More

    ಚಂದ್ರು ಸಾವಿನ ಸುತ್ತ ಅನುಮಾನದ ಹುತ್ತ, ತನಿಖೆ ಜವಾಬ್ದಾರಿ ಸಿಐಡಿ ಹೆಗಲಿಗೆ: ಸಿಎಂ ಬೊಮ್ಮಾಯಿ

    ಬೆಂಗಳೂರು: ಜೆಜೆ ನಗರದ ಹಳೆಗುಡ್ಡದ ಪ್ರದೇಶದಲ್ಲಿ ನಡೆದ ಚಂದ್ರಶೇಖರ್ ಎಂಬ ಯುವಕನ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.

    ಸಿಐಡಿ ತನಿಖೆಗೆ ವಹಿಸಲು ನಿರ್ಧಾರ ತೆಗೆದುಕೊಂಡಿದ್ದು, ಯುವಕನ ಹತ್ಯೆಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಿ ಸತ್ಯವನ್ನು ಬಯಲಿಗೆ ಎಳೆಯಬೇಕು. ಹಂತಕರನ್ನು ಶಿಕ್ಷೆಗೆ ಒಳಪಡಿಸಲು ಸರ್ಕಾರ ನಿರ್ಧರಿಸಿದೆ. ಈ ವಿಚಾರದಲ್ಲಿ ಯಾರು ವಾಗ್ದಾಳಿ ಮಾಡ್ತಾರೋ, ಯಾರು ಹೇಳಿಕೆ ಕೊಡುತ್ತಾರೋ ಅದು ಮುಖ್ಯವಲ್ಲ. ಸತ್ಯ ಹೊರಗಡೆ ಬರಬೇಕು ಅಷ್ಟೇ. ಈ ಹಿನ್ನೆಲೆಯಲ್ಲಿ ಕಮಿಷನರ್ ಮತ್ತು ಡಿಜಿ ಅವರ ಬಳಿ ಮಾತನಾಡಿದ್ದೇನೆ. ಈ ಪ್ರಕರಣವನ್ನ ಸಿಐಡಿಗೆ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇನೆ ಎಂದರು.

    ಏನಿದು ಪ್ರಕರಣ?: ಕಾಟನ್​ಪೇಟೆಯ ಜೈಮಾರುತಿನಗರ ನಿವಾಸಿ ಚಂದ್ರಶೇಖರ್ (22) ಎಂಬಾತ ಮಾ.4ರ ತಡರಾತ್ರಿ ಕೊಲೆಯಾಗಿದ್ದಾನೆ. ಆರೋಪಿ ಶಾಹಿದ್​ ಸೇರಿ ಹಲವರನ್ನು ಜೆ.ಜೆ. ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಂದ್ರು ಕಳೆದ ಒಂದು ತಿಂಗಳಿನಿಂದ ಗೂಡ್ಸ್​ಶೆಡ್​ ರಸ್ತೆಯಲ್ಲಿರುವ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಉದ್ಯೋಗ ತರಬೇತಿ ಪಡೆಯುತ್ತಿದ್ದ. ಸ್ನೇಹಿತ ಸೈಮನ್​ ಹುಟ್ಟುಹಬ್ಬ ಆಚರಿಸಲು ಅಂದು ರಾತ್ರಿ ಆತನ ಮನೆಗೆ ಹೋಗಿದ್ದ. ಆ ವೇಳೆ ಚಿಕನ್​ ರೋಲ್​ ತರಲೆಂದು ಸೈಮನ್ ಮತ್ತು ಚಂದ್ರು ಇಬ್ಬರೂ ತಡರಾತ್ರಿ ಬೈಕ್​ನಲ್ಲಿ ಜೆ.ಜೆ. ನಗರಕ್ಕೆ ಹೋಗಿದ್ದರು. ಹಳೇಗುಡ್ಡದಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ನಿಯಂತ್ರಣ ತಪ್ಪಿದ ಚಂದ್ರುವಿನ ಬೈಕ್​ ಮುಂದಿನಿಂದ ಬರುತ್ತಿದ್ದ ಶಾಹಿದ್​ ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಯಾರಿಗೂ ಗಾಯಗಳಾಗಿರಲಿಲ್ಲ. ಈ ವೇಳೆ ಸರಿಯಾಗಿ ಬೈಕ್​ ಚಲಾಯಿಸುವಂತೆ ಶಾಹಿದ್​ಗೆ ಚಂದ್ರು ಬೆದರಿಸಿದ್ದ. ಇದರಿಂದ ಕೆರಳಿದ ಶಾಹಿದ್​, ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಚಂದ್ರು ಹಾಗೂ ಸೈಮನ್​ ಜತೆ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಶಾಹಿದ್​ ತನ್ನ ಬಳಿಯಿದ್ದ ಚೂರಿಯಿಂದ ಚಂದ್ರು ತೊಡೆಗೆ ಇರಿದು ಪರಾರಿಯಾಗಿದ್ದ. ಭೀರವಾಗಿ ಗಾಯಗೊಂಡಿದ್ದ ಚಂದ್ರುವನ್ನು ಗೆಳೆಯ ಸೈಮನ್​ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದನಾದರೂ ಬದುಕಲಿಲ್ಲ.

    ಬೈಕ್​ ಡಿಕ್ಕಿಯಾಗಿದ್ದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದರೆ, ಉರ್ದು ಬರಲ್ಲ ಎಂದು ಕನ್ನಡ ಮಾತನಾಡಿದ್ದಕ್ಕೆ ಚಂದ್ರುನನ್ನು ಚೂರಿಯಿಂದ ಚುಚ್ಚಿಚುಚ್ಚಿ ಕೊಲ್ಲಲಾಗಿದೆ ಎಂದು ಹೋಂ ಮಿನಿಸ್ಟರ್​ ಮತ್ತು ಸಿ.ಟಿ. ರವಿ ಹೇಳಿದ್ದು, ಈ ಪ್ರಕರಣ ವಿವಾದದ ಸ್ವರೂಪ ಪಡೆದಿತ್ತು. ಮತ್ತೆ ತಮ್ಮ ಹೇಳಿಕೆಯನ್ನು ಹೋಂ ಮಿನಿಸ್ಟರ್​ ಹಿಂಪಡೆದಿದ್ದರು. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

    ಕೇಸರಿ ಶಾಲು ಧರಿಸಿ ಶ್ರೀರಾಮನವಮಿ ಆಚರಿಸಿದ ಮುಸ್ಲಿಮರು! ಪಾನಕ ಹಂಚಿ ನಾವೆಲ್ಲರೂ ಒಂದೇ ಎಂಬ ಸಂದೇಶ ರವಾನೆ

    ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ-ನಾಮಫಲಕ ಹಾಕಿಕೊಂಡು ಪ್ರವಾಸಕ್ಕೆ ಬಂದ ಗ್ರಾಪಂ ಅಧ್ಯಕ್ಷ!

    BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts