More

    ನಾಗರಹಾವಿನ ಹೆಡೆಯಿಂದ ಕ್ಷಣಾರ್ಧದಲ್ಲಿ ಮಗನನ್ನು ರಕ್ಷಿಸಿದ ತಾಯಿ! ಮಂಡ್ಯದಲ್ಲಿ ಎದೆ ಝಲ್​ ಅನ್ನಿಸೋ ಘಟನೆ, ವಿಡಿಯೋ ವೈರಲ್​

    ಮಂಡ್ಯ: ಯಾರೂ ಊಹಿಸಲಾಗದ ರೀತಿಯಲ್ಲಿ ನಾಗರಹಾವಿನಿಂದ ಪುಟ್ಟ ಮಗನನ್ನ ಕಾಪಾಡಿಕೊಂಡ ತಾಯಿಯ ಯಶೋಗಾಥೆ ಇದು. ಎದೆ ಝಲ್​ ಎನ್ನಿಸೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಸಖತ್ ವೈರಲ್ ಆಗ್ತಿದೆ. ಅಮ್ಮನ ಧೈರ್ಯ ಕಂಡು ನೆಟ್ಟಿಗರು ನಿಟ್ಟುಸಿರುಬಿಟ್ಟಿದ್ದಾರೆ. ಮಗುವಿನ ಆಯಸ್ಸು ಗಟ್ಟಿ ಇತ್ತು… ಅರೆಕ್ಷಣ ತಡ ಮಾಡಿದ್ದರೂ ದೊಡ್ಡ ದುರಂತವೇ ಸಂಭವಿಸಲಿತ್ತು… ಇದೊಂದು ವಿಸ್ಮಯ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

    ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಕೆ.ಎಂ.ದೊಡ್ಡಿ ವೈದ್ಯ ಡಾ.ವಿಷ್ಣು ಪ್ರಸಾದ್ ಮತ್ತು ಪ್ರಿಯಾ ದಂಪತಿ ಪುತ್ರ ನಾಗರಹಾವಿನ ಕಡಿತದಿಂದ ಬಚಾವಾಗಿದ್ದಾನೆ. ಡಾ.ವಿಷ್ಣುಪ್ರಸಾದ್​ ಮಗು ಮತ್ತು ಪತ್ನಿ ಜತೆ ಮದ್ದೂರು ಪಟ್ಟಣದ ಕೆಮ್ಮಣ್ಣನಾಲೆ ಸರ್ಕಲ್ ಸಮೀಪ ಸದ್ಯ ವಾಸವಿದ್ದಾರೆ. ಆ.9ರಂದು ಮಂಡ್ಯದ ಚಾಮುಂಡೇಶ್ವರಿ ನಗರದ ನಿವಾಸಕ್ಕೆ ಪತ್ನಿ ಮತ್ತು ಮಗ ಆಗಮಿಸಿದ್ದರು. ಆಗ ಈ ಘಟನೆ ಸಂಭವಿಸಿದೆ.

    ಮನೆಯಿಂದ ಹೊರ ಹೋಗಲು ತಾಯಿ ಜತೆ ಬಾಲಕ ಹೊರ ಬಂದಿದ್ದಾನೆ. ಅದೇ ಸಮಯಕ್ಕೆ ಬಾಗಿಲ ಮೆಟ್ಟಿಲ ಬಳಿ ನಾಗರಹಾವು ಹೋಗುತ್ತಿತ್ತು. ಹಾವನ್ನು ಗಮನಿಸದೆ ಬಾಲಕ ಹಾವಿನ ತಲೆ ಬಳಿಯೇ ಕಾಲಿಟ್ಟಿದ್ದಾನೆ. ಈ ವೇಳೆ ಹೆಡೆ ಎತ್ತಿ ನಿಂತ ನಾಗರಹಾವು ಇನ್ನೇನ್ನು ಕಚ್ಚೇ ಬಿಡ್ತು ಎನ್ನುವಷ್ಟರಲ್ಲಿ ಮಗನನ್ನ ತಾಯಿ ದೂರ ಎಳೆದುಕೊಂಡಿದ್ದಾರೆ.

    ಬೆಂಗಳೂರಿನ ಉದ್ಯಮಿಗೆ ಹನಿಟ್ರ್ಯಾಪ್​: ಸ್ಯಾಂಡಲ್​ವುಡ್​ನ ಯುವ ನಟ ಬಂಧನ

    ಎಸಿಬಿ ರಚನೆಯನ್ನೇ ರದ್ದುಪಡಿಸಿದ ಹೈಕೋರ್ಟ್: ಎಲ್ಲ ಕೇಸು ಲೋಕಾಯುಕ್ತಕ್ಕೆ ವರ್ಗಾಯಿಸಲು ಆದೇಶ

    ಕುಂದಾಪುರದಲ್ಲಿ ದೇವಸ್ಥಾನಕ್ಕೆ ಕನ್ನ ಹಾಕಲು ಹಾಡಹಗಲೇ ಬಂದು ಸಿಕ್ಕಿಬಿದ್ದ ದಂಪತಿಯ ಮದ್ವೆ ರಹಸ್ಯ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts