More

    ವಿದ್ಯಾರ್ಥಿಗಳ ಕಿಸ್ಸಿಂಗ್​ ಹುಚ್ಚಾಟ: ಮಂಗಳೂರು ಪೊಲೀಸ್​ ಕಮಿಷನರ್​ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ

    ಮಂಗಳೂರು: ನಗರದ ಪಿಯು ಕಾಲೇಜೊಂದರ ವಿದ್ಯಾರ್ಥಿಗಳ ನಡುವೆ ಕೊಠಡಿಯೊಂದರಲ್ಲಿ ನಡೆದ ಕಿಸ್ಸಿಂಗ್ ಪಂದ್ಯ ಪ್ರಕರಣದ ವಿಡಿಯೋ ವೈರಲ್​ ಆಗುತ್ತಿದ್ದಂತೆ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಮತ್ತು ಮೂವರು ವಿದ್ಯಾರ್ಥಿನಿಯರು ಈ ಪ್ರಕರಣದಲ್ಲಿದ್ದು, ವಿದ್ಯಾರ್ಥಿಗಳ ಮಧ್ಯೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿ ಜತೆ ಅಶ್ಲೀಲವಾಗಿ ತೊಡಗಿಸಿಕೊಂಡ ವಿಡಿಯೋ ವೈರಲ್​ ಆಗಿದ್ದು, ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದಾರೆ.

    ವಿಡಿಯೋ ವೈರಲ್​ ಆಗುತ್ತಿದ್ದಂತೆ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಈ ಘಟನೆ ನಡೆದು ನಾಲ್ಕು ತಿಂಗಳಾಗಿದೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಪ್ರಸಿದ್ಧ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ವಿಡಿಯೋ ಮಾಡಿದ ವಿದ್ಯಾರ್ಥಿ ಇತ್ತೀಚಿಗೆ ತನ್ನ ತರಗತಿಯ ವಾಟ್ಸ್​ಆ್ಯಪ್ ಗ್ರೂಪ್​ಗೆ ವಿಡಿಯೋ ಹಾಕಿದ್ದಾನೆ. ಈ ವಿಡಿಯೋ ಶಿಕ್ಷಕರ ಗಮನಕ್ಕೆ ಬಂದು ಆ ವಿದ್ಯಾರ್ಥಿ ಮತ್ತು ಇತರ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ಮಾಡುತ್ತಿದ್ದೇವೆ. ಈ ತಂಡದ ಇಬ್ಬರು ವಿದ್ಯಾರ್ಥಿಗಳು ಬಾವುಟಗುಡ್ಡೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ರೂಂ ಪಡೆದಿದ್ದರು. ಇಲ್ಲೇ ವಿದ್ಯಾರ್ಥಿಗಳು Truth-Dare ಆಟ ಆಡಿದ್ದಾರೆ. Truth ಅಂದ್ರೆ ಸತ್ಯ ಹೇಳಬೇಕು, Dare ಅಂದ್ರೆ ಹೇಳಿದ್ದನ್ನು ಮಾಡಿ ತೋರಿಸಬೇಕು. ಈ ಸಂದರ್ಭದಲ್ಲಿ Dare ಆಟದಂತೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ್ದಾರೆ. ಅಲ್ಲಿಯೇ ಈ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇನ್ನು ಈ ರೂಂನಲ್ಲಿ ವಿದ್ಯಾರ್ಥಿಗಳು ಮದ್ಯಪಾನ ಸೇರಿ ಮಾದಕ ವಸ್ತು ತೆಗೆದುಕೊಳ್ಳುತ್ತಿದ್ದರು. ಈ ವಿಚಾರ ರೂಂನ ಮಾಲೀಕರಿಗೆ ತಿಳಿದು ವಿದ್ಯಾರ್ಥಿಗಳನ್ನು ಹೊರಗೆ ಹಾಕಿದ್ದರು ಎಂದು ವಿವರಿಸಿದ್ದಾರೆ.

    Truth-Dare ಆಟದ ನೆಪದಲ್ಲಿ ಕಿಸ್ಸಿಂಗ್​ ಮಾಡುತ್ತಿರುವ ದೃಶ್ಯವನ್ನು ಸೆರೆಹಿಡಿದ ವಿದ್ಯಾರ್ಥಿಯೇ ಅದನ್ನು ವೈರಲ್ ಮಾಡಿದ್ದಾನೆ. ವಿದ್ಯಾರ್ಥಿನಿಯರ ಪಾಲಕರು ಮತ್ತು ವಿದ್ಯಾರ್ಥಿನಿಯರನ್ನೂ ಠಾಣೆಗೆ ಕರೆಸಿದ್ದೇವೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಗಂಭೀರ ಪ್ರಕರಣ ಆಗಿರೋದರಿಂದ ತನಿಖೆ ನಡೆಸಿ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

    ಮಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಇದಾಗಿದ್ದು, ಈ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳ ಮಧ್ಯೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿ ಜತೆ ಅಶ್ಲೀಲವಾಗಿ ತೊಡಗಿಸಿಕೊಂಡ ದೃಶ್ಯ ವೈರಲ್​ ಆದ ವಿಡಿಯೋದಲ್ಲಿದೆ. ಕಾಲೇಜು ಯೂನಿಫಾರಂನಲ್ಲೇ ಈ ವಿದ್ಯಾರ್ಥಿಗಳು ಇದ್ದಾರೆ.

    ಆರತಕ್ಷತೆ ವೇಳೆ ಕುಸಿದು ಬಿದ್ದು ಮದುಮಗ ಸಾವು! ಹೊಸಪೇಟೆಯಲ್ಲಿ ದುರಂತ ಘಟನೆ

    ಚಾಕೊಲೇಟ್​ ನುಂಗಿದ ಬಾಲಕಿ ಉಸಿರುಗಟ್ಟಿ ಸಾವು: ಬೈಂದೂರಲ್ಲಿ ಹೃದಯವಿದ್ರಾವಕ ಘಟನೆ

    ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ: ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರ ಬಾಳಲ್ಲಿ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts