ಚಾಕೊಲೇಟ್​ ನುಂಗಿದ ಬಾಲಕಿ ಉಸಿರುಗಟ್ಟಿ ಸಾವು: ಬೈಂದೂರಲ್ಲಿ ಹೃದಯವಿದ್ರಾವಕ ಘಟನೆ

ಉಡುಪಿ: ಚಾಕೊಲೇಟ್​ ತಿನ್ನುವ ಖುಷಿಯಲ್ಲಿ ಕವರ್​ ಸಮೇತ ಚಾಕೊಲೇಟ್ ನುಂಗಿದ 1ನೇ ತರಗತಿ ವಿದ್ಯಾರ್ಥಿನಿ ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ಸಂಭವಿಸಿದೆ. ಬವಳಾಡಿ ಮೂಲದ ಸಮನ್ವಿ(6) ಮೃತ ದುರ್ದೈವಿ. ಉಪ್ಪುಂದದ ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ ಸಮನ್ವಿ, ಬುಧವಾರ ಬೆಳಗ್ಗೆ ಶಾಲಾ ಬಸ್​ಗೆ ಕಾಯುತ್ತಿರುವ ವೇಳೆ ಕೈಯಲ್ಲಿದ್ದ ಚಾಕೊಲೇಟ್​​ ತಿನ್ನಲು ಹೋಗಿ ಕವರ್​ ಸಮೇತ ನುಂಗಿಬಿಟ್ಟಿದ್ದಾಳೆ. ಚಾಕೊಲೇಟ್​ ಗಂಟಲಲ್ಲಿ ಸಿಲುಕು ಉಸಿರಾಟಕ್ಕೆ ಸಮಸ್ಯೆ ಉಂಟಾಗಿ ಕೊನೆಯುಸಿರೆಳೆದಿದ್ದಾಳೆ. … Continue reading ಚಾಕೊಲೇಟ್​ ನುಂಗಿದ ಬಾಲಕಿ ಉಸಿರುಗಟ್ಟಿ ಸಾವು: ಬೈಂದೂರಲ್ಲಿ ಹೃದಯವಿದ್ರಾವಕ ಘಟನೆ