More

    ಪದವಿ ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಆದೇಶ: ಬೋಧಕ ವಲಯದಲ್ಲಿ ಭುಗಿಲೆದ್ದ ಅಸಮಾಧಾನ

    ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಕಾಲೇಜುಗಳ ಬೋಧಕ ಸಿಬ್ಬಂದಿ ವರ್ಗಾವಣೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಕೋರಿಕೆ ಮೇಲೆ ಈ ಪ್ರಕ್ರಿಯೆ ನಡೆಯಲಿದೆ. ಸಿ ವಲಯದಲ್ಲಿ 5 ವರ್ಷ ಸೇವೆ ಸಲ್ಲಿಸಿದವರು ಬಿ ಅಥವಾ ಎ ವಲಯಕ್ಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು.

    ಪತಿ-ಪತ್ನಿ ಪ್ರಕರಣದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿರುವುದು ಕಡ್ಡಾಯ. ಗಂಭೀರ ಆರೋಗ್ಯ ಸಮಸ್ಯೆ ಇರುವವರು ಇಷ್ಟೇ ವರ್ಷ ಒಂದು ಸ್ಥಳದಲ್ಲಿ ಸೇವೆ ಸಲ್ಲಿಸಿರಬೇಕು ಎಂದಿಲ್ಲ. ಒಂದೇ ವಿಷಯದಲ್ಲಿ ಇಬ್ಬರು ಉಪನ್ಯಾಸಕರಿದ್ದು ಒಬ್ಬರಿಗೆ ಕಾರ್ಯಭಾರ ಇಲ್ಲದಿದ್ದರೆ ಸೇವಾ ಹಿರಿತನ ಹೊಂದಿರುವವರನ್ನು ಹುದ್ದೆ ಸಮೇತ ವರ್ಗಾವಣೆ ಮಾಡಲು ಅವಕಾಶ ಮಾಡಿಕೊಳ್ಳಲಾಗಿದೆ. ಸರ್ಕಾರದ ಈ ಕೋರಿಕೆ ವರ್ಗಾವಣೆಗೆ ಬೋಧಕ ವರ್ಗದಲ್ಲಿ ತೀವ್ರ ಅಸಮಾಧಾನವೂ ವ್ಯಕ್ತವಾಗಿದೆ.

    ಕಾಲೇಜು ಶಿಕ್ಷಣ ಇಲಾಖೆಯಲ್ಲಿ 2017ರಿಂದ ವರ್ಗಾವಣೆ ಪ್ರಕ್ರಿಯೆಯೇ ನಡೆದಿಲ್ಲ. ಕೋರಿಕೆ ವರ್ಗಾವಣೆ ಮಾತ್ರ ಮಾಡುವುದರಿಂದ ಖಾಲಿ ಇರುವ ಮತ್ತು ನಿವೃತ್ತರ ಸ್ಥಾನಗಳಿಗೆ ಮಾತ್ರ ವರ್ಗಾವಣೆಗೆ ಅವಕಾಶ ಸಿಗುತ್ತದೆ. ಕಡ್ಡಾಯ ವರ್ಗಾವಣೆ ಮಾಡಿದರೆ, ಸಿ ಮತ್ತು ಬಿ ವಲಯದಲ್ಲಿ ಸುದೀರ್ಘ ಕಾಲ ಕೆಲಸ ಮಾಡಿದವರಿಗೆ ನಿಜವಾದ ನ್ಯಾಯಸಿಗುತ್ತದೆ ಎಂಬುದು ಬೋಧಕರ ವಾದ.

    1992ರಲ್ಲಿ ಬೆಂಗಳೂರಲ್ಲಿ ನೇಮಕಗೊಂಡವರ ಪೈಕಿ ಬಹುತೇಕ ಬೋಧಕರು ಇನ್ನೂ ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದಾರೆ. 2017ರಲ್ಲಿ 5 ವರ್ಷ ಗ್ರಾಮೀಣ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟವರ ಪೈಕಿ ಅನೇಕರು ಎ ಮತ್ತು ಬಿ ವಲಯಕ್ಕೆ ನಿಯೋಜನೆ ಮೇಲೆ ಬಂದಿದ್ದಾರೆ. ಹೀಗಾಗಿ ಉದ್ದೇಶಿತ ಕೋರಿಕೆ ವರ್ಗಾವಣೆಯಿಂದ ಅರ್ಹರಿಗೆ ನ್ಯಾಯ ಸಿಗುವುದಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

    18 ಮಂದಿಗೆ ಕರೊನಾ ಅಂಟಿಸಿದ ಒಂದೇ ಒಂದು ಸಿಗರೇಟ್​!

    ಪರಪುರುಷನೊಂದಿಗೆ ವಿವಾಹಿತೆಯ ಸಲ್ಲಾಪ! ದೇವಸ್ಥಾನ ಸಮೀಪದಲ್ಲೇ ಆ ರಾತ್ರಿ ನಡೆಯಿತು ಭೀಕರ ದುರಂತ

    ಕೆಲಸ ಕಸಿದುಕೊಂಡ ಲಾಕ್‌ಡೌನ್‌: ಹಸಿವು ತಾಳದೇ ಕಸದ ರಾಶಿಯಲ್ಲೇ ಅನ್ನ ಹುಡುಕಿ ತಿಂದ ವ್ಯಕ್ತಿ… ಬೆಚ್ಚಿಬೀಳಿಸುತ್ತೆ ಈ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts