More

    ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ವಜಾ: ಸತ್ಯಶೋಧನಾ ಸಮಿತಿ ರಚನೆ, ಪ್ರಾಥಮಿಕ ಸದಸ್ಯತ್ವಕ್ಕೂ ಕುತ್ತು

    ಶಿವಮೊಗ್ಗ: ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆ ಅವರನ್ನು ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದ್ದು, ಆರೋಪದ ಸತ್ಯಾಸತ್ಯತೆ ಅರಿಯಲು ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ವರದಿ ನೀಡಲು ಸಮಿತಿಗೆ 2 ತಿಂಗಳ ಅವಕಾಶವಿದ್ದು, ಭ್ರಷ್ಟಾಚಾರ ಆರೋಪ ಸಾಬೀತಾದರೆ ಕೋಡಿಹಳ್ಳಿ ಚಂದ್ರಶೇಖರ್​ ಅವರನ್ನು ರೈತ ಸಂಘದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾ ಮಾಡಲು ನಿರ್ಧರಿಸಲಾಗಿದೆ.

    ಶಿವಮೊಗ್ಗದ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸಮಿತಿ ಸಭೆಯಲ್ಲಿ ಎಚ್​.ಆರ್​. ಬಸವರಾಜಪ್ಪ ಅವರನ್ನು ರೈತ ಸಂಘದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಇವರು ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ವೇಳೆ ಮಾತನಾಡಿದ ಬಸವರಾಜಪ್ಪ, ಸತ್ಯಶೋಧನಾ ಸಮಿತಿಯ ತನಿಖೆಯಲ್ಲಿ ಆರೋಪ ಸಾಬೀತಾದರೆ ಕೋಡಿಹಳ್ಳಿ ಚಂದ್ರಶೇಖರ್​ ಅವರನ್ನ ಸಂಘದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾ ಮಾಡಲಾಗುತ್ತೆ. ಅಧ್ಯಕ್ಷರನ್ನು ಹೊರತು ಪಡಿಸಿ ರಾಜ್ಯ ಸಮಿತಿ ಪದಾಧಿಕಾರಿಗಳನ್ನು ಬದಲಾವಣೆ ಮಾಡಿಲ್ಲ. ಈ ಹಿಂದೆ ರೈತ ಸಂಘದಲ್ಲಿದ್ದು, ಕೋಡಿಹಳ್ಳಿ ಕಾರಣದಿಂದಲೇ ಸಂಘ ಬಿಟ್ಟು ಹೋದವರನ್ನು ಮರಳುವಂತೆ ಆಹ್ವಾನಿಸಲಾಗುವುದು. ನಾನೇ ಖುದ್ದಾಗಿ ಎಲ್ಲರ ಜತೆಗೂ ಮಾತುಕತೆ ನಡೆಸುತ್ತೇನೆ ಎಂದರು.

    ಕೋಡಿಹಳ್ಳಿ ಚಂದ್ರಶೇಖರ್​ ಅವರ ವಿಷಯದಲ್ಲಿ ನನಗೆ ತಿಳಿದಂತೆ ಹಣ ವರ್ಗಾವಣೆಯಾಗಿಲ್ಲ. ಆದರೆ ವ್ಯವಹಾರದ ಮಾತುಕತೆ ನಡೆದಿರುವುದು ಸ್ಪಷ್ಟ ಎಂದ ಬಸವರಾಜಪ್ಪ, ರೈತ ಸಂಘದ ಘನತೆ ಕಾಪಾಡಲು ಚಂದ್ರಶೇಖರ್​ ರಾಜೀನಾಮೆ ನೀಡಬೇಕಿತ್ತು. ವಿಪರ್ಯಾಸವೆಂದರೆ ತಮ್ಮ ಮೇಲಿನ ಆರೋಪಗಳನ್ನು ಅವರು ನಿರಾಕರಿಸಿಯೂ ಇಲ್ಲ ಏಕೆ? ಎಂದು ಪ್ರಶ್ನಿಸಿದರು.

    ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ವಜಾ: ಸತ್ಯಶೋಧನಾ ಸಮಿತಿ ರಚನೆ, ಪ್ರಾಥಮಿಕ ಸದಸ್ಯತ್ವಕ್ಕೂ ಕುತ್ತು

    ಇಂದು ನಡೆದ ಸಭೆಗೆ ಆಹ್ವಾನವಿದ್ದರೂ ಕೋಡಿಹಳ್ಳಿ ಚಂದ್ರಶೇಖರ್​ ಗೈರಾಗಿದ್ದರು. ಕೋಡಿಹಳ್ಳಿ ವರ್ತನೆಗೆ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

    ಕಾರ್ಯಾಧ್ಯಕ್ಷರಾದ ಸಿದ್ದವಿರಪ್ಪ, ಕುರುವ ಗಣೇಶ್​, ಖಜಾಂಚಿ ಡಾ. ಬಿ.ಎಂ.ಚಿಕ್ಕಸ್ವಾಮಿ, ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ನಜೀರ್​ಸಾಬ್​ ಮೂಲಿಮನಿ, ಸಂಟನಾ ಕಾರ್ಯದರ್ಶಿಗಳಾದ ರಮೇಶ್​, ಗಂಗಾಧರ್​ ಮೇಟಿ, ಹೊನ್ನೂರು ಪ್ರಕಾಶ್​ ಇತರರಿದ್ದರು.

    ನಾನಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ತಿದ್ದೆ… ಕೋಡಿಹಳ್ಳಿ ವಿರುದ್ಧ ರೈತ ಸಂಘದ ನೂತನ ಅಧ್ಯಕ್ಷ ಆಕ್ರೋಶ

    ಮೊದಲ ಪ್ರಯತ್ನದಲ್ಲೇ UPSCಯಲ್ಲಿ 31ನೇ ರ‍್ಯಾಂಕ್ ಪಡೆದ ಕನ್ನಡಿಗ! ಸಾಧನೆ ಬಗ್ಗೆ ಅವಿನಾಶ್​ ಹೇಳಿದ್ದಿಷ್ಟು…

    ಮದ್ವೆಗೆ ಹೋಗಿದ್ದೆ, ಮಲಗಲು ಕೋಣೆಗೆ ಹೋಗುವಾಗ ದಾರೀಲಿ ಚಿನ್ನದ ಸರ ಸಿಕ್ತು.. ದಯವಿಟ್ಟು ವಾರಸುದಾರರಿಗೆ ತಲುಪಿಸಿ ಸರ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts