ಉಡುಪಿ: ಚಾಕೊಲೇಟ್ ತಿನ್ನುವ ಖುಷಿಯಲ್ಲಿ ಕವರ್ ಸಮೇತ ಚಾಕೊಲೇಟ್ ನುಂಗಿದ 1ನೇ ತರಗತಿ ವಿದ್ಯಾರ್ಥಿನಿ ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ಸಂಭವಿಸಿದೆ.
ಬವಳಾಡಿ ಮೂಲದ ಸಮನ್ವಿ(6) ಮೃತ ದುರ್ದೈವಿ. ಉಪ್ಪುಂದದ ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ ಸಮನ್ವಿ, ಬುಧವಾರ ಬೆಳಗ್ಗೆ ಶಾಲಾ ಬಸ್ಗೆ ಕಾಯುತ್ತಿರುವ ವೇಳೆ ಕೈಯಲ್ಲಿದ್ದ ಚಾಕೊಲೇಟ್ ತಿನ್ನಲು ಹೋಗಿ ಕವರ್ ಸಮೇತ ನುಂಗಿಬಿಟ್ಟಿದ್ದಾಳೆ.
ಚಾಕೊಲೇಟ್ ಗಂಟಲಲ್ಲಿ ಸಿಲುಕು ಉಸಿರಾಟಕ್ಕೆ ಸಮಸ್ಯೆ ಉಂಟಾಗಿ ಕೊನೆಯುಸಿರೆಳೆದಿದ್ದಾಳೆ. ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಗೆ ಬಾಲಕಿಯ ದೇಹ ರವಾನಿಸಲಾಗಿದೆ. ಪುಟ್ಟ ಕಂದಮ್ಮನ ದುರಂತ ಸಾವಿನ ಸುದ್ದಿ ಕೇಳಿ ಸ್ಥಳೀಯರು, ಶಾಲಾ ಸಿಬ್ಬಂದಿ-ಮಕ್ಕಳು ಮರುಕ ವ್ಯಕ್ತಪಡಿಸಿದ್ದಾರೆ. ಇನ್ನು ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗಗನಚುಕ್ಕಿ-ಭರಚುಕ್ಕಿಗೆ ಟೂರ್ ಪ್ಯಾಕೇಜ್ ಘೋಷಿಸಿದ ಕೆಎಸ್ಆರ್ಟಿಸಿ: ಪ್ರವಾಸ ದರ ತಲಾ 250 ರೂಪಾಯಿ
ಚಿಕ್ಕಬಳ್ಳಾಪುರದ ಸರ್ಕಾರಿ ಕಾಲೇಜಿನಲ್ಲಿ ವಾಮಾಚಾರ? ಪ್ರಾಂಶುಪಾಲರ ಕೊಠಡಿಯಲ್ಲಿ ಕೆಂಪು ದಾರ-ಬೊಂಬೆ ಪತ್ತೆ!