More

    ಕರೊನಾ ಸೋಂಕಿತೆಯ ಪ್ರಾಣ ಉಳಿಸಿತು ವಯಾಗ್ರ ಔಷಧ! 45 ದಿನದ ಬಳಿಕ ಕೋಮಾದಿಂದ ಹೊರ ಬಂದ ನರ್ಸ್​

    ಇಂಗ್ಲೆಂಡ್​: ಮಹಾಮಾರಿ ಕರೊನಾ ಸೋಂಕು ತುಗುಲಿ ತೀವ್ರ ಅಸ್ವಸ್ಥಗೊಂಡು ಕೋಮಾಗೆ ತಲುಪಿದ್ದ ನರ್ಸ್​ವೊಬ್ಬರಿಗೆ ವಯಾಗ್ರ ಔಷಧ ಕೊಟ್ಟ ಪರಿಣಾಮ ಪ್ರಜ್ಞೆ ಬಂದಿದೆ.

    ಇಂತಹ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದ್ದು, 37 ವರ್ಷದ ಮೋನಿಕಾ ಅಲ್ಮೇಡಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಗೇನ್ಸ್​ಬರೋ ಲಿಂಕನ್​ಶೈರ್​ ನಿವಾಸಿಯಾದ ಮೋನಿಕಾ, ಲಿಂಕನ್​ಶೈರ್​ನ NHS ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಕೋವಿಡ್​ ವಾರ್ಡ್​ನಲ್ಲಿ ರೋಗಿಗಳನ್ನು ನೋಡಿಕೊಳ್ಳುತ್ತಿದ್ದ ಮೋನಿಕಾಗೆ ಕಳೆದ ಅಕ್ಟೋಬರ್​ನಲ್ಲಿ ಕರೊನಾ ಸೋಂಕು ತಗುಲಿತ್ತು. ಪರಿಣಾಮ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಅಷ್ಟೇ ಅಲ್ಲ, ಒಮ್ಮೆ ರಕ್ತ ವಾಂತಿಯೂ ಆಗಿತ್ತು. ಬಳಿಕ ಉಸಿರಾಟ ಸಮಸ್ಯೆ ಉಂಟಾಗಿತ್ತು. ಕೂಡಲೇ ಲಿಂಕನ್​ ಕೌಂಟಿ ಆಸ್ಪತ್ರೆಯ ಐಸಿಯು ವಾರ್ಡ್​ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಇದಾದ ಕೆಲ ದಿನಕ್ಕೆ ಅಂದರೆ ನ.16ರಂದು ಮೋನಿಕಾ ಕೋಮಾಗೆ ಜಾರಿದ್ದರು.

    ಈಕೆಯನ್ನು ಉಳಿಸಿಕೊಳ್ಳಲು ವೈದ್ಯರ ತಂಡ ಹರಸಾಹಸ ಪಟ್ಟಿತ್ತು. ಈಕೆ ಬದುಕವ ಸಾಧ್ಯತೆ ಶೇ.30ರಷ್ಟು ಇದೆ ಎಂದು ತಿಳಿಯುತ್ತಿದ್ದಂತೆ ವಯಾಗ್ರ ಔಷಧದಿಂದ ಚಿಕಿತ್ಸೆ ನೀಡಿದ್ದರು. ಬಳಿಕ ಅಂದರೆ ಬರೋಬ್ಬರಿ 45 ದಿನಗಳ ಬಳಿಕ ಕೋಮಾದಿಂದ ಮೋನಿಕಾ ಹೊರ ಬಂದಿದ್ದಾರೆ. ವಯಾಗ್ರ ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಉಸಿರಾಟದ ಸಮಸ್ಯೆಯೂ ಕಡಿಮೆ ಆಗಿದೆ.

    ಡಿ.14ರಂದು ಕೋಮಾದಿಂದ ಹೊರಬಂದ ಮೋನಿಕಾರನ್ನು ಕ್ರಿಸ್ಮಸ್ ಹಬ್ಬಕ್ಕೆಂದು ಮನೆಗೆ ಹೋಗಲು ವೈದ್ಯರು ಅವಕಾಶ ಮಾಡಿಕೊಟ್ಟಿದ್ದರು. ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೋನಿಕಾ ಮೊದಲಿಂದಲೂ ಅಸ್ತಮಾದಿಂದ ಬಳಲುತ್ತಿದ್ದರಂತೆ. ಹಾಗಾಗಿ ಕರೊನಾ ಸೋಂಕು ತಗುಲಿದಾಗ ಆರೋಗ್ಯ ಸ್ಥಿತಿ ಬೇಗ ಹದಗೆಟ್ಟಿತ್ತು ಎನ್ನಲಾಗಿದೆ. ಸೋಂಕು ತಗುಲುವ ಮುನ್ನವೇ ನರ್ಸ್​ ಮೋನಿಕಾ ಕರೊನಾ ಡಬಲ್​ ಡೋಸ್​ ತೆಗೆದುಕೊಂಡಿದ್ದರು.

    ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

    ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts