More

    ವೇದಿಕೆಯ ಮೇಲೆ ಚಿಕನ್​ ತಿಂದ ಸಚಿವರು: ಇವೆಲ್ಲವೂ ಕೊರೊನಾ ಸೋಂಕಿನ ಸೈಡ್​ ಎಫೆಕ್ಟ್​ !

    ಹೈದರಾಬಾದ್​: ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ವೈರಸ್​ ತನ್ನ ಯಮರೂಪವನ್ನು ತೋರಿದೆ. ನಾವು ತಿನ್ನುವ ಕೋಳಿ ಮಾಂಸದಿಂದಲೂ ಕೊರೊನಾ ವೈರಸ್ ಹರಡುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಸುಳ್ಳು, ಕೊರೊನಾಗೂ ಚಿಕನ್​ಗೂ ಯಾವುದೇ ಸಂಬಂಧವಿಲ್ಲ ಎಂದು ಜನರಲ್ಲಿ ಧೈರ್ಯ ತುಂಬುವ ಸಲುವಾಗಿ ತೆಲಂಗಾಣದ ಸಚಿವರು ವೇದಿಕೆಯ ಮೇಲೆ ಚಿಕನ್​ ತಿಂದಿದ್ದಾರೆ.

    ಶುಕ್ರವಾರದಂದು ಹೈದರಾಬಾದ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣದ ಸರ್ಕಾರದ ಸಚಿವರು ಸಾಲಾಗಿ ನಿಂತು ಚಿಕನ್​ ಲೆಗ್​ ಪೀಸ್​ಗಳನ್ನು ತಿಂದಿದ್ದಾರೆ. ಕೆ.ಟಿ.ರಾಮ ರಾವ್​, ಎಟೆಲಾ ರಾಜೇಂದರ್​ ಮತ್ತು ತಲಸಾನಿ ಶ್ರೀನಿವಾಸ್​ ಯಾದವ್​ ಸೇರಿದಂತೆ ಅನೇಕರು ಚಿಕನ್​ ತಿನ್ನುವ ಮೂಲಕ ಜನರಲ್ಲಿರುವ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

    ಕಳೆದ ಡಿಸೆಂಬರ್​ ತಿಂಗಳಿನಲ್ಲಿ ಚೀನಾದ ಮಾಂಸದ ಮಾರುಕಟ್ಟೆಯಲ್ಲಿ ಮೊದಲ ಕೊರೊನ ವೈರಸ್​ ಪತ್ತೆಯಾಗಿತ್ತು. ಅದಾದ ನಂತರ ಈ ವೈರಸ್​ ದೇಶ ವಿದೇಶಗಳಿಗೂ ಹರಡಿತ್ತು. ಸಾಕು ಪ್ರಾಣಿಗಳು ಮತ್ತು ಕೋಳಿ ಮಾಂಸದಿಂದಲೂ ಕೊರೊನಾ ಹರಡುತ್ತದೆ ಎನ್ನುವ ಸುದ್ದಿಗಳು ಹರಿದಾಡಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts