More

    ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಕಾರವಾರ ಮೂಲದ ಯುವಕನಿಗೆ ನಿಫಾ ವೈರಸ್​ ಭೀತಿ!

    ಮಂಗಳೂರು: ಕರೊನಾ ಸೋಂಕಿನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ನಿಫಾ ವೈರಸ್​ ಮತ್ತಷ್ಟು ಆತಂಕ ತಂದೊಡ್ಡಿದೆ. ಈ ನಡುವೆ ಮಂಗಳೂರಿನಲ್ಲಿ ಯುವಕನೊಬ್ಬ ತನಗೆ ನಿಫಾ ಸೋಂಕಿನ ಕೆಲ ಲಕ್ಷಣ ಕಂಡು ಬಂದಿದೆ. ಪ್ಲೀಸ್​ ಪರೀಕ್ಷೆ ಮಾಡಿ ಎಂದು ಭಯದಿಂದಲೇ ವೈದ್ಯರನ್ನು ದುಂಬಾಲು ಬಿದ್ದ ಘಟನೆ ನಡೆದಿದೆ.

    ಗೋವಾದಲ್ಲಿ ಖಾಸಗಿ ಲ್ಯಾಬೊಂದರಲ್ಲಿ ಮೈಕ್ರೋಬಯಾಲಜಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ ಕಾರವಾರ ಮೂಲದ ಯುವಕ ಕೆಲ ದಿನದ ಹಿಂದೆ ಬೈಕ್‌ನಲ್ಲಿ ಮನೆ ಬಂದಿದ್ದ. ಈ ವೇಳೆ ಮಳೆಯಲ್ಲಿ ಒದ್ದೆಯಾಗಿದ್ದು, ಸಹಜವಾಗಿ ಶೀತ, ಜ್ವರ ಬಾಧಿಸಿದೆ, ಇದರಿಂದ ಆತಂಕಿತನಾದ ಯುವಕ ತನಗೆ ನಿಫಾ ಬಂದಿದೆ ಎಂದು ಹೆದರಿ ಮಣಿಪಾಲದ ಆಸ್ಪತ್ರೆಗೆ ಬಂದಿದ್ದಾನೆ. ಅಲ್ಲಿಯೂ ಸಮಾಧಾನವಾಗದೆ ಮಂಗಳೂರಿಗೆ ಬಂದಿದ್ದಾನೆ.

    ಆರೋಗ್ಯ ಇಲಾಖೆ ಅಧಿಕಾರಿಗಳು ಯುವಕನ್ನು ತಪಾಸಣೆ ಮಾಡಿದ್ದಾರೆ, ಕೂಲಂಕಷವಾಗಿ ವಿಚಾರಿಸಿದ್ದಾರೆ, ಆತನಿಗೆ ನಿಫಾದ ಸೋಂಕು, ಲಕ್ಷಣ ಯಾವುದೂ ಇಲ್ಲ ಎನ್ನುವುದನ್ನು ಖಾತರಿಪಡಿಸಿದ್ದಾರೆ. ಆದರೂ ಆತನ ಆತಂಕ ಕಡಿಮೆ ಆಗಿಲ್ಲ. ಅವನನ್ನು ಸಮಾಧಾನ ಮಾಡಲೆಂದು ನಿಫಾ ಟೆಸ್ಟ್​ಗೆ ಕಳುಹಿಸಿದ್ದೇವೆ ಅಷ್ಟೆ. ಆತನನ್ನು ಶಂಕಿತ ಅಂತಾನೂ ಹೇಳಬೇಡಿ, ಆತನ ಆತಂಕದ ಹಿನ್ನೆಲೆ ಟೆಸ್ಟ್​ಗೆ ಕಳುಹಿಸಲಾಗಿದೆ ಅಷ್ಟೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ‌.ರಾಜೇಂದ್ರ ಹೇಳಿದ್ದಾರೆ.

    ಸದ್ಯ ರಿಸ್ಕ್‌ ಬೇಡ ಎಂಬ ಕಾರಣಕ್ಕಾಗಿ ವೆನ್ಲಾಕ್‌ ಆಸ್ಪತ್ರೆಯ ಐಸೊಲೇಶನ್‌ ವಾರ್ಡಿನಲ್ಲಿ ಯುವಕನನ್ನು ಇರಿಸಲಾಗಿದೆ. ಆತ ಆರೋಗ್ಯವಾಗಿದ್ದಾನೆ. ಅವನ ಮನೆಯವರನ್ನೂ ಐಸೋಲೇಶನ್​ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ತುಮಕೂರಲ್ಲಿ ಗಂಡನನ್ನ ಕೊಂದು ಚರಂಡಿಗೆ ಎಸೆದ ಪತ್ನಿ! ಬೆಚ್ಚಿಬೀಳಿಸುತ್ತೆ ಅವಳ ಕ್ರೂರತನ

    ಮಹಿಳೆಯನ್ನ ನಗ್ನಗೊಳಿಸಿ ಹಿಂಸೆ ಕೊಟ್ಟ ಕೇಸ್​ಗೆ ಟ್ವಿಸ್ಟ್​! ಆರೋಪಿಗಳಲ್ಲಿ ಒಬ್ಬ ಪೊಲೀಸ್ ಜೀಪ್ ಡ್ರೈವರ್ ಆಗಿದ್ದವ…

    ಪ್ರೇಯಸಿಯರ ಖಾಸಗಿ ದೃಶ್ಯ ಚಿತ್ರೀಕರಿಸಿ ಮಾಡಬಾರದ್ದು ಮಾಡುತ್ತಿದ್ದ! ಇವನ ಬಲೆಗೆ ಬಿದ್ದವರ ಸಂಕಷ್ಟ ಹೇಳತೀರದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts