More

    ರಾತ್ರಿ ಕರ್ಫ್ಯೂ: ಹೊಸ ವರ್ಷಾಚರಣೆಗೆ ಈಗಲೇ ಕಿಕ್​ ಏರಿಸಿಕೊಳ್ಳಲು ಪ್ಲಾನ್​, ಬಾರ್​ಗಳತ್ತ ಜನವೋ ಜನ

    ಬೆಂಗಳೂರು: ಹೊಸ ವರ್ಷಕ್ಕೆ ಕೌಂಟ್​ಡೌನ್​ ಶುರುವಾಗಿದ್ದು, ಮದ್ಯ ಖರೀದಿಸಲು ಬಾರ್​ಗಳತ್ತ ಮದ್ಯಪ್ರಿಯರು ದೌಡಾಯಿಸಿದ್ದಾರೆ.

    ಒಮಿಕ್ರಾನ್​ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ ಜಾರಿ ಮಾಡಿದ್ದು, ರಾತ್ರಿ 10 ಗಂಟೆಗೆ ಎಲ್ಲ ಬಾರ್​, ಪಬ್​, ರೆಸ್ಟೋರೆಂಟ್​ಗಳು ಬಂದ್​ ಆಗಲಿವೆ. ಹೊಸ ವರ್ಷದ ಸಂಭ್ರಮ ವೀಕೆಂಡ್​ನಲ್ಲಿ ಬಂದಿದೆ. ಎಣ್ಣೆ ಪಾರ್ಟಿ ಮಾಡುತ್ತಾ, ನ್ಯೂ ಇಯರ್​ ಸ್ವಾಗತಿಸಲು ಸಜ್ಜಾಗಿದ್ದ ಮದ್ಯಪ್ರಿಯರಿಗೆ ಸರ್ಕಾರದ ಆದೇಶ ಶಾಕ್​ ನೀಡಿದೆ. ಆದರೂ ಇರುವ ಮಿತಿಯಲ್ಲೇ ವರ್ಷಾಚರಣೆಯಲ್ಲಿ ಕಿಕ್ಕೇರಿಸಿಕೊಳ್ಳಲು ಬೆಂಗಳೂರಿನ ಬಾರ್​ಗಳತ್ತ ಮುಗಿಬಿದ್ದು ಎಣ್ಣೆ ಖರೀದಿಸುತ್ತಿದ್ದ ದೃಶ್ಯ ಶುಕ್ರವಾರ ಸಾಮಾನ್ಯವಾಗಿತ್ತು.

    ರಾತ್ರಿ 10 ಗಂಟೆಗೆ ಪಬ್, ಕ್ಲಬ್, ಬಾರ್ ಬಂದ್​ ಆಗುವ ಹಿನ್ನೆಲೆ ಶುಕ್ರವಾರ ಬೆಳಗ್ಗೆಯಿಂದಲೇ ಮದ್ಯ ಖರೀದಿಸಲು ಬಾರ್​ಗಳತ್ತ ಹೋಗುತ್ತಿದ್ದ, ತಮಗೆ ಬೇಕಾದ ಮದ್ಯ ಖರೀದಿಸಿದ ಖುಷಿಯಲ್ಲಿ ಮನೆಯತ್ತ ಹೋಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.

    50 ರೂಪಾಯಿ ಆಮಿಷವೊಡ್ಡಿ 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಮುಖ್ಯಶಿಕ್ಷಕ ಅರೆಸ್ಟ್​

    ದುರಂತಕ್ಕೆ ದಾರಿ ಮಾಡಿದ್ದೇ ಅರ್ಚನಾಳ 3ನೇ ಗಂಡನ ಜತೆ ಮಗಳ ಸಲ್ಲಾಪ! ಒಂದೂವರೆ ತಿಂಗಳ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts