More

    ಉಡುಪಿಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಉಡುಪಿ: ಅಂಕೋಲಾ ಮೂಲದ ಸಿದ್ದಿ ಜನಾಂಗದ ಮಹಿಳೆಯೊಬ್ಬರು ಉಡುಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ಮಕ್ಕಳಿಗೆ ಜನ್ಮನೀಡಿದ್ದಾರೆ. ತಾಯಿ- ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಹೆರಿಗೆ ನೋವು ಕಾಣಿಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆ ಅಂಕೋಲ ಮೂಲದ 27 ವರ್ಷದ ಮಹಿಳೆಯೊಬ್ಬರು ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಡಾ.ಕವಿಶಾ ಭಟ್, ಡಾ.ರಜನಿ ಕಾರಂತ್, ಡಾ.ಸೂರ್ಯನಾರಾಯಣ, ಡಾ.ಗಣಪತಿ ಹೆಗಡೆ ಹಾಗೂ ಡಾ.ಮಹಾದೇವ ಭಟ್ ವೈದ್ಯರ ತಂಡ ಮಹಿಳೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದು, ತ್ರಿವಳಿ ಮಕ್ಕಳು ಜನಿಸಿವೆ. ಇದರಲ್ಲಿ ಎರಡು ಗಂಡು ಮಗು, ಇನ್ನೊಂದು ಹೆಣ್ಣು ಮಗು.

    ಮೇ 23ರಂದು ಶಿವಮೊಗ್ಗ ನಗರದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಭದ್ರಾವತಿ ತಾಲೂಕಿನ ತಡಸ ಗ್ರಾಮದ ಅಲ್ಮಾಸ್‌ಬಾನು ಎಂಬುವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಮಹಾತಾಯಿ ಎನಿಸಿಕೊಂಡಿದ್ದರು. ಇದಾದ ಮರುದಿನ ಅಂದರೆ ಮೇ 24ರಂದು ಚಿತ್ರದುರ್ಗ ನಗರದ ಪತಂಜಲಿ ಆಸ್ಪತ್ರೆಯಲ್ಲಿ ಚಳ್ಳಕೆರೆ ತಾಲೂಕು ದೇವರಹಳ್ಳಿಯ ಕೆ.ಸುಮಯಾ ಹುಸೇನ್‌ಪೀರ್ ಅವರು ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು.

    4 ಮಕ್ಕಳಿಗೆ ಜನ್ಮ ನೀಡಿದ್ದ ಮಹಾತಾಯಿ ಆಸ್ಪತ್ರೆಯಿಂದ ಬಿಡುಗಡೆ: ತಾಯಿ-ಮಕ್ಕಳಿಗೆ ಬೀಳ್ಕೊಟ್ಟ ವೈದ್ಯರು

    ಸ್ಮಶಾನಕ್ಕೆ ಸಾಗಿಸುತ್ತಿದ್ದ ಶವವನ್ನು ಚಟ್ಟದಿಂದ ಕೆಳಗಿಳಿಸಿ ಶಿವಮೊಗ್ಗದ ಆಸ್ಪತ್ರೆಗೆ ರವಾನೆ! ಅಂತ್ಯಕ್ರಿಯೆಗೆ ಬಂದ ಗ್ರಾಮಸ್ಥರಿಗೆ ಶಾಕ್​

    ಚಿರತೆ ದಾಳಿಗೆ ಬಲಿಯಾಗಿದ್ದ ಕರು ಶವವನ್ನು ಪತ್ತೆಹಚ್ಚಿದ ತಾಯಿಹಸು: ಮಳವಳ್ಳಿಯಲ್ಲಿ ಮನಕಲಕುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts