More

    ಹೊರಗೆ ಚಂದದ ಚಿತ್ರ… ಒಳಗೆ ವಿಚಿತ್ರ..

    ಜಿ.ಬಿ. ಹೆಸರೂರ ಶಿರಹಟ್ಟಿ
    ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಾಲೂಕಿನ ದೇವಿಹಾಳ ಗ್ರಾಮದಲ್ಲಿ ನಿರ್ವಿುಸಿದ ಆರೋಗ್ಯ ಮತ್ತು ಕ್ಷೇಮ ಕೇಂದ್ರ 3 ವರ್ಷವಾದರೂ ಉದ್ಘಾಟನೆಗೊಂಡಿಲ್ಲ.
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕೇಂದ್ರವನ್ನು ನಿರ್ವಿುಸಲಾಗಿದೆ. ಕೇಂದ್ರದಲ್ಲಿ ಸಿಬ್ಬಂದಿ ವಸತಿಗಾಗಿ ಎರಡು ಕೊಠಡಿ, ಒಂದು ಅಡುಗೆ ಕೋಣೆ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಆದರೆ, ಆರೋಗ್ಯ ಇಲಾಖೆ ನಿರ್ಲಕ್ಷ್ಯಂದ ಸೇವೆಗೆ ಲಭ್ಯವಾಗದೆ ಅನೈತಿಕ ಚಟುವಟಿಕೆಗೆ ದಾರಿ ಮಾಡಿಕೊಟ್ಟಂತಾಗಿದೆ. ಕಟ್ಟಡದ ಹೊರಭಾಗದ ಗೋಡೆ ಹಾಗೂ ಪ್ರವೇಶ ಬಾಗಿಲ ಸುತ್ತಲೂ ಆಯುಷ್ಮಾನ್ ಭಾರತ ಆರೋಗ್ಯ ಸೇವೆಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಲಾಗಿದೆ. ಆದರೆ, ಕಟ್ಟಡದೊಳಗಿನ ಚಿತ್ರಣವೇ ಬೇರೆ ಇದೆ. ಕಿಡಿಗೇಡಿಗಳ ಕೃತ್ಯದಿಂದ ಕೊಠಡಿ ಬಾಗಿಲುಗಳು ಕಿತ್ತು ಹೋಗಿವೆ. ಕಿಟಕಿ ಗಾಜು ಒಡೆದಿವೆ. ಅಡುಗೆ ಕೋಣೆಯಲ್ಲಿ ತ್ಯಾಜ್ಯ ತುಂಬಿದೆ. ವಿದ್ಯುತ್ ಸ್ವಿಚ್
    ಬೋರ್ಡ್​ಗಳು ನಾಪತ್ತೆಯಾಗಿದ್ದು, ವೈರ್​ಗಳು ನೇತಾಡುತ್ತಿವೆ. ಹೊರಗೆ ಥಳಕು, ಒಳಗೆ ಹುಳುಕು ಎಂಬಂತಿದ್ದು, ಲಕ್ಷಾಂತರ ರೂಪಾಯಿ ವ್ಯಯಿಸಿ ಇಂಥ ಕಟ್ಟಡವನ್ನು ನಿರ್ವಿುಸಿದ್ದಾದರೂ ಏಕೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


    ಕಟ್ಟಡ ನೋಡಿ ಸಂತಸವಾಗಿತ್ತು. ಆದರೆ, 3 ವರ್ಷ ಕಳೆದರೂ ಪ್ರಯೋಜನಕ್ಕೆ ಬಾರದೆ ಅನೈತಿಕ ಚುಟಿವಟಿಕೆ ಸ್ಥಳವಾಗಿ ಮಾರ್ಪಟ್ಟಿದ್ದು ಬೇಸರ ಮೂಡಿಸಿದೆ. ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಜನರಿಗೆ ತಲುಪುತ್ತವೆ ಎಂಬುದಕ್ಕೆ ಆರೋಗ್ಯ ಸೇವಾ ಕೇಂದ್ರ ಸಾಕ್ಷಿಯಾಗಿದೆ.
    | ದುರ್ಗಪ್ಪ ಪವಾರ, ದೇವಿಹಾಳ ನಿವಾಸಿ


    ಕಟ್ಟಡ ನಿರ್ಮಾಣ ಬಳಿಕ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದ್ದರಿಂದ ಸಕಾಲಕ್ಕೆ ಉದ್ಘಾಟನೆಯಾಗಲಿಲ್ಲ. ಈ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ. ಸದ್ಯ ಕರೊನಾ ಲಸಿಕೆ ನೀಡುವ ಸಂಬಂಧ ಕಟ್ಟಡ ಉಪಯೋಗವಾಗಿದ್ದು, ಶೀಘ್ರದಲ್ಲಿ ಆರೋಗ್ಯ ಸಹಾಯಕಿಯರನ್ನು ನೇಮಿಸಲಾಗುವುದು. ಕೇಂದ್ರದಲ್ಲಿ ಕ್ಷಯರೋಗ, ಮಧುಮೇಹ, ರಕ್ತದೊತ್ತಡ ಪರೀಕ್ಷೆ ಜತೆಗೆ ಚುಚ್ಚುಮದ್ದು ನೀಡುವ ವ್ಯವಸ್ಥೆ ಮಾಡಲಾಗುತ್ತದೆ.
    | ಡಾ. ಸತೀಶ ಬಸರಿಗಿಡದ, ಗದಗ ಡಿಎಚ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts