More

  ಕೆಲಸಕ್ಕಿದ್ದ ಮನೆಯಲ್ಲೇ ಕದ್ದು ಸಿಕ್ಕಿಬಿದ್ದ ಕಾರ್ಮಿಕ!

  ಸುಬ್ರಹ್ಮಣ್ಯ: ಠಾಣಾ ವ್ಯಾಪ್ತಿಯ ಬಳ್ಪದ ಮನೆಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕಿದ್ದ ಕಾರ್ಮಿಕನೊಬ್ಬ ಕೆಲಸಕ್ಕಿದ್ದ ಮನೆಯಲ್ಲಿ ಚಿನ್ನ ಮತ್ತು ನಗದು ಕಳ್ಳತನ ನಡೆಸಿ ಸಿಕ್ಕಿಬಿದ್ದಿದ್ದಾನೆ.

  ಬಳ್ಪದ ಎಣ್ಣೆಮಜಲು ಪುಟ್ಟಣ್ಣ ಎಂಬುವರ ಮನೆಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಮರ್ದಾಳದ ಪ್ರಸಾದ್ ಎಂಬಾತ ಬಂದಿದ್ದು, ಇತ್ತೀಚೆಗೆ ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಪ್ರಸಾದ್ ಮನೆಯೊಳಗೆ ಹೋಗಿ ಸರ, ಉಂಗುರ, ಬೆಂಡ್ ಮೊದಲಾದ ಚಿನ್ನಾಭರಣ ಹಾಗೂ 8 ಸಾವಿರ ರೂ. ಕಳವುಗೈದು ಮರುದಿನ ಊರಿಗೆ ತೆರಳಿದ್ದನು. ಮನೆಯವರಿಗೆ ಚಿನ್ನ ಮತ್ತು ನಗದು ಕಾಣೆಯಾಗಿರುವುದು ಬಳಿಕ ಗಮನಕ್ಕೆ ಬಂದಿದೆ.

  ಈ ಬಗ್ಗೆ ಮನೆಮಂದಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಮಿಕನ ಮನೆಗೆ ತೆರಳಿ ಆತನನ್ನು ಹಿಡಿದು ಸುಬ್ರಹ್ಮಣ್ಯ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಕೃತ್ಯ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts