More

    ಆನ್​ಲೈನ್​ನಲ್ಲೇ ಕಲೋತ್ಸವ ನಡೆಸಲು ಶಿಕ್ಷಣ ಇಲಾಖೆ ಸಜ್ಜು: 9ರಿಂದ 12ನೇ ತರಗತಿ ಮಕ್ಕಳಿಗೆ ವಿವಿಧ ಸ್ಪರ್ಧೆ

    ಬೆಂಗಳೂರು: ಶಿಕ್ಷಣದಲ್ಲಿ ಕಲೆಗಳನ್ನು ಉತ್ತೇಜಿಸಿ ಪೋಷಿಸುವ ಸಲುವಾಗಿ ಶಿಕ್ಷಣ ಇಲಾಖೆ ಆಯೋಜಿಸುವ ‘ಕಲೋತ್ಸವ’ ಈ ಬಾರಿ ಆನ್​ಲೈನ್​ ಮೂಲಕ ನಡೆಯಲಿದೆ.

    ಪ್ರತಿ ವರ್ಷ ಕಲೋತ್ಸವ ಭೌತಿಕವಾಗಿ ನಡೆಯುತ್ತಿತ್ತು. ಕರೊನಾ ಸೋಂಕು ಇನ್ನೂ ಇರುವುದರಿಂದ ಆನ್​ಲೈನ್​ನಲ್ಲಿ ನಡೆಸುವುದು ಉತ್ತಮ ಎಂದು ನಿರ್ಧರಿಸಿದ ಶಿಕ್ಷಣ ಇಲಾಖೆ, 2020-21ನೇ ಸಾಲಿನ ಕಲೋತ್ಸವ ಕಾರ್ಯಕ್ರಮವನ್ನು ಆಫ್​​ಲೈನ್​ ಬದಲಾಗಿ ಆನ್​ಲೈನ್​ನಲ್ಲಿ ನಡೆಸುವಂತೆ ಶಿಕ್ಷಕರಿಗೆ ಸೂಚನೆ ನೀಡಿದೆ.

    ಗಾಯನ ಸಂಗೀತ, ವಾದ್ಯ ಸಂಗೀತ, ನೃತ್ಯ-ಶಾಸ್ತ್ರೀಯ, ನೃತ್ಯ-ಸಾಂಪ್ರದಾಯಕ ಜನಪದ, ದೃಶ್ಯಕಲೆಗಳು, ಸ್ಥಳೀಯ ಆಟಿಕೆಗಳು ನಡೆಯಲಿವೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿರುವ 9ರಿಂದ 12ನೇ ತರಗತಿಯ ವಿದ್ಯಾಥಿರ್ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

    ಶಾಲಾ, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಹಂತದಲ್ಲಿ ಶಿಕ್ಷಕರು ತಮ್ಮ ಅನುಕೂಲವಾದ ದಿನಾಂಕಗಳಲ್ಲಿ ಸ್ಪರ್ಧೆ ನಡೆಸಬಹುದು. ಅದರ ಮೌಲ್ಯಮಾಪನ ಮಾಡಿ ವರದಿಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಬೇಕಿದೆ. ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    ಹಲ್ಲುಗಳಿಗೆ ಕ್ಲಿಪ್​ ಹಾಕಿಸಲು ಆಸ್ಪತ್ರೆಗೆ ಹೋದ ಯುವಕ ಸಾವು! ಕೋಮಾಗೆ ದೂಡಿ ಸಾವಿಗೆ ಕಾರಣವಾದ್ರಾ ವೈದ್ಯರು?

    ಸಾರಿಗೆ ಬಸ್​ ಡ್ರೈವರ್​-ಕಂಡಕ್ಟರ್​ ಮೇಲೆ ಡಿಪೋ ಮ್ಯಾನೇಜರ್​ ದಬ್ಬಾಳಿಕೆ: ವಿಡಿಯೋ ವೈರಲ್​

    ಗಂಡನಿಗೆ ಹುಡುಗೀರ ಶೋಕಿ, ನನ್ನನ್ನು ಜೀವಂತ ಶವ ಮಾಡಿದ್ದಾನೆ, ಕಿರುಕುಳ ಸಹಿಸಲಾಗ್ತಿಲ್ಲ… ಕಣ್ಣೀರು ತರಿಸುತ್ತೆ ಈ ಸ್ಟೋರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts