More

    ದೇವಸ್ಥಾನದೊಳಗೆ ಮಗು ಕಾಲಿಟ್ಟಿದ್ದಕ್ಕೆ, ದೇಗುಲ ಶುದ್ಧೀಕರಿಸಿ 11 ಸಾವಿರ ರೂ. ದಂಡ ಹಾಕಿದ್ರು!

    ಕೊಪ್ಪಳ: ನಾವೆಲ್ಲ 21ನೇ ಶತಮಾನದಲ್ಲಿದ್ದರೂ ಜಾತಿ ಪದ್ಧತಿ ಇನ್ನೂ ಜೀವಂತವಾಗಿರುವುದು ವಿಪರ್ಯಾಸ. ಚನ್ನದಾಸರ ಸಮುದಾಯದ ಮಗುವೊಂದು ದೇಗುಲ ಪ್ರವೇಶ ಮಾಡಿದ್ದಕ್ಕೆ, ದೇವಸ್ಥಾನ ಶುದ್ಧೀಕರಿಸಿದ ಘಟನೆ ಕೊಪ್ಪಳದ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದಲ್ಲಿ ನಡೆದಿದೆ.

    ಚನ್ನದಾಸರ ಸಮುದಾಯದ ಮಗುವೊಂದು ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶಿಸಿದೆ. ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಸವರ್ಣಿಯರು ದೇವಸ್ಥಾನ ಶುದ್ಧೀಕರಿಸಿದ್ದಾರೆ. ಅಷ್ಟೇ ಅಲ್ಲ, ದೇವಸ್ಥಾನ ಶುದ್ಧೀಕರಣದ ಖರ್ಚಿಗಾಗಿ 11 ಸಾವಿರ ರೂಪಾಯಿ ದಂಡವನ್ನೂ ಆ ಮಗುವಿನ ಪಾಲಕರಿಗೆ ವಿಧಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ.

    ದೇವಸ್ಥಾನದೊಳಗೆ ಮಗು ಕಾಲಿಟ್ಟಿದ್ದಕ್ಕೆ, ದೇಗುಲ ಶುದ್ಧೀಕರಿಸಿ 11 ಸಾವಿರ ರೂ. ದಂಡ ಹಾಕಿದ್ರು!

    ಗ್ರಾಮದ ಸವರ್ಣಿಯರು ಸಭೆ ನಡೆಸಿ ಮಗುವಿನ ಪಾಲಕರಿಗೆ ದಂಡ ವಿಧಿಸಿದ್ದರು. ಇದನ್ನು ವಿರೋಧಿಸಿ ಚನ್ನದಾಸರ ಸಮುದಾಯ ಪ್ರತಿಭಟನೆ ಮಾಡಿತ್ತು.‌

    ದೇವಸ್ಥಾನದೊಳಗೆ ಮಗು ಕಾಲಿಟ್ಟಿದ್ದಕ್ಕೆ, ದೇಗುಲ ಶುದ್ಧೀಕರಿಸಿ 11 ಸಾವಿರ ರೂ. ದಂಡ ಹಾಕಿದ್ರು!

    ಅಸ್ಪೃಶ್ಯತೆ ಆಚರಣೆ ಬಗ್ಗೆ ತಿಳಿಯುತ್ತಿದ್ದಂತೆ ಅಧಿಕಾರಿಗಳು ಮತ್ತು ಪೊಲೀಸರು ಗ್ರಾಮಕ್ಕೆ ಭೇಟಿ ‌ನೀಡಿ ಸಭೆ ನಡೆಸಿ ಜಾಗೃತಿ ಮೂಡಿಸಿದರು. ಕುಷ್ಟಗಿ ತಹಸೀಲ್ದಾರ್​ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಮತ್ತೊಮ್ಮೆ ಇಂತಹ ಆಚರಣೆ ಕಂಡು ಬಂದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

    ಬೆಂಗಳೂರಿನ ದುರಂತ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಮತ್ತೊಂದು ಕುಟುಂಬ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts