More

    ಮನೆ ನೀಡಿಲ್ಲ ಎಂದು ಪದೇಪದೆ ನನ್ನನ್ನು ಕೆಣಕಬೇಡಿ, ನನ್ಗೂ ಸಿಎಂ ಆಗುವ ಅರ್ಹತೆ ಇದೆ: ಸಿದ್ದುಗೆ ಸೋಮಣ್ಣ ಹಿಗ್ಗಾಮುಗ್ಗಾ ತರಾಟೆ

    ಮೈಸೂರು: ‘ಸುಡುಗಾಡು ಸಿದ್ಧ’ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ. ಅವರ ಕಾಲದಲ್ಲಿ ಬರಿ ಘೋಷಣೆ ಅಗಿತ್ತು. ಆದರೀಗ ಅನುದಾನ ನೀಡಿ ನಾವು ಮನೆ ಕಟ್ಟಿಸಿಕೊಡುತ್ತಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ವಸತಿ ಸಚಿವ ವಿ.ಸೋಮಣ್ಣ, ಮನೆ ನೀಡಿಲ್ಲ ಎಂದು ಪದೇಪದೆ ನನ್ನನ್ನು ಕೆಣಕಬೇಡಿ. ನೀವು ನೂರು ಬಾರಿ ಸುಳ್ಳು ಹೇಳಿದರೂ ಅದು ಸತ್ಯ ಆಗಲ್ಲ. ಈ ವಿಚಾರವಾಗಿ ನಿಮ್ಮ ಕ್ಷೇತ್ರ ಬಾದಾಮಿಗೆ ಬಂದು ಚರ್ಚೆ ಮಾಡಲು ನಾನು ಸಿದ್ಧ. ನೀವು ಸಿದ್ಧರಿದ್ದೀರಾ? ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ವಿರುದ್ಧ ಕಿಡಿಕಾರುವ ಭರದಲ್ಲಿ ‘ಸುಡುಗಾಡು ಸಿದ್ಧ’ ಪದ ಬಳಸಿದ್ದಾರೆ.

    ಬಿಜೆಪಿ ಅವಧಿಯಲ್ಲಿ ಒಂದೇಒಂದು ಮನೆಯನ್ನೂ ನೀಡಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಸೋಮಣ್ಣ, ಮನೆ ನೀಡಿಲ್ಲ ಎಂದು ಪದೇಪದೆ ನನ್ನನ್ನು ಕೆಣಕಬೇಡಿ. ನೀವು ನೂರು ಬಾರಿ ಸುಳ್ಳು ಹೇಳಿದರೂ ಅದು ಸತ್ಯ ಆಗಲ್ಲ. ಈ ವಿಚಾರವಾಗಿ ನಿಮ್ಮ ಕ್ಷೇತ್ರ ಬಾದಾಮಿಗೆ ಬಂದು ಚರ್ಚೆ ಮಾಡಲು ನಾನು ಸಿದ್ಧ. ನೀವು ಸಿದ್ಧರಿದ್ದೀರಾ? ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.

    ನಿಮ್ಮ ಅವಧಿಯಲ್ಲಿ ಕೇವಲ ಘೋಷಣೆ ಅಗಿ ಎಲ್ಲವೂ ಎಡವಟ್ಟಾಗಿತ್ತು. ಎಲ್ಲೆಡೆ ಮನೆ ನೀಡಿಲ್ಲ ಎನ್ನುವ ತಾವು ಹಣ ಬಿಡುಗಡೆಯನ್ನೇ ಮಾಡಿಲ್ಲ. ಆದರೆ, ನಾವು ಸುಡಗಾಡು ಸಿದ್ಧ ಮಾಡಿದ್ದನ್ನೆಲ್ಲ ಸರಿ ಮಾಡಿ ಮನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೀಘ್ರವೇ ಮನೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸೋಮಣ್ಣ ಕಟುವಾಗಿಯೇ ಪ್ರತಿಕ್ರಿಯಿಸಿದರು.

    ನಾನು ನಿಮ್ಮ ಗರಡಿಯಲ್ಲೇ ಇದ್ದವನು. ನಿಮಗೆ ಅದೃಷ್ಟ ಇತ್ತು ಸಿಎಂ ಆಗಿದ್ದೀರಿ. ನನಗೆ ಅದೃಷ್ಟ ಇಲ್ಲ ನಾನು ಆಗಿಲ್ಲ. ಆದರೆ, ನನಗೂ ಸಿಎಂ ಅಗುವ ಎಲ್ಲ ಅರ್ಹತೆ ಇದೆ. ಹಳೆಯದನ್ನು ಮರೆಯದೆ ಮೆಲುಕು ಹಾಕುತ್ತೀರಿ. ನಾಲಿಗೆ ಮೇಲೆ ಹಿಡಿತವಿರಲಿ. ಎಲ್ಲರನ್ನೂ ಒಂದೇ ರೀತಿ ನೋಡಬೇಡಿ ಎಂದು ಕ್ಷಣ ಗದ್ಗದಿತರಾಗಿಯೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ರಾಜಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಬೇಡಿ. ನಾವು ಕೊಟ್ಟಿದ್ದು, ನೀವು ಕೊಟ್ಟಿದ್ದು ಅನ್ನೋದಲ್ಲ. ಜನರಿಗೆ ಮನೆ ಸಿಗಬೇಕು. ಸಿದ್ದರಾಮಯ್ಯ ಸಹ ಮನೆಯಿಂದ ತಂದು ಕೊಟ್ಟಿಲ್ಲ, ನಾನು ಸಹ ಮನೆಯಿಂದ ತಂದು ಕೊಡಲ್ಲ. ಇನ್ನು ಮುಂದೆಯಾದರೂ ಸೋಮಣ್ಣನನ್ನು ಟಾರ್ಗೆಟ್​ ಮಾಡುವುದನ್ನು ಬಿಡಿ ಎಂದು ಗುಡುಗಿದರು.

    ಧರ್ಮಸ್ಥಳಕ್ಕೆ ಬಂದ ಹಾಲಪ್ಪ-ಬೇಳೂರು: ಮುಖಾಮುಖಿ ಆಣೆ-ಪ್ರಮಾಣ ಮಾಡ್ಲಿಲ್ಲ… ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಿ ಹೋಗಿದ್ದೇಕೆ?

    ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

    ಬೆಂಗಳೂರಲ್ಲಿ ಒಣ ಕೊಂಬೆ ಬಿದ್ದು ಕೋಮಾದಲ್ಲಿದ್ದ ಬಾಲಕಿ ಸಾವು: 702 ದಿನ ಸತತ ಚಿಕಿತ್ಸೆಯ ನಂತರವೂ ಬದುಕಲಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts