More

    ದೇಗುಲಗಳ ಬಳಿ ಅಸಹ್ಯ ಮಾಡುತ್ತಿದ್ದವನ ಬಂಧನ: ಕಾಂಡೋಮ್​ ಕಿರಾತಕನ ಆ ಮಾತು ಕೇಳಿ ಪೊಲೀಸರೇ ದಂಗಾದ್ರು

    ಮಂಗಳೂರು: ಕಳೆದ ಒಂದು ವರ್ಷದಿಂದ ಮಂಗಳೂರು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ‘ಧಾರ್ಮಿಕ ಕ್ಷೇತ್ರಗಳಲ್ಲಿ ಕಾಂಡೋಮ್’ ಪ್ರಕರಣದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದು, ಈತನ ಕತೆ ಕೇಳಿ ಪೊಲೀಸರೇ ಅರೆಕ್ಷಣ ದಂಗಾಗಿದ್ದಾರೆ.

    ಮಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ಬಳಸಿದ ಕಾಂಡೋಮ್​ಗಳು ಪದೇಪದೆ ಪತ್ತೆಯಾಗುತ್ತಿದ್ದವು. ಭಕ್ತರ ಸೋಗಿನಲ್ಲಿ ಬರುತ್ತಿದ್ದ ದುಷ್ಕರ್ಮಿಗಳು ದೇಗುಲದಲ್ಲಿ ಕಾಡೋಂಮ್ ಎಸೆದು ಎಸ್ಕೇಪ್​ ಆಗುತ್ತಿದ್ದರು. ಕೋಮುದ್ವೇಷ ಹರಡಲೆಂದೇ ಅಶ್ಲೀಲ ವಸ್ತುಗಳನ್ನು ಎಸೆದು ಅಪಚಾರ ಮಾಡುತ್ತಿದ್ದಾರೆ. ಅಂತಹ ಕಿಡಿಗೇಡಿಗಳನ್ನು ಪತ್ತೆ ಮಾಡಿ ಬಂಧಿಸಬೇಕು ಎಂದು ಸ್ಥಳೀಯರ ಆಗ್ರಹ ದಟ್ಟವಾಗಿ ಕೇಳಿಬಂದಿತ್ತು. ಈ ಕೃತ್ಯ ಖಂಡಿಸಿ ಹಿಂದು ಸಂಘಟನೆ ಕಾರ್ಯಕರ್ತರು ಕುತ್ತಾರಿನಲ್ಲಿರುವ ಕೊರಗಜ್ಜನ ಮೂಲ ಕಟ್ಟೆಗೆ ಬೃಹತ್ ಪಾದಯಾತ್ರೆಯನ್ನೂ ಮಾಡಿದ್ದರು. ಅತ್ತ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರೂ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಇಷ್ಟೆಲ್ಲ ಬೆಳವಣಿಗೆ ಬಳಿಕ ಡಿ.27ರಂದು ಮಂಗಳೂರಿನ ಮಾರ್ನಮಿಕಟ್ಟೆ ಬಳಿಯ ಕೊರಗಜ್ಜನಕಟ್ಟೆಯಲ್ಲಿ ಬಳಸಿದ ಕಾಂಡೋಮ್​ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪಾಂಡೇಶ್ವರ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿಯ ದೃಶ್ಯಾವಳಿ ಪರಿಶೀಲಿಸಿದ್ದರು. ಅನುಮಾನಸ್ಪದ ವ್ಯಕ್ತಿಯ ಜಾಡು ಹಿಡಿದು ಹೊರಟ ಪೊಲೀಸರ ಕೈಗೆ ಕೋಟೆಕಾರು ನಿವಾಸಿ ದೇವದಾಸ್ ದೇಸಾಯಿ(62) ಸಿಕ್ಕಿಬಿದ್ದ. ಈತನನ್ನ ವಶಕ್ಕೆ ಪಡೆದ ಪೊಲೀಸರು ಸತ್ಯ ಕಕ್ಕಿಸಿದ್ದಾರೆ.

    ಹೌದು, ಕೊರಗಜ್ಜನ ಕಟ್ಟೆಗೆ ಕಾಂಡೋಮ್​ ಎಸೆದದ್ದು ತಾನೇ ಎಂದು ಒಪ್ಪಿಕೊಂಡಿರುವ ವೃದ್ಧ ದೇವದಾಸ್ ದೇಸಾಯಿ, ಚಿತ್ರ-ವಿಚಿತ್ರ ಹೇಳಿಕೆ ನೀಡಿದ್ದಾನೆ. ‘ನಾನು ಮೂಲತಃ ಹುಬ್ಬಳ್ಳಿಯ ಉಣ್ಕಲ್​ನವ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿದ್ದ ನನ್ನ ತಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದರು. ನನಗೆ ಮದುವೆ ಆಗಿ ಒಬ್ಬ ಮಗಳು ಇದ್ದಳು. ಪತ್ನಿ ನನ್ನನ್ನು ಬಿಟ್ಟು ಚಿಕ್ಕಮಗಳೂರಲ್ಲಿ ನೆಲೆಸಿದ್ದಾಳೆ. ಮಗಳು ಅಲ್ಲೇ ಇದ್ದಾಳೆ… ಏಸು ಹೊರತಾಗಿ ಇನ್ನೆಲ್ಲಾ ದೇವರು ಅಪವಿತ್ರ. ಆದ್ದರಿಂದಲೇ ಅಂತಹ ಕ್ಷೇತ್ರಗಳಿಗೆ ಅಪವಿತ್ರವಾದ ವಸ್ತುಗಳನ್ನು ಹಾಕುತ್ತಿದ್ದೆ. ಭೂಮಿ ವಿನಾಶಕ್ಕೆ ಬಂದಿದೆ. ಎಲ್ಲರೂ ಅಂತ್ಯವಾಗುತ್ತಾರೆ. ಏಸು ಒಬ್ಬನೇ ಎಲ್ಲರನ್ನೂ ಕಾಪಾಡಬೇಕು‌. ಇನ್ಯಾವುದೇ ಧರ್ಮದ ದೇವರು ಈ ಅಂತ್ಯವನ್ನು ತಡೆಯಲು ಸಾಧ್ಯವಿಲ್ಲ. ಏಸು ಒಬ್ಬನೇ ಶ್ರೇಷ್ಠ… ಅದಕ್ಕೆ ಬೇರೆ ದೇವರ ಸನ್ನಿಧಾನದಲ್ಲಿ ಅಪವಿತ್ರ ವಸ್ತುಗಳನ್ನು ಹಾಕುತ್ತಿದ್ದೆ. ಮನುಷ್ಯನಿಗೆ ಆಯಸ್ಸು ಇರೋದೆ 70 ವರ್ಷ. ನಾನೀಗ ಜೈಲಿಗೆ ಹೋಗುತ್ತಿರೋದಕ್ಕೆ ಪಶ್ಚತ್ತಾಪವಿಲ್ಲ. ನಾನು ಇಲ್ಲೇ ಇದ್ದಿದ್ದರೆ ಇನ್ನೊಂದಷ್ಟು ವರ್ಷ ಹಿಂದು, ಮುಸ್ಲಿಂ, ಸಿಖ್ ಧಾರ್ಮಿಕ ಕ್ಷೇತ್ರಗಳ ಬಳಿ ಕಾಂಡೋಮ್​ ಹಾಕಲು ಅವಕಾಶ ಸಿಗುತ್ತಿತ್ತು…’ ಎಂದು ಆರೋಪಿ ಹೇಳಿದ್ದಾನೆ. ಈತನ ಹೇಳಿಕೆ ಕೇಳಿ ಅರೆಕ್ಷಣ ಪೊಲೀಸರೇ ದಂಗಾಗಿದ್ದಾರೆ.

    ದೇಗುಲಗಳ ಬಳಿ ಅಸಹ್ಯ ಮಾಡುತ್ತಿದ್ದವನ ಬಂಧನ: ಕಾಂಡೋಮ್​ ಕಿರಾತಕನ ಆ ಮಾತು ಕೇಳಿ ಪೊಲೀಸರೇ ದಂಗಾದ್ರು

    ಈತ ಹಿಂದು ದೇವಾಲಯ ಮಾತ್ರವಲ್ಲ, ಮುಸ್ಲಿಂ, ಸಿಖ್ ಧಾರ್ಮಿಕ ಕ್ಷೇತ್ರಗಳ ಬಳಿಯೂ ಅಸಹ್ಯ ಕೃತ್ಯವೆಸಗುತ್ತಿದ್ದ. ಕಾಂಡೋಮ್ ಹಾಕುವುದ ಮಾತ್ರವಲ್ಲ, ಪೇಪರ್​ಗಳಲ್ಲಿ ಬೇರೆ ಬೇರೆ ಧರ್ಮದ ದೇವರ ಫೋಟೊಗಳನ್ನು ವಿರೂಪಗೊಳಿಸಿ ಅಲ್ಲೇ ಎಸೆದು ಹೋಗುತ್ತಿದ್ದ. ಇದುವರೆಗೂ ಮಂಗಳೂರಿನಲ್ಲಿ ಒಟ್ಟು 18 ಧಾರ್ಮಿಕ ಕ್ಷೇತ್ರಗಳಿಗೆ ಅಶ್ಲೀಲ ವಸ್ತು ಹಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ. ಅವುಗಳ ಪಟ್ಟಿ ಇಲ್ಲಿದೆ.
    1. ಮಾರ್ನಮಿಕಟ್ಟೆಯ ಕೊರಗಜ್ಜ ಕಟ್ಟೆ
    2. ಬಾಬುಗುಡ್ಡೆಯ ಕೊರಗಜ್ಜನ ಹುಂಡಿ
    3. ಕೊಂಡಾಣ ದೇವಸ್ಥಾನ
    4. ಮಂಗಳಾದೇವಿ ದೇವಸ್ಥಾನ
    5. ಕದ್ರಿ ದೇವಸ್ಥಾನ ಸಮೀಪದ ರಿಕ್ಷಾ ಪಾರ್ಕಿನ​ ಬಳಿ ಇರುವ ಕಾಣಿಕೆ ಡಬ್ಬಿ
    6. ಪಂಪ್ ವೆಲ್ ಬಳಿಯ ಒಮೆಗಾ ಆಸ್ಪತ್ರೆ ಸಮೀಪದ ಕಲ್ಲುರ್ಟಿ ದೇವಸ್ಥಾನ
    7. ಉಳ್ಳಾಲದ ದರ್ಗಾ ಬಳಿ ಮಸೀದಿಯ ಕಾಣಿಕೆ ಡಬ್ಬಿ
    8. ಕಲ್ಲಾಫು ನಾಗನ ಕಟ್ಟೆ
    9. ಕೊಟ್ಟಾರ ಚೌಕಿಯ ಕಲ್ಲುರ್ಟಿ ದೇವಸ್ಥಾನ
    10. ಉರ್ವಾ ಮಾರಿಗುಡಿ ದೇವಸ್ಥಾನದ ಹುಂಡಿ
    11. ಕುತ್ತಾರು ಕೊರಗಜ್ಜನ ಕಟ್ಟೆ
    12. ಕುಡುಪು ದೇವಸ್ಥಾನ
    13. ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ
    14. ನಂದಿಗುಡ್ಡೆಯ ಕೊರಗಜ್ಜನ ಗುಡಿ
    15. ಎಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ
    16. ಬಂಗ್ರ ಕೂಳೂರಿನ ಸಿಖ್ ಗುರುದ್ವಾರ ಗುಡಿ
    17. ಮಂಕಿಸ್ವಾಂಡ್​ನ ಕೋಟ ಶ್ರೀ ಬಬ್ಬು ಸ್ವಾಮಿ ದೇವಸ್ಥಾನ
    18. ಜೆಪ್ಪು ಮಹಾಕಾಳಿ ಪಡ್ಪುವಿನ ಆದಿ ಮಹೇಶ್ವರಿ ದೈವಸ್ಥಾನ ಭಜನಾ ಮಂಡಳಿಯ ಕಾಣಿಕೆ ಡಬ್ಬಿ

    ಧಾರ್ಮಿಕ ಕ್ಷೇತ್ರಗಳಿಗೆ ಕಾಂಡೋಮ್​ ಹಾಕಿ ಅಪಚಾರ ಮಾಡುತ್ತಿದ್ದ ದುಷ್ಕರ್ಮಿ ದೇವದಾಸ್ ದೇಸಾಯಿಯನ್ನು ಪಾಂಡೇಶ್ವರ ಠಾಣೆ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಆತ ಮಾನಸಿಕ ಅಸ್ವಸ್ಥನಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

    ಕೊರಗಜ್ಜ ದೇವರ ಗುಡಿ ಮುಂದೆ ಉಪಯೋಗಿಸಿದ ಕಾಂಡೋಮ್​ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು

    ತಾಯಿ ಗರ್ಭದಲ್ಲೇ ಕಲ್ಲಾದ 7 ತಿಂಗಳ ಮಗು! ಬರೋಬ್ಬರಿ 35 ವರ್ಷ ಹೊಟ್ಟೆಯಲ್ಲೇ ಇತ್ತು ಕಲ್ಲಿನ ಮಗು… ವೈದ್ಯರೇ ಶಾಕ್​

    ಅರ್ಚನಾರೆಡ್ಡಿ ಕೇಸ್​ಗೆ ಮತ್ತೊಂದು ಟ್ವಿಸ್ಟ್​: ನವೀನ್​ 2ನೇ ಅಲ್ಲ, 3ನೇ ಸಂಬಂಧ! ಆಕೆಯ ಮಗಳನ್ನೂ ಪಟಾಯಿಸಿದ್ದ…

    ಲೈಂಗಿಕ ಕ್ರಿಯೆ ವಿಚಾರಕ್ಕೆ ಹಿಂಸಿಸುತ್ತಾಳೆ, ಊಟ ಹಾಕ್ತಿಲ್ಲ, ಅವಳ ಕಾಟ ಸಹಿಸಲಾಗ್ತಿಲ್ಲ… ಎಂದು ಠಾಣೆಗೆ ಬಂದ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts