More

    ಸೂರಿಲ್ಲದೆ ಅಂಬೇಡ್ಕರ್​ ಭವನದಲ್ಲಿ ತಂಗಿದ್ದೇ ತಪ್ಪಾ? ಬಡ ವೃದ್ಧೆಯ ಪ್ರಾಣ ತೆಗೆದ ಗ್ರಾಪಂ ಸದಸ್ಯನ ಮಗ! ಮೈಸೂರಲ್ಲಿ ಅಮಾನವೀಯ ಘಟನೆ

    ಮೈಸೂರು: ರಾಜಕೀಯ ಪುಡಾರಿಗಳೇ ಹಾಗೆ. ಊರಿಗೆಲ್ಲ ನಾನೊಬ್ಬನೇ ದೊಣ್ಣೇ ನಾಯ್ಕ, ಊರೆಲ್ಲ ನಂದೆ ಅಂತ ಶೋ ಕೊಟ್ಟುಕೊಂಡು ಓಡಾಡ್ತಾರೆ. ಈತನೂ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಹೋಗಿ ಬಡ ವೃದ್ಧೆಯನ್ನು ಕೊಂದೇ ಬಿಟ್ಟಿದ್ದಾನೆ.

    ಇಂತಹ ಅಮಾನವೀಯ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿಯಲ್ಲಿ ನಡೆದಿದೆ. ಜಯಮ್ಮ(60) ಮೃತ ದುರ್ದೈವಿ. ಇದೇ ಗ್ರಾಮದ ವಿಶ್ವಕುಮಾರ್ ಕೊಲೆ ಆರೋಪಿ.

    ಆರೋಪಿ ವಿಶ್ವಕುಮಾರ್ ಅವರ ಅಪ್ಪ ಮಹಾಲಿಂಗ ಗ್ರಾಮ ಪಂಚಾಯಿತಿ ಸದಸ್ಯ. ಹೀಗಾಗಿ ವಿಶ್ವಕುಮಾರ್ ಊರೆಲ್ಲ ನಂದೆ ಅಂಥ ಶೋ ಕೊಟ್ಟುಕೊಂಡು ಓಡಾಡಿಕೊಂಡಿದ್ದ. ಇತ್ತೀಚಿಗೆ ಜಯಮ್ಮರ ಮುರುಕಲು ಮನೆ ಕುಸಿದುಬಿದ್ದಿತ್ತು. ಗ್ರಾಮದ ಮುಖಂಡರ ಅನುಮತಿ ಮೇರೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಯಮ್ಮರ ಕುಟುಂಬ ವಾಸವಿತ್ತು. ಏಕಾಏಕಿ ಜಯಮ್ಮರ ಮನೆಗೆ ನುಗ್ಗಿದ ವಿಶ್ವಕುಮಾರ್, ಸಮುದಾಯ ಭವನದಲ್ಲಿ ಇಟ್ಟಿರುವ ಸಮಾನು- ಸರಂಜಾಮುಗಳನ್ನು ಎತ್ತಿಕೊಳ್ಳುವಂತೆ ಧಮ್ಕಿ ಹಾಕಿದ್ದ. ವೃದ್ಧೆಯ ಜುಟ್ಟು ಹಿಡಿದು ಗೋಡೆಗೆ ನೂಕಿಬಿಟ್ಟಿದ್ದ. ಆ ವೇಳೆ ಗಂಭೀರ ಗಾಯಗೊಂಡಿದ್ದ ಜಯಮ್ಮ ಒಂದು ವಾರ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡೆವೆ ಹೋರಾಡಿ ಫೆ.13ರಂದು ಕೊನೆಯುಸಿರೆಳೆದರು.

    ಸಮುದಾಯ ಭವನ ಇರೋದೇ ಊರಿನವರ ಉಪಯೋಗಕ್ಕಾಗಿ. ಹಳ್ಳಿ ಜನರೆಲ್ಲರೂ ಬಡಕುಟುಂಬಕ್ಕೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಅವಕಾಶ ಕೊಟ್ಟಿದ್ದರು. ಆದ್ರೆ ಈ ವಿಶ್ವಕುಮಾರ್​, ‘ನಮ್ಮಪ್ಪ ಗ್ರಾಮ್ ಪಂಚಾಯ್ತಿ ಮೆಂಬರ್ರು’ ಅಂತ ಜಗಳ ತೆಗೆದು ಅಜ್ಜಿಯನ್ನು ಕೊಂದದ್ದು ಮಾತ್ರ ದುರಂತ. (ದಿಗ್ವಿಜಯ ನ್ಯೂಸ್, ಮೈಸೂರು)

    ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

    ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts