More

    ಗಗನಚುಕ್ಕಿ-ಭರಚುಕ್ಕಿಗೆ ಟೂರ್​ ಪ್ಯಾಕೇಜ್​ ಘೋಷಿಸಿದ ಕೆಎಸ್​ಆರ್​ಟಿಸಿ: ಪ್ರವಾಸ ದರ ತಲಾ 250 ರೂಪಾಯಿ

    ಬೆಂಗಳೂರು: ಮುಂಗಾರು ಮಳೆ ಜೋರಾಗಿದ್ದು, ಗಗನಚುಕ್ಕಿ-ಭರಚುಕ್ಕಿ ಜಲಪಾತದಲ್ಲಿ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದ್ದು, ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಬಹುತೇಕರು ಪ್ರಕೃತಿ ಮಡಿಲಲ್ಲಿ ಒಂದು ದಿನ ಸಮಯ ಕಳೆಯಲು ಹವಣಿಸುತ್ತಿದ್ದಾರೆ. ಇಂಥವರಿಗೆ ಅನುಕೂಲವಾಗಲೆಂದು ಕೆಎಸ್​ಆರ್​ಟಿಸಿ ಟೂರ್​ ಪ್ಯಾಕೇಜ್​ ಘೋಷಿಸಿದ್ದು, ತಲಾ 250 ರೂಪಾಯಿಯಲ್ಲಿ ಗಗನಚುಕ್ಕಿ-ಭರಚುಕ್ಕಿಗೆ ಪ್ರವಾಸ ಮಾಡಬಹುದು.

    ನದಿಯಲ್ಲಿ ನೀರು ಹೆಚ್ಚಾಗಿರುವುದನ್ನು ತಿಳಿದ ಪ್ರವಾಸಿಗರು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಲು ಒಂದು ವಾರದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಮಂದಿ ಆಗಮಿಸುತ್ತಿದ್ದರು. ಕೆಎಸ್​ಆರ್​ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ರಜಾ ದಿನಗಳಲ್ಲಿ ಒಂದು ದಿನದ ಗಗನಚುಕ್ಕಿ- ಭರಚುಕ್ಕಿ ಟೂರ್​ ಪ್ಯಾಕೇಜ್​ ಆಯೋಜಿಸಲಾಗಿದೆ.

    ಶನಿವಾರ ಮತ್ತು ಭಾನುವಾರ ಬೆಳಗ್ಗೆ 6.30ಕ್ಕೆ ಬೆಂಗಳೂರಿನ ಸ್ಯಾಟಲೈಟ್​ ನಿಲ್ದಾಣದಿಂದ ಬಸ್​ ಹೊರಡಲಿದೆ. ಸೋಮನಾಥಪುರ, ತಲಕಾಡು, ಮಧ್ಯರಂಗ, ಗಗನಚುಕ್ಕಿ-ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಿಕೊಂಡು ಬರಬಹುದು. ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ 250 ರೂ. ಪ್ಯಾಕೇಜ್​ ದರ ನಿಗದಿಪಡಿಸಲಾಗಿದೆ.

    ಜೋಗ ಜಲಪಾತ ವೀಕ್ಷಣೆಗೆ ಪ್ಯಾಕೇಜ್​: “ಬೆಂಗಳೂರು- ಜೋಗ ಜಲಪಾತ’ ಮಾರ್ಗ ಶಿವಮೊಗ್ಗ, ಸಾಗರ ಎಸಿ ರಹಿತ ಸ್ಲೀಪರ್​ ವಾಹನಗಳನ್ನು ವಾರಾಂತ್ಯದ ದಿನಗಳಲ್ಲಿ ಬಿಡಲಾಗಿದೆ. ಎರಡು ದಿನದ ಟೂರ್​ ಪ್ಯಾಕೇಜ್​ ಜು.22ರಿಂದ ಆರಂಭವಾಗಲಿದ್ದು, ವಯಸ್ಕರಿಗೆ 2,300 ರೂ. ಹಾಗೂ ಮಕ್ಕಳಿಗೆ 2,100 ರೂ. ದರ ನಿಗದಿಮಾಡಲಾಗಿದೆ. ಶುಕ್ರವಾರ ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹೊರಟು ಶನಿವಾರ ಬೆಳಗ್ಗೆ ವರದಹಳ್ಳಿ, ಇಕ್ಕೇರಿ, ಕೆಳದಿ, ಜೋಗ ಜಲಪಾತ, ಸಾಗರ ಮತ್ತು ಶಾಪಿಂಗ್​ ಮಾಡಲು ಸಮಯ ನೀಡಿ ರಾತ್ರಿ 10 ಗಂಟೆಗೆ ಸಾಗರದಿಂದ ಬೆಂಗಳೂರಿಗೆ ವಾಪಸ್​ ಹೊರಡಲಿದೆ.

    ಚಿಕ್ಕಬಳ್ಳಾಪುರದ ಸರ್ಕಾರಿ ಕಾಲೇಜಿನಲ್ಲಿ ವಾಮಾಚಾರ? ಪ್ರಾಂಶುಪಾಲರ ಕೊಠಡಿಯಲ್ಲಿ ಕೆಂಪು ದಾರ-ಬೊಂಬೆ ಪತ್ತೆ!

    ಮೈಸೂರು-ತಾಳಗುಪ್ಪ ಪ್ಯಾಸೆಂಜರ್​ ರೈಲು ಸಂಚಾರ ಜು.25ರಿಂದ ಪುನರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts