More

    ವಿದೇಶದಲ್ಲಿರುವೆ, ಬೆಂಗಳೂರಿಗೆ ಬಂದು ಮದ್ವೆ ಆಗ್ತೀನಿ… ಎಂದು ಯುವತಿಗೆ ಆಸೆ ಹುಟ್ಟಿಸಿದವ ಮಾಡಬಾರದು ಮಾಡಿಬಿಟ್ಟ

    ಬೆಂಗಳೂರು: ಮದುವೆಗಾಗಿ ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ವರನನ್ನು ಹುಡುಕಾಟ ನಡೆಸುತ್ತಿದ್ದ ಬೆಂಗಳೂರಿನ ಯುವತಿಗೆ ವ್ಯಕ್ತಿಯೊಬ್ಬ ಮದ್ವೆ ಆಸೆ ಹುಟ್ಟಿಸಿ ವಂಚಿಸಿದ್ದಾನೆ. ನೊಂದ ಯುವತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

    ಸುಧಾಮನಗರದ 29 ವರ್ಷದ ಯುವತಿ ವಂಚನೆಗೆ ಒಳಗಾದವಳು. ಬ್ಯಾಂಕ್​ವೊಂದರ ಉದ್ಯೋಗಿಯಾಗಿರುವ ಈಕೆ, ಮ್ಯಾಟ್ರಿಮೋನಿಯಲ್‌ನಲ್ಲಿ ಸ್ವ-ವಿವರ ಅಪ್‌ಲೋಡ್ ಮಾಡಿ ವರನ ಹುಡುಕಾಟ ನಡೆಸುತ್ತಿದ್ದರು. 2021ರ ಡಿಸೆಂಬರ್ 30ರಂದು ಯುವತಿಗೆ ಕರೆ ಮಾಡಿದ ರಾಜೇಶ್ ಕುಮಾರ್​ ಎಂಬಾತ, ತಾನು ಯುಎಸ್‌ನಲ್ಲಿ ಸಂಶೋಧಕ. ಮ್ಯಾಟ್ರಿಮೋನಿಯಲ್​ನಲ್ಲಿ ನಿಮ್ಮ ಫೋಟೋ ನೋಡಿದೆ. ನನಗೆ ಇಷ್ಟ ಆಗಿದ್ದೀರಿ. ನೀವು ಒಪ್ಪಿದರೆ ಬೆಂಗಳೂರಿಗೆ ಬಂದು ನಿಮ್ಮನ್ನು ಮದುವೆಯಾಗಿ ಬೆಂಗಳೂರಲ್ಲೇ ನೆಲೆಸುವೆ ಎಂದಿದ್ದ.

    ಈ ಮಾತನ್ನು ನಂಬಿದ ಯುವತಿ, ಮದುವೆಗೆ ಒಪ್ಪಿದ್ದಳು. ಬಳಿಕ ಯುವತಿ ಮತ್ತು ರಾಜೇಶ್​ ನಡುವೆ ಮೊಬೈಲ್‌ನಲ್ಲಿ ಸಂಭಾಷಣೆ ಶುರುವಾಗಿತ್ತು. ‘ಯುಎಸ್‌ನಿಂದ ಬರಬೇಕಾದರೆ ಮದುವೆ ಪ್ರಮಾಣ ಪತ್ರ ಮಾಡಿಸಬೇಕು. ಅದಕ್ಕೆ ಬ್ಯಾಂಕ್ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಬೇಕಾಗಿದೆ. ನನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ರೆ ಅನುಕೂಲ ಆಗುತ್ತೆ…’ ಎಂದು ಯುವತಿಗೆ ಪುಸಲಾಯಿಸಿದ್ದ. ರಾಜೇಶ್​ನ ಮಾತು ನಂಬಿದ ಯುವತಿ, ಆತನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 7.55 ಲಕ್ಷ ರೂ. ವರ್ಗಾವಣೆ ಮಾಡಿದ್ದಳು. ಆದರೆ, ರಾಜೇಶ್​ ಮಾತ್ರ ಬೆಂಗಳೂರಿಗೆ ಬರುವ ಯಾವುದೇ ಪ್ಲ್ಯಾನ್ ಮಾಡಿರಲಿಲ್ಲ. ಪದೇಪದೆ ಹಣ ಕೇಳಿದಾಗ ಅನುಮಾನ ಬಂದು ಯುವತಿ, ಕೇಂದ್ರ ವಿಭಾಗ ಸಿಇಎನ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ತುಮಕೂರಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರವೆಸಗಿದ್ದ ಎಎಸ್​ಐಗೆ 20 ವರ್ಷ ಜೈಲು! 4 ವರ್ಷದ ಹಿಂದೆ ನಡೆದಿತ್ತು ಹೀನ ಕೃತ್ಯ

    ಮುದ್ದಹನುಮೇಗೌಡ ಬಿಜೆಪಿ ಅಭ್ಯರ್ಥಿ? ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts