More

    ಕಲ್ಕುಣಿಯಲ್ಲಿ ಬೋನಿಗೆ ಬಿದ್ದ ಚಿರತೆ

    ಮಳವಳ್ಳಿ: ತಾಲೂಕಿನ ಕಲ್ಕುಣಿ ಗ್ರಾಮದ ಹೊರವಲಯದಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಶನಿವಾರ ರಾತ್ರಿ ಚಿರತೆ ಸೆರೆಯಾಗಿದೆ.

    ಹಲವು ದಿನಗಳಿಂದ ಕಲ್ಕುಣಿ ಸೇರಿದಂತೆ ಸುತ್ತ್ತಲಿನ ಗ್ರಾಮಗಳಲ್ಲಿ ಕುರಿ, ಮೇಕೆಗಳನ್ನು ಬೇಟೆಯಾಡುತ್ತಾ ಆತಂಕ ಸೃಷ್ಟಿಸಿತ್ತು. ಸಾರ್ವಜನಿಕರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲಿ ಬೋನು ಇರಿಸಿ ನಾಯಿಯೊಂದನ್ನು ಕಟ್ಟಿ ನಿಗಾ ವಹಿಸಿದ್ದರು. ನಾಯಿ ಬೇಟೆಗೆ ಬಂದ ಚಿರತೆ ಶನಿವಾರ ರಾತ್ರಿ ಬೋನಿನಲ್ಲಿ ಸೆರೆಯಾಗಿದೆ.

    ವಾರದ ಹಿಂದೆ ಗ್ರಾಮದ ಜಮೀನಿನೊಂದರಲ್ಲಿ ಮೇಯುತ್ತಿದ್ದ ಕುರಿಯನ್ನು ಹಾಡಹಗಲೇ ಕಚ್ಚಿ ಪಂಪ್‌ಹೌಸ್ ಮೇಲಕ್ಕೆ ಎಳೆದೊಯ್ದು ಕೊಂದಿತ್ತು. ಸದ್ಯ ಚಿರತೆ ಸೆರೆಯಿಂದ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಸಿಕ್ಕ ಚಿರತೆಯನ್ನು ಸಂರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲು ಸ್ಥಳಾಂತರಿಸಿದ್ದಾರೆ. ಅಲ್ಲದೆ ಚಿರತೆ ಮರಿಗಳು ಇರುವ ಮಾಹಿತಿಯ ಮೇರೆಗೆ ಬೋನನ್ನು ಸ್ಥಳದಲ್ಲೇ ಇರಿಸಿ, ನಿಗಾ ವಹಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts