More

    ಆಹಾ ಎಷ್ಟು ರುಚಿಯಾಗಿದೆ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವವರು ಇಲ್ಲಿ ನೋಡಿ.. ಇದು ಎಂಜಲು ರೊಟ್ಟಿ..!

    ಲಖನೌ: ತಂದೂರಿ ರೊಟ್ಟಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೋಟೆಲ್​ನಲ್ಲಿ ಟೇಬಲ್​ ಮೇಲೆ ತಂದೂರಿ ರೊಟ್ಟಿ ಜತೆಗೆ ಯಾವುದಾದರೂ ಕರಿ ಬಂದಿತೆಂದರೆ ಬಾಯಿ ಚಪ್ಪರಿಸಿಕೊಂಡು ತಿಂದುಬಿಡುತ್ತೇವೆ. ಆದರೆ ಕೆಲವು ಪಾಪಿಗಳು ಅದೆಷ್ಟರ ಮಟ್ಟಿಗೆ ಹೊಲಸು ಬುದ್ಧಿ ಇಟ್ಟುಕೊಂಡಿರುತ್ತಾರೆಂದರೆ, ಜನರು ತಿನ್ನುವ ರೊಟ್ಟಿಯಲ್ಲಿ ತಮ್ಮ ಎಂಜಲೇ ಇರಲಿ ಎನ್ನುವಷ್ಟು ಕೀಳಾಗಿ ಯೋಚಿಸುತ್ತಾರೆ.

    ಉತ್ತರ ಪ್ರದೇಶದ ಗಾಜಿಯಾಬಾದ್​ ಜಿಲ್ಲೆಯ ಮುರಾದ್​ನಗರದಲ್ಲಿ ಇಂತದ್ದೇ ಒಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಬಿಸಿಲಲ್ಲಿ ನಿಂತು ತಂದೂರಿ ರೊಟ್ಟಿ ತಯಾರಿಸುತ್ತಿದ್ದಾನೆ. ಆದರೆ ರೊಟ್ಟಿಯನ್ನು ಮಾಡುವಾಗ ಸುಮ್ಮನಾಗದ ಆತ, ಅದನ್ನು ಬೇಯಿಸುವ ಮೊದಲು ತನ್ನ ಎಂಜಲನ್ನು ಅದಕ್ಕೆ ತುಪ್ಪಿ ನಂತರ ಬೇಯಿಸುತ್ತಿದ್ದಾನೆ. ಈ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

    ಈ ವಿಡಿಯೋವನ್ನು ಗಾಜಿಯಾಬಾದ್​ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆ ಕೃತ್ಯ ಮಾಡಿದವನಿಗಾಗಿ ಬಲೆ ಬೀಸಿದ್ದಾರೆ. ಆತನ ಹೆಸರು ಮೊಹ್ಸಿನ್​ ಎಂದು ತಿಳಿದುಬಂದಿದ್ದು, ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಖಾಸಗಿ ವಿಡಿಯೋವನ್ನು ಮಾಧ್ಯಮಗಳಿಗೆ ನೀಡುವ ಬೆದರಿಕೆ! ಯುವಕನನ್ನು ಕೂಡಿ ಹಾಕಿ ಹಲ್ಲೆ ನಡೆಸಿದ ರೌಡಿ ಗ್ಯಾಂಗ್!

    ರಾಬರ್ಟ್​ ಪೈರಸಿ: ಸುದೀಪ್​-ದರ್ಶನ್​ ಫ್ಯಾನ್ಸ್​ ನಡುವೆ ಕಿಡಿ ಹೊತ್ತಿಸಿದ ಆರೋಪಿ ಹೇಳಿಕೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts