More

    ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಕೆ.ಆರ್​.ನಗರ: ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕಿದ್ದವರೇ ಮಾಡಬಾರದ್ದು ಮಾಡಿದ್ರೆ ಏನು ಹೇಳೋದು? ಹಣದ ಆಸೆಗಾಗಿ ವಕೀಲನೊಬ್ಬ ಬರೋಬ್ಬರಿ ಮೂವರು ಮಹಿಳೆಯರನ್ನು ಮದುವೆ ಆಗಿದ್ದಾನೆ.

    ಆ ಭೂಪನ ಹೆಸರು ಸಿ.ವಿ.ಸುನೀಲ್​ಕುಮಾರ್​. ಈತ ಮೈಸೂರು ಜಿಲ್ಲೆ ಕೆ.ಆರ್​. ನಗರ ತಾಲೂಕಿನ ಚಂದಗಾಲು ಗ್ರಾಮದವ. ವಕೀಲನಾಗಿರುವ ಸುನೀಲ್​ಕುಮಾರ್​, ಒಬ್ಬರಿಗೆ ತಿಳಿಯದಂತೆ ಮತ್ತೊಬ್ಬರನ್ನು, ಮತ್ತೊಬ್ಬರಿಗೆ ತಿಳಿಯದಂತೆ ಇನ್ನೊಬ್ಬರನ್ನು… ಹೀಗೆ ಯಾಮಾರಿಸಿ ಮದ್ವೆ ಆಗಿದ್ದಾನೆ. ಈತನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ.

    ವಕೀಲ ವೃತ್ತಿ ಮಾಡುತ್ತಿರುವ ಈತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗ್ರಾಮದ ಮಹಿಳೆಯನ್ನು ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಕೆ.ಆರ್​.ನಗರ ಸಬ್​ರಿಜಿಸ್ಟ್ರಾರ್​ ಸಮ್ಮುಖ ಮದುವೆಯಾಗೋಣ ಎಂದು ನಂಬಿಸಿದ. ಸುಳ್ಳು ಪ್ರಮಾಣಪತ್ರ ಮಾಡಿಸಿ ಸಂಸಾರವನ್ನೂ ಆರಂಭಿಸಿದ. ಆದರೆ, ಹಣಕ್ಕಾಗಿ ಚಿತ್ರಹಿಂಸೆ ಮಿತಿ ಮೀರಿತು. ಈ ಬಗ್ಗೆ ಆಕೆ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದಾಗ ಅವರು ಸಂಧಾನ ಮಾಡಿಸಿ 2020ರ ಜೂನ್​ 18ರಂದು ಸರಳ ವಿವಾಹ ಮಾಡಿಸಿದ್ದರು.

    ಆಕೆಯಿಂದ 5 ಲಕ್ಷ ರೂ. ತೆಗೆದುಕೊಂಡ ಸುನೀಲ್​ಕುಮಾರ್​, ಮತ್ತೊಂದು ಮದುವೆಗೆ ಒಪ್ಪಿಗೆ ನೀಡು ಎಂದು ಕಾಡಲಾರಂಭಿಸಿದ. ಈ ಬಗ್ಗೆ ಆಕೆ 2020ರ ನ.10 ರಂದು ಕೆ.ಆರ್​.ನಗರ ಠಾಣೆಗೆ ದೂರು ನೀಡಿದ್ದಳು. ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡು ಒಂದು ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ.

    ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಮೈಸೂರಿನ ಬಂಬೂಬಜಾರ್​ನ ಯುವತಿಯೊಬ್ಬಳನ್ನು ಕೆ.ಆರ್​. ನಗರ ತಾಲೂಕಿನ ಪ್ರಸಿದ್ಧ ದೇವಾಲಯವೊಂದರಲ್ಲಿ 2021ರ ಜು.27ರಂದು ಮದುವೆಯಾಗಿದ್ದ. ಮನೆಯನ್ನು ಸ್ವಚ್ಛ ಮಾಡುವ ಸಂದರ್ಭ ಯುವತಿಗೆ ಪತ್ರವೊಂದು ಸಿಕ್ಕಿತ್ತು. ಅದೇನೆಂದು ನೋಡಿದಾಗ ಒಡನಾಡಿ ಸಂಸ್ಥೆಯು ಸುನೀಲ್​ಕುಮಾರ್​ಗೆ ನೀಡಿದ್ದ ಮೊದಲ ಮದುವೆ ಪ್ರಮಾಣಪತ್ರ ಎಂದು ತಿಳಿದ ಆಕೆಗೆ ಎಲ್ಲವೂ ಅಲ್ಲೋಲ ಕಲ್ಲೋಲ ಅನ್ನಿಸಿಬಿಟ್ಟಿತ್ತು. ಪ್ರಕರಣ ಒಪ್ಪಿಕೊಂಡ ಸುನೀಲ್​ಕುಮಾರ್​, ಮೊದಲ ಪತ್ನಿಗೆ 6 ಲಕ್ಷ ರೂ. ಪರಿಹಾರ ನೀಡಿದರೆ ಕೇಸು ವಾಪಸ್​ ಪಡೆಯುತ್ತಾಳೆ. ಹಾಗಾಗಿ ನೀನು ಹಣ ಕೊಡಬೇಕು. ಇಲ್ಲವಾದರೆ ನಾನು ಅವಳ ಜತೆಯೇ ವಾಸಿಸುವೆ ಎಂದು ತಗಾದೆ ತೆಗೆದಿದ್ದ.

    ಮದುವೆಗೆ ಮೊದಲೇ ಎರಡೂವರೆ ಲಕ್ಷ ರೂ. ನೀಡಿದ್ದ ಯುವತಿ(2ನೇ ಹೆಂಡತಿ) ಮತ್ತೆ ಹಣ ನೀಡಲು ಸಮ್ಮತಿಸಲಿಲ್ಲ. ಕಿರುಕುಳ ಹೆಚ್ಚಾದ ಕಾರಣ ಆಕೆ ತವರು ಸೇರಿದಳು. ಈ ಎರಡೂ ಪ್ರಕರಣ ಮುಚ್ಚಿಟ್ಟ ಸುನೀಲ್​ಕುಮಾರ್​ ಬೆಂಗಳೂರಿನ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು 2021ರ ಡಿ.2 ರಂದು ಬೆಂಗಳೂರಿನಲ್ಲಿ ರಿಜಿಸ್ಟರ್ಡ್​ ವಿವಾಹವಾಗಿದ್ದ. ಕೆ.ಆರ್​.ನಗರದಲ್ಲಿ ಸಂಸಾರ ಆರಂಭಿಸಿದ ಬೆಂಗಳೂರಿನ ಮಹಿಳೆಗೆ ತನ್ನ ಗಂಡನಿಗೆ ತಾನು 3ನೇ ಪತ್ನಿ ಎಂಬ ಕಟು ಸತ್ಯ ತಿಳಿದಿದೆ. ಅಷ್ಟರಲ್ಲಾಗಲೇ ಆಕೆಯ ಎಟಿಎಂ ಕಾರ್ಡ್​ ಪಡೆದಿದ್ದ ಭೂಪ ಸಾಕಷ್ಟು ಹಣವನ್ನು ಡ್ರಾ ಮಾಡಿಕೊಂಡಿದ್ದ. ನೊಂದ ಆಕೆ ಪಟ್ಟಣದ ಪೊಲೀಸ್​ ಠಾಣೆಗೆ ಭಾನುವಾರ ರಾತ್ರಿ ದೂರು ನೀಡಿದ್ದಾಳೆ. ಎರಡನೇ ಪತ್ನಿಗೆ ಈ ವಿಷಯ ತಿಳಿದು ಆಕೆಯೂ ಠಾಣೆಯಲ್ಲಿ ಭಾನುವಾರ ದೂರು ನೀಡಿದ್ದಾರೆ. ಇತ್ತ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

    ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…

    ಮಗನನ್ನು ಅಂಗನವಾಡಿಗೆ ಸೇರಿಸಿದ ಚನ್ನಪಟ್ಟಣದ ಜಡ್ಜ್! ನ್ಯಾಯಾಧೀಶರ ನಡೆ ಕಂಡು ಹುಬ್ಬೇರಿಸಿದ ಸ್ಥಳೀಯರು

    ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts