More

    ಪುಟ್ಟ ಗಿಡದಲ್ಲಿ 5 ಕೆ.ಜಿ. ತೂಕದ ಗಜನಿಂಬೆ

    ಸಿದ್ದಾಪುರ: ಪಾಲಿಬೆಟ್ಟದ ಕಾಫಿ ತೋಟವೊಂದರಲ್ಲಿ ಬರೋಬ್ಬರಿ 5 ಕೆ.ಜಿ. ತೂಕದ ಗಜ ನಿಂಬೆಹಣ್ಣು ಬೆಳೆದಿದೆ! ಜಿಲ್ಲಾ ಪಂಚಾಯಿತಿ ಸದಸ್ಯ, ಸಮಾಜ ಸೇವಕ ಮೂಕೊಂಡ ವಿಜು ಸುಬ್ರಮಣಿ ನಾಲ್ಕು ವರ್ಷಗಳ ಹಿಂದೆ ಮೈಸೂರಿನ ಮಾರುಕಟ್ಟೆಯಿಂದ ನಿಂಬೆಹಣ್ಣು ಖರೀದಿ ಮಾಡಿ ತಂದಿದ್ದರು.

    ಉಪಯೋಗಕ್ಕೆ ಬಾರದ ಒಂದು ಹಣ್ಣನ್ನು ಮನೆಯ ಹಿಂಬದಿಯ ತೋಟದಲ್ಲಿ ಎಸೆದಿದ್ದರು. ಕೆಲ ದಿನಗಳಲ್ಲಿ ನಿಂಬೆಹಣ್ಣು ಎಸೆದಿದ್ದ ಜಾಗದಲ್ಲಿ ಎರಡು ಸಸಿಗಳು ಬೆಳೆದಿದ್ದವು. ಸಸಿಗಳನ್ನು ಕಿತ್ತು ತೋಟದ ಬದಿಯಲ್ಲಿ ನೆಟ್ಟು ಸಾವಯವ ಗೊಬ್ಬರ ನೀಡಿ ಪೋಷಣೆ ಮಾಡಿದ್ದರು.

    ಇದೀಗ ಆ ಗಿಡಗಳಲ್ಲಿ ಭಾರೀ ಗಾತ್ರದ ನಿಂಬೆಹಣ್ಣುಗಳು ಬಿಟ್ಟಿವೆ. ಇದನ್ನು ಗಜ ನಿಂಬೆಹಣ್ಣು ಎಂದು ಹೇಳಲಾಗುತ್ತಿದ್ದು ಇಟಲಿ, ಯೂರೋಪ್ ದೇಶಗಳಲ್ಲಿ ಕಂಡುಬರುವ ತಳಿಯಾಗಿದೆ.

    ಪುರಿ ಜಗನ್ನಾಥ ದೇವಸ್ಥಾನಕ್ಕೆ ಗೋಮಾಂಸ ಪ್ರಚಾರಕಿ ಎಂಟ್ರಿ! ತರಾಟೆಗೆ ತೆಗೆದುಕೊಂಡ ಬಿಜೆಪಿ

    ಏನಾಗುತ್ತಿದೆ RCB ಕ್ಯಾಂಪ್​ ಒಳಗೆ? ಭಾರಿ ಸಂಶಯ ಹುಟ್ಟುಹಾಕಿದ ಸಿರಾಜ್ ಇನ್​ಸ್ಟಾ ಸ್ಟೋರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts