ತು ವೀಕೆಂಡ್​ ಕರ್ಫ್ಯೂಗಳಿಂದಾಗಿ ಮುಂದಿನ ಒಂದೆರಡು ತಿಂಗಳ ಕಾಲ ಹೊಸ ಚಿತ್ರಗಳು ಬಿಡುಗಡೆಯಾಗುವುದು ಅನುಮಾನ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ‘ದೃಶ್ಯ 2’, ‘100’ ಸೇರಿ ಇನ್ನಷ್ಟು ಹೊಸ ಚಿತ್ರಗಳು ಬಿಡುಗಡೆಯಾದರೆ ಆಶ್ಚರ್ಯವೇನಿಲ್ಲ.

    ಕೆಲವು ತಿಂಗಳುಗಳ ಹಿಂದೆ ಒಟಿಟಿಯಲ್ಲಿ ಕನ್ನಡ ಚಿತ್ರಗಳೇ ಸಿಗುತ್ತಿರಲಿಲ್ಲ. ಈಗ ಇಷ್ಟೊಂದು ಸಂಖ್ಯೆಯ ಚಿತ್ರಗಳು ಹೇಗೆ ಲಭ್ಯ ಎಂಬ ಪ್ರಶ್ನೆ ಬರುವುದು ಸಹಜ. ಸೂಕ್ಷ್ಮವಾಗಿ ಗಮನಿಸಿದರೆ, ಮೇಲೆ ಹೇಳಿರುವ ಚಿತ್ರಗಳ ಪೈಕಿ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಡಿಜಿಟಲ್​ ವೇದಿಕೆಗೆ ಬಂದ ಚಿತ್ರ ಎಂದರೆ, ಅದು ‘ಕನ್ನಡಿಗ’ ಮಾತ್ರ. ಅದಕ್ಕೂ ಮುಂಚೆಯೂ ‘ರತ್ನನ್​ ಪ್ರಪಂಚ’, ‘ಭೀಮಸೇನ ನಳಮಹಾರಾಜ’, ‘ಲಾ’, ‘ಫ್ರೆಂಚ್​ ಬಿರಿಯಾನಿ’ ಹೀಗೆ ಬೆರಳೆಣಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿದರೆ, ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆಯೇ ಕಡಿಮೆಯೇ.

    ಚಂದನವನದಲ್ಲಿ ಒಟಿಟಿ ಅಲೆ: ಕನ್ನಡ ವೆಬ್​ಸಿರೀಸ್​ಗೂ ಡಿಮಾಂಡ್​

    ಹಿಂದಿಯಲ್ಲೇ ತೆಗೆದುಕೊಂಡರೆ, ಕಳೆದ ವರ್ಷ 100 ಸಿನಿಮಾಗಳು ಬಿಡುಗಡೆಯಾಗಿದ್ದು, ಈ ಪೈಕಿ ಅರ್ಧದಷ್ಟು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ತಮಿಳು, ತೆಲುಗು ಮತ್ತು ಮಲಯಾಳಂನಲ್ಲೂ ಸಂಖ್ಯೆ ಹೆಚ್ಚುತ್ತಿದೆ. ಈ ಮೂರೂ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಪ್ರಮಾಣ ಕಡಿಮೆಯೇ ಮತ್ತು ಈಗಲೂ ಅದೇ ಸಾಂಪ್ರದಾಯಿಕ ಪದ್ಧತಿ ಮುಂದುವರಿದಿದೆ. ಅಂದರೆ ಮೊದಲು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ, ಆ ನಂತರವಷ್ಟೇ ಟಿವಿ ಮತ್ತು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬಹುಶ@ ನೇರ ಬಿಡುಗಡೆಗೆ ಅವಕಾಶ ಮತ್ತು ಬೇಡಿಕೆ ಇಲ್ಲವೋ ಅಥವಾ ಚಿತ್ರರಂಗದವರೇ ಹಳೆಯ ಚೌಕಟ್ಟಿನಿಂದ ಹೊರಗೆ ಬರುವುದಕ್ಕೆ ಮನಸ್ಸು ಮಾಡುತ್ತಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ, ಕನ್ನಡ ಚಿತ್ರರಂಗ ಸಂಖ್ಯೆಯಲ್ಲಿ ಹಿಂದಿದೆ.

    ಚಂದನವನದಲ್ಲಿ ಒಟಿಟಿ ಅಲೆ: ಕನ್ನಡ ವೆಬ್​ಸಿರೀಸ್​ಗೂ ಡಿಮಾಂಡ್​

    ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡ ಚಿತ್ರಗಳಿಗೆ ಬೇಡಿಕೆ ಎಷ್ಟಿದೆ ಎಂಬುದು ನಂತರದ ಮಾತು. ಆದರೆ, ಒಟಿಟಿಯಿಂದಾಗಿ ಕನ್ನಡ ಚಿತ್ರಗಳ ವರಮಾನ ಹೆಚ್ಚಿರುವುದು ಸುಳ್ಳಲ್ಲ. ಕಳೆದ ವರ್ಷವನ್ನೇ ತೆಗೆದುಕೊಂಡರೆ, ಬಿಡುಗಡೆಯಾದ 110 ಚಿತ್ರಗಳ ಪೈಕಿ 20ಕ್ಕೂ ಹೆಚ್ಚು ಚಿತ್ರಗಳು ಹಾಕಿದ ದುಡ್ಡು ವಾಪಸ್ಸು ಪಡೆದಿವೆ. ಕೆಲವು ಚಿತ್ರಗಳು ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಿವೆ. ಬರೀ ಚಿತ್ರಮಂದಿರವೊಂದನ್ನೇ ನಂಬಿಕೊಂಡಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ. ಒಟಿಟಿ ಮತ್ತು ಪರಭಾಷೆಗಳಿಗೆ ಡಬ್ಬಿಂಗ್​ ಹಕ್ಕುಗಳ ಮಾರಾಟದಿಂದ ಇದು ಸಾಧ್ಯವಾಗಿದೆ. ಅದರಲ್ಲೂ ಸ್ಟಾರ್​ ಅಥವಾ ಜನಪ್ರಿಯ ನಟರ ಚಿತ್ರಗಳಿಗೆ ಈ ಸೌಲಭ್ಯಗಳು ಹೆಚ್ಚಾಗುತ್ತಿರುವುದರಿಂದ, ದುಡ್ಡು ಮಾಡಿದ ಚಿತ್ರಗಳ ಪ್ರಮಾಣ ದೊಡ್ಡದಿದೆ. ಅಂದರೆ, ಪ್ರತಿ ವರ್ಷ ಯಾವುದೇ ಚಿತ್ರರಂಗವಾದರೂ ಗೆಲುವಿನ ಪ್ರಮಾಣ ಶೇ. 10ರಷ್ಟು ಎಂದು ಹೇಳಲಾಗುತ್ತಿತ್ತು. ಈ ಬಾರಿ ಅದು ಜಾಸ್ತಿಯಾಗಿದೆ.

    ಚಂದನವನದಲ್ಲಿ ಒಟಿಟಿ ಅಲೆ: ಕನ್ನಡ ವೆಬ್​ಸಿರೀಸ್​ಗೂ ಡಿಮಾಂಡ್​

    ಕನ್ನಡ ವೆಬ್​ಸಿರೀಸ್​ಗೂ ಡಿಮಾಂಡ್​: ಒಟಿಟಿಗಳಲ್ಲಿ ಬೇರೆ ಭಾಷೆಯ ವೆಬ್​ಸೀರೀಸ್​ಗಳು ಬರುತ್ತಿದ್ದರೂ, ಕನ್ನಡದ್ದೊಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರಲಿಲ್ಲ. ಹಾಗಂತ ಕನ್ನಡದಲ್ಲಿ ಪ್ರಯತ್ನಗಳೇ ಆಗಿಲ್ಲ ಎಂದಲ್ಲ. ಈ ಹಿಂದೆ ಒಂದಿಷ್ಟು ವೆಬ್​ಸರಣಿಗಳ ನಿರ್ಮಾಣ ಆಗಿದ್ದರೂ, ಅದು ದೊಡ್ಡ ವೇದಿಕೆಯಲ್ಲಿ ಬಿಡುಗಡೆಯಾಗಿದ್ದು ಅಥವಾ ಜನಪ್ರಿಯವಾದ ಉದಾಹರಣೆ ಇಲ್ಲ. ಇದೀಗ ವೂಟ್​ನಲ್ಲಿ ‘ಹಂಬಲ್​ ಪೊಲಿಟೀಶಿಯನ್​ ನೊಗರಾಜ್​’ ಬಿಡುಗಡೆಯಾಗಿದೆ. ಬಹುಶಃ ಕನ್ನಡದಲ್ಲಿ ಸದ್ಯದ ಮಟ್ಟಿಗೆ ದೊಡ್ಡ ಸರಣಿ ಎಂದರೆ ಇದೇ ಇರಬೇಕು. ದಾನಿಶ್​ ಶೇಠ್​ ಅಭಿನಯದ ಚಿತ್ರ ಜನಪ್ರಿಯವಾದ ಹಿನ್ನೆಲೆಯಲ್ಲಿ, ನೊಗರಾಜ್​ನ ಇನ್ನಷ್ಟು ಕಥೆಗಳನ್ನು ಸೇರಿಸಿ 10 ಕಂತುಗಳ ಈ ವೆಬ್​ಸರಣಿ ಮಾಡಲಾಗಿದೆ. ಈ ಸರಣಿಯ ಜನಪ್ರಿಯತೆಯ ಮೇಲೆ ಮುಂದೆ ಕನ್ನಡದ ವೆಬ್​ಸರಣಿಗಳ ನಿರ್ಮಾಣ ನಿಂತಿದೆ.

    ಶ್ರೀವಲ್ಲಿ ಈಗ ಮುಟ್ಟಿದ್ದೆಲ್ಲ ಚಿನ್ನ, ಪುಷ್ಪ-2ಗೆ ರಶ್ಮಿಕಾ ಇಟ್ಟ ಡಿಮಾಂಡ್​ ಕೇಳಿದ್ರೆ ದಂಗಾಗ್ತೀರಾ!

    https://www.vijayavani.net/a-pm-modi-stuck-on-road-for-15-20-mins-security-lapse-in-punjab-state/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts