More

    ಹಳೇ ಬಸ್ ನಿಲ್ದಾಣಕ್ಕೆ ಹೊಸ ಟಚ್

    ತೀರ್ಥಹಳ್ಳಿ: ಹೊಸ ವರ್ಷದ ಆಚರಣೆಗೆ ಎ¯್ಲೆಡೆ ಗುಂಡು, ತುಂಡು, ಮೋಜು ಮಸ್ತಿಯೇ ಮುಖ್ಯ ಎಂಬAತಹ ಈ ದಿನಗಳಲ್ಲಿ ತಾಲೂಕಿನ ರಾಮಕೃಷ್ಣಾಪುರದ ಯುವಕರ ತಂಡ ಅರ್ಥಪೂರ್ಣವಾಗಿ ಆಚರಿಸಿ ಹೊಸ ಮುನ್ನುಡಿ ಬರೆದಿz್ದÁರೆ. ರಾಮಕೃಷ್ಣಪುರದ ಸಮರ್ಪಣಾ ಎಂಬ ತಂಡ ತಮ್ಮ ಊರಿನ ಹಳೆಯ ಬಸ್ ನಿಲ್ದಾಣವನ್ನು ಸುಣ್ಣ ಬಣ್ಣಗೊಳಿಸಿ ಮಲೆನಾಡಿನ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು, ತಮ್ಮೂರ ಸಮೀಪದಲ್ಲಿರುವ ಅದ್ಭುತ ಪುರಾಣ ಪ್ರಸಿದ್ಧ ದೇವಾಲಯಗಳ ಚಿತ್ರಗಳನ್ನು ಗೋಡೆಯ ಮೇಲೆ ಪ್ರದರ್ಶಿಸಿ ಒಂದು ವಿಶೇಷವಾದ ಹಾಗೂ ವಿನೂತನ ಪ್ರಯತ್ನ ಮಾಡಿ ಗಮನ ಸೆಳೆದಿz್ದÁರೆ. ಅಲ್ಲದೆ ಹೊಸ ನಾಮ-Àಲಕವನ್ನು ಹಾಗೂ ಬಸ್ ವೇಳಾಪಟ್ಟಿಯನ್ನೂ ನಿಲ್ದಾಣದಲ್ಲಿ ಹಾಕಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ಹೊಸ ವರ್ಷವೆಂದರೆ ಕೇವಲ ಮೋಜು ಮಸ್ತಿ ಮಾತ್ರವಲ್ಲ ಸಮಾಜಕ್ಕೆ ಕೊಡಬಹುದಾದ ಕಾಣಿಕೆಯನ್ನೂ ನೆನಪಿಸಿz್ದÁರೆ. ಈ ತಂಡದಲ್ಲಿ ೧೨ ಸದಸ್ಯರಿದ್ದು ಪ್ರತಿದಿನ ತಲಾ ೧೦ ರೂ.ಗಳನ್ನು ಸಂಗ್ರಹಿಸಿ ಗ್ರಾಮದ ಜನಪರ ಕಾರ್ಯಗಳಿಗೆ ವಿನಿಯೋಗಿಸುತ್ತಿರುವುದು ಈ ತಂಡದ ವಿಶೇಷ. ಇತ್ತೀಚೆಗೆ ಆಗುಂಬೆ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ಹಮ್ಮಿಕೊಂಡ ವಿಶ್ವ ಮಾನವ ದಿನಾಚರಣೆಯಂದು ಈ ತಂಡಕ್ಕೆ ವಿಶ್ವ ಮಾನವ ಪ್ರಶಸ್ತಿ ಲಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts