More

    ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

    ಮಂಗಳೂರು: ಪೂಜೆ ಮಾಡಿಸಲೆಂದು ಪುರೋಹಿತರೊಬ್ಬರನ್ನು ಮನೆಗೆ ಕರೆಸಿಕೊಂಡ ಈ ಖತರ್ನಾಕ್​ ದಂಪತಿ ಮಾಡಬಾರದ್ದು ಮಾಡಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಕೊಡಗು ಜಿಲ್ಲೆ ಸೋಮವಾರಪೇಟೆಯ ಭವ್ಯ ಮತ್ತು ಈಕೆಯ 2ನೇ ಗಂಡ, ಹಾಸನದ ಅರಕಲಗೂಡು ನಿವಾಸಿ ಕುಮಾರ್ ಬಂಧಿತರು. ಇವರಿಬ್ಬರೂ ಮಂಗಳೂರಿನ ಮೇರಿಹಿಲ್​ನ ಅಪಾರ್ಟ್‌ಮೆಂಟ್​ನಲ್ಲಿ ವಾಸವಿದ್ದರು. ಇವರ ಹಿನ್ನೆಲೆ ಕೇಳಿದ್ರೆ ಶಾಕ್​ ಆಗ್ತೀರಿ.

    ಮನೆಯಲ್ಲಿ ಪೂಜೆ ಮಾಡಿಸಬೇಕಿದೆ. ದಯವಿಟ್ಟು ನಮ್ಮ ಮನೆಗೆ ಬಂದು ಪೂಜೆ ಮಾಡಿ ಎಂದು ಚಿಕ್ಕಮಗಳೂರು ಮೂಲದ ಪುರೋಹಿತರೊಬ್ಬರನ್ನು ಭೇಟಿ ಮಾಡಿದ ಈ ದಂಪತಿ, ನಮ್ಮ ಮನೆಯಲ್ಲಿ ಪದೇಪದೆ ಸಮಸ್ಯೆಗಳು ಸಂಭವಿಸುತ್ತಿವೆ. ದಯವಿಟ್ಟು ಮನೆಯಲ್ಲೊಂದು ಪೂಜೆ ಮಾಡಿ ಎಂದು ಮನೆಗೆ ಆಹ್ವಾನಿಸಿದ್ದರು. ಪೂಜೆ ಮಾಡಲೆಂದು ಪುರೋಹಿತ ಮನೆಗೆ ಬರುತ್ತಿದ್ದಂತೆ ವರಸೆ ಬದಲಿಸಿದ ದಂಪತಿ, ಅರ್ಚಕರರೊಂದಿಗೆ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಬೆದರಿಸಿ ಅರ್ಚಕರಿಂದ ಬರೋಬ್ಬರಿಂದ 34 ಲಕ್ಷ ರೂ. ವಸೂಲಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಅಷ್ಟೇ ಅಲ್ಲ, ಇನ್ನಷ್ಟು ಹಣಕ್ಕಾಗಿ ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಬೆದರಿಕೆ ಹಾಕಿದ್ದರು.

    ಈ ಪ್ರಕರಣದ ತನಿಖೆಯನ್ನು ಕೈಗೊಂಡ ಮಂಗಳೂರು ಸಿಸಿಬಿ ಪೊಲೀಸ್ ಇನ್​ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತ್ರತ್ವದ ತಂಡ ಖತರ್ನಾಕ್​ ದಂಪತಿಯನ್ನು ಬಂಧಿಸಿದೆ. ಆರೋಪಿಗಳಿಂದ 37,000 ರೂ. ಮೌಲ್ಯದ ಎರಡು 2 ಚಿನ್ನದ ರಿಂಗ್, 31 ಸಾವಿರ ನಗದು ಮತ್ತು 4 ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ಜತೆ ಇತರರು ಕೂಡ ಭಾಗಿಯಾಗಿ ಹಣ ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಆರೋಪಿಗಳು ಇನ್ನಷ್ಟು ಹಣಕ್ಕಾಗಿ ಪೊಲೀಸರ, ಪೊಲೀಸ್ ಸಬ್​ಇನ್​ಸ್ಪೆಕ್ಟರ್ ಅವರ, ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಸಂತ್ರಸ್ತ ಅರ್ಚಕರಿಗೆ ಬೆದರಿಕೆ ಹಾಕಿದ್ದಾರೆ. ಇನ್ನಷ್ಟು ಹಣ ಕೊಡಬೇಕು. ಇಲ್ಲವಾದಲ್ಲಿ ಮಾಧ್ಯಮಗಳಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದರು. ಅಷ್ಟೇ ಅಲ್ಲ, ಆರೋಪಿ ಕುಮಾರ್ ತನ್ನ ಹೆಸರನ್ನು ರಾಜು ಎಂದು ತಿಳಿಸಿ ಮಧ್ಯವರ್ತಿಯಾಗಿ ದೂರುದಾರನಿಗೆ ಸಹಾಯ ಮಾಡುವ ನೆಪದಲ್ಲೂ ಹಣ ವಸೂಲಿ ಮಾಡಿದ್ದಾನೆ.

    ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡಿದ ಹಣದಲ್ಲಿ ದಂಪತಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದ ಆರೋಪಿಗಳು, ಈ ಕೃತ್ಯವೆಸಗಿದ ನಂತರ ಸಂತ್ರಸ್ತ ಪುರೋಹಿತನಿಂದ ಸುಲಿಗೆ ಮಾಡಿದ ಹಣದಲ್ಲಿ 10 ಲಕ್ಷ ಹಣ ಕೊಟ್ಟು ಪ್ಲ್ಯಾಟ್​ವೊಂದನ್ನು ಲೀಸ್​ಗೆ ಪಡೆದುಕೊಂಡು ವಾಸವಿದ್ದರು. ಅಷ್ಟೇ ಅಲ್ಲ, ಪ್ಲ್ಯಾಟ್​ಗೆ ಸುಮಾರು 7 ಲಕ್ಷ ರೂ. ಮೌಲ್ಯದ ಮನೆ ಸಾಮಗ್ರಿ ಖರೀದಿಸಿದ್ದರು. ಹೊಸ ದ್ವಿಚಕ್ರ ವಾಹನ ಖರೀದಿಸಿದ್ದರು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts