More

    ನನಗೇ ಹೀಗೆ ಮಾಡೋದು ಸರಿನಾ? ಎಂದು ಆರ್​.ಅಶೋಕ್​ ಮುಂದೆ ಕಣ್ಣೀರಿಟ್ಟ ಮೂಡಿಗೆರೆ ಶಾಸಕ!

    ಬೆಂಗಳೂರು: ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ತಾಲೂಕುಗಳ ಪಟ್ಟಿಗೆ ಸೇರಿಸದೆ ಅನ್ಯಾಯ ಮಾಡಲಾಗಿದೆ. ರಾಜಕೀಯ ಕಾರಣಕ್ಕೆ ಘೋಷಣೆ ಮಾಡಿಲ್ಲ. 2019ರಲ್ಲಿ ನಮ್ಮ ಕ್ಷೇತ್ರದಲ್ಲಿ ಅತಿವೃಷ್ಟಿಯಾಯಾಯ್ತು, 6 ಮಂದಿ ಮೃತಪಟ್ಟರು. ಮನೆಗಳೂ ನೀರು ಪಾಲಾದವು. ಆದರೆ, ಪರಿಹಾರ ಕೊಡಲಿಲ್ಲ. ಕಳೆದ ವರ್ಷವೂ ತಾಲೂಕಿನಲ್ಲಿ ಅತಿವೃಷ್ಟಿ ಸಂಭವಿಸಿತು. ಆದರೂ ನಮ್ಮ ತಾಲೂಕನ್ನ ಆ ಪಟ್ಟಿಗೆ ಸೇರಿಲ್ಲ ಎಂದು ಆಕ್ರೋಶ ಹೊರಹಾಕಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಗುರುವಾರ ವಿಧಾನಸೌಧದ ಗಾಂಧಿಪ್ರತಿಮೆ ಬಳಿ ಆಡಳಿತ ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸಿದರು.

    ಶಿವಮೊಗ್ಗವನ್ನು ಅತಿವೃಷ್ಟಿ ತಾಲೂಕಿಗೆ ಸೇರಿಸಿದ್ದಾರೆ. ಆದರೆ, ಮೂಡಿಗೆರೆ ಗುಡ್ಡಗಾಡು ಪ್ರದೇಶ. ಮೂಡಿಗೆರೆಯಲ್ಲಿ ಮಳೆ ಬರಲ್ಲ ಎಂದು ನಿರ್ಧರಿಸಿದ್ದಾರೆ. ಅದನ್ನ ಯಾರಾದ್ರೂ ನಂಬುತ್ತಾರಾ? ನಾನು ಸೌಮ್ಯ ಸ್ವಭಾವದವನು. ಹಾಗಾಂತ ಇದು ದೌರ್ಬಲ್ಯ ಅಲ್ಲ. ಇಂದು ಸಂಜೆವರೆಗೂ ಇಲ್ಲೇ ಕೂರುತ್ತೇನೆ. ನಮ್ಮ ತಾಲೂಕನ್ನು ಅತಿವೃಷ್ಟಿ ಪಟ್ಟಿಗೆ ಸೇರಿಸಬೇಕು. ನನ್ನ ಧ್ವನಿಗೆ ನಮ್ಮ ಸರ್ಕಾರದಲ್ಲೇ ಬೆಲೆ ಸಿಗ್ತಿಲ್ಲ. ಮೀಸಲು ಕ್ಷೇತ್ರ ಅನ್ನೋ ಕಾರಣಕ್ಕೋ ಏನೋ ಕಡೆಗಣಿಸ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಎನ್​ಡಿಆರ್​ಎಫ್ ಪಟ್ಟಿಯಲ್ಲಿ ಮೂಡಿಗೆರೆಯನ್ನು ಸೇರಿಸಬೇಕು. ನಮ್ಮ ಕ್ಷೇತ್ರದ ಜನರಿಗೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

    ಮೂಡಿಗೆರೆ ಶಾಸಕರ ಪ್ರತಿಭಟನೆ ವಿಚಾರ ತಿಳಿದು ಆರ್​. ಅಶೋಕ್​ ಸ್ಥಳಕ್ಕೆ ಬಂದು ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಿದರು. ‘ನಾನು ಹಿರಿಯ ಶಾಸಕ, ನನಗೇ ಹೀಗೆ ಮಾಡೋದು ಸರಿಯಾ? ಎಷ್ಟು ಬೇಜಾರಾಗಲ್ಲ ನಮಗೆ ಹೇಳಿ? ಮಂತ್ರಿ ಸ್ಥಾನ ಕೊಡದೇ ಇದ್ದಾಗಲೂ ನಾನು ನಿಮ್ಮೆಲ್ಲರ ಮಾತು ಕೇಳಿಲ್ವಾ? ನಾನು ಪಕ್ಷಕ್ಕೆ ಲಾಯಲ್ ಆಗಿಲ್ವಾ? ಯಾವತ್ತಾದ್ರೂ ಬ್ಲ್ಯಾಕ್ ಮೇಲ್ ಮಾಡಿದ್ದೀನಾ? ನೀವೆಲ್ಲ ಹೇಳಿದ್ದನ್ನು ಕೇಳಿಕೊಂಡಿಲ್ವಾ? ನನ್ನ ಮಾತಿಗೆ ತೂಕ ಇಲ್ಲ ಅಂದ್ರೆ ಹೇಗೆ? ಎಂದು ಎಂ.ಪಿ.ಕುಮಾರಸ್ವಾಮಿ ಕಣ್ಣೀರು ಹಾಕಿದರು.

    ಶೀಘ್ರವೇ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಮನವೊಲಿಸಿದ ಅಶೋಕ್​, ಎಂ.ಪಿ. ಕುಮಾರಸ್ವಾಮಿ ಅವರನ್ನು ತಮ್ಮ ಕಚೇರಿಗೆ ಕರೆದೊಯ್ದರು.

    ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

    ವಾಂತಿ ಮಾಡಲು ಹೋದ ಮಹಿಳೆ ಬಸ್​ನಿಂದ ಬಿದ್ದು ಸಾವು! ಕಗ್ಗತ್ತಲಿನ ಕಾಡಲ್ಲಿ 8 ಕಿ.ಮೀ ದೂರ ಶವ ಹೊತ್ತ ಗ್ರಾಮಸ್ಥರು

    ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts