More

    ಗಂಡಸಾದ್ರೆ ಸಾಕ್ಷಿ ಸಮೇತ ಪ್ರೂವ್​ ಮಾಡು… ಸುದೀಪ್​ಗೆ ಅವಮಾನಿಸಿದ ವ್ಯಕ್ತಿಗೆ ನಂದಕಿಶೋರ್​​ ಹಿಗ್ಗಾಮುಗ್ಗಾ ತರಾಟೆ

    ಬೆಂಗಳೂರು: ಕನ್ನಡ ಚಿತ್ರರಂಗ ಮಾತ್ರವಲ್ಲ, ದೇಶಾದ್ಯಂತ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರದ್ದೇ ಹವಾ. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್​ ರೋಣ’ ಕಣ್ತುಂಬಿಕೊಳ್ಳಲು ಸಹಸ್ರಾರು ಅಭಿಮಾನಿಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಅತ್ತ ಸಿನಿಮಾ ಪ್ರಚಾರದ ನಡುವೆಯೂ ಕಷ್ಟದಲ್ಲಿರುವ ಅಭಿಮಾನಿಗಳಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಸುದೀಪ್​ರನ್ನು ಪ್ರೀತಿಸುತ್ತಿದ್ದಾರೆ, ಆರಾಧಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಯುವಕ ಸುದೀಪ್​ ಕುರಿತು ಅವಾಚ್ಯವಾಗಿ ನಿಂದಿಸಿ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಹಾಕಿದ್ದಾನೆ. ಇದನ್ನು ನೋಡಿ ಗರಂ ಆದ ಅಭಿಮಾನಿಗಳು ಆತನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಅತ್ತ ಆ ಯುವಕನ ವಿರುದ್ಧ ನಿರ್ದೇಶಕ ನಂದಕಿಶೋರ್ ಕೂಡ ಆಕ್ರೋಶ ಹೊರಹಾಕಿದ್ದಾರೆ.

    ಯುವಕನ ವಿಡಿಯೋದಲ್ಲಿ ಏನಿದೆ?: ‘ನೀನು ಮಾತ್ರವಲ್ಲ, ನಿನ್ನ ಅಭಿಮಾನಿಗಳೂ ಕೂಡ ಷಂ*. ಜೂಜಿನ ಕುರಿತು ಜಾಹೀರಾತಿನಲ್ಲಿ ನಟಿಸಿರೋ ಕನ್ನಡ ಚಿತ್ರರಂಗದ ನಟ-ನಟಿಯರು ಕೂಡ ನಾ***. ನಿಮ್ಮಂಥವರನ್ನೆಲ್ಲ ಹೀರೋ-ಹೀರೋಯಿನ್​ ಅಂತ ಬೆಳೆಸಿದ್ದಕ್ಕೆ ಕರ್ನಾಟಕವನ್ನೇ ನಾಶ ಮಾಡಿಬಿಟ್ರಲ್ಲೋ… ಸ್ಕಿಲ್​ ಗೇಮ್​ ಅಂತ ಜೂಜಾಟವನ್ನೇ ಇಡೀ ಕರ್ನಾಟಕಕ್ಕೆ ಹೇಳಿಕೊಟ್ಟರಲ್ಲೋ… ‘ ಎಂದು ಯುವಕನೊಬ್ಬ ಅಸಭ್ಯವಾಗಿ ಬಾಯಿಗೆ ಬಂದಂತೆ ಸುದೀಪ್ ಹಾಗೂ ಹಲವು ​ನಟ-ನಟಿಯರನ್ನು ಬೈದಿದ್ದಾನೆ.

    ರಮ್ಮಿ ಸರ್ಕಲ್’ ಜಾಹೀರಾತಿನಲ್ಲಿ ಸುದೀಪ್​ ಅಭಿನಯಿಸಿದ್ದಾರೆ. ಈ ವಿಚಾರವನ್ನೇ ಇಟ್ಟುಕೊಂಡು ಕಿಚ್ಚನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಾಚ್ಯ ಪದಗಳಿಂದ ನಿಂದಿಸುತ್ತಾ ವಿಕೃತಿ ಮೆರೆದಿದ್ದಾನೆ.

    ಗಂಡಸಾದ್ರೆ ಸಾಕ್ಷಿ ಸಮೇತ ಪ್ರೂವ್​ ಮಾಡು... ಸುದೀಪ್​ಗೆ ಅವಮಾನಿಸಿದ ವ್ಯಕ್ತಿಗೆ ನಂದಕಿಶೋರ್​​ ಹಿಗ್ಗಾಮುಗ್ಗಾ ತರಾಟೆ

    ಯುವಕನ ವಿರುದ್ಧ ಆಕ್ರೋಶ ಹೊರಹಾಕಿರುವ ನಂದಕಿಶೋರ್, ಕನ್ನಡದ ಯಾವುದೇ ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು. ನಿನ್ನ ಪ್ರಚಾರಕ್ಕಾಗಿ ಧೀಮಂತ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದೀಯಾ? ನಿನ್ನ ಬೇಳೆಕಾಳು ಬೇಯಿಸಿಕೊಳ್ಳಲು ಹೇಗೇಗೋ ಮಾತಾಡೋದಲ್ಲ. ನಿನ್ನ ಬಳಿ ಏನಾದರೂ ಸಾಕ್ಷಿ ಇದ್ದರೆ ಸಾಬೀತು ಮಾಡು. ನಾಯಕನ ಬಗ್ಗೆ ನಿಂದಿಸಿ ಈಗ ಮೊಬೈಲ್​ ಆಫ್​ ಮಾಡಿಕೊಂಡಿದ್ದೀಯಾ? ಧೈರ್ಯ ಇದ್ದರೆ, ನೀನು ಗಂಡಸಾದರೆ ಮೊಬೈಲ್​ ಆನ್​ ಮಾಡು. ನೀನೇ ನಪುಂಸಕ. ಅದಕ್ಕೆ ಮೊಬೈಲ್​ ಆಫ್​ ಮಾಡಿದ್ದೀಯಾ. ನಿನಗೆ ಸಮಸ್ಯೆ ಇದ್ರೆ ಪೊಲೀಸ್​ ಠಾಣೆಗೆ ಹೋಗಿ ದೂರು ಕೊಡು, ಫಿಲಂ ಚೇಂಬರ್​ ಇದೆ. ಅಲ್ಲಿ ಹೋಗಿ ದೂರು ಕೊಡು. ಸುಮ್ಮನೆ ಪಬ್ಲಿಸಿಟಿಗಾಗಿ ಏನೇನೋ ಮಾತಾಡಿ ವಿಡಿಯೋ ಹರಿಯಬಿಡೋದಲ್ಲ ಎಂದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

    ಯುವಕನ ಅಸಹ್ಯ ಮಾತಿನಿಂದ ಕಿಚ್ಚ ಸುದೀಪ್​ರ ಅಭಿಮಾನಿಗಳು ಸಿಟ್ಟಾಗಿದ್ದು, ಆ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ.

    ತಲೆ ಕೂದಲು ಉದುರಿದ್ದಕ್ಕೆ ಬೇಸತ್ತು ಮೈಸೂರಲ್ಲಿ ಯುವತಿ ಆತ್ಮಹತ್ಯೆ! ಬಾಳಿ ಬದುಕಬೇಕಿದ್ದವಳ ಬಾಳಿಗೆ ಕೊಳ್ಳಿ ಇಟ್ಟ ಪತ್ಮಂಡೆ

    ಮಕ್ಕಳಿಗೆ ಬರೆದ ಆಸ್ತಿ ತಂದೆ ಹೆಸರಿಗೆ ವಾಪಸ್! ವೃದ್ಧ ದಂಪತಿಗೆ ಆಸರೆಯಾಗದ ಮಕ್ಕಳಿಗೆ ಪಾಠ ಕಲಿಸಿದ ಉಪವಿಭಾಗಾಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts