More

    ತಾಯಿ ಗರ್ಭದಲ್ಲೇ ಕಲ್ಲಾದ 7 ತಿಂಗಳ ಮಗು! ಬರೋಬ್ಬರಿ 35 ವರ್ಷ ಹೊಟ್ಟೆಯಲ್ಲೇ ಇತ್ತು ಕಲ್ಲಿನ ಮಗು… ವೈದ್ಯರೇ ಶಾಕ್​

    ಅಲ್ಜೀರಿಯಾ: ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ವೃದ್ಧೆಯ ಗರ್ಭದಲ್ಲಿ ಸುಮಾರು 2 ಕೆಜಿ ತೂಕದ ‘ಕಲ್ಲಿನ ಮಗು'(stone baby) ಪತ್ತೆಯಾಗಿದೆ. ಆ ದೃಶ್ಯ ನೋಡಿ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಆ ಮಗು ತಾಯಿಯ ಗರ್ಭದಲ್ಲೇ ಕಲ್ಲಾಗಿ 35 ವರ್ಷದಿಂದ ಹೊಟ್ಟೆಯಲ್ಲೇ ಇದೆ. ಈ ಬಗ್ಗೆ ಆ ಮಹಿಳೆಗೂ ಗೊತ್ತಿರಲಿಲ್ಲ.

    ವಿಚಿತ್ರ ಅನಿಸಿದರೂ ಇದು ಅಲ್ಜೀರಿಯಾದಲ್ಲಿ ಬೆಳಕಿಗೆ ಬಂದ ನೈಜ ಘಟನೆ. ವೈಜ್ಞಾನಿಕ ಲೋಕದಲ್ಲಿ ಸಾಕಷ್ಟು ಚಿತ್ರ-ವಿಚಿತ್ರ ಘಟನೆಗಳು ಸಂಭವಿಸಿ ಅಚ್ಚರಿ ಮೂಡಿಸುತ್ತಲೇ ಇರುತ್ತೆ. ಅಲ್ಜೀರಿಯಾದಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 73 ವರ್ಷದ ವೃದ್ಧೆಯೊಬ್ಬರು ಆಸ್ಪತ್ರೆಗೆ ಹೋಗಿದ್ದರು. ಸುಮಾರು ವರ್ಷಗಳಿಂದ ಅಂದ್ರೆ 30-35 ವರ್ಷದಿಂದ ಪದೇಪದೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಲೇ ಇದೆ. ಈಗ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ ಎಂದು ವೈದ್ಯರ ಬಳಿ ಹೇಳಿಕೊಂಡರು. ಆಗ ವೈದ್ಯರು ಎಕ್ಸ್​ ರೇ ಮಾಡಿದ್ದು, ವೃದ್ಧೆಯ ಹೊಟ್ಟೆಯಲ್ಲಿ ಬೃಹತ್​ ಗಾತ್ರದ ಕಲ್ಲು ಇರುವುದು ಗೊತ್ತಾಗಿದೆ. ತಪಾಸಣೆ ಮುಂದುವರಿದಂತೆ ಅದು ಕಲ್ಲಿನ ಮಗು ಎಂಬುದು ಗೊತ್ತಾಗಿದೆ.

    ತಾಯಿ ಗರ್ಭದಲ್ಲೇ ಕಲ್ಲಾದ 7 ತಿಂಗಳ ಮಗು! ಬರೋಬ್ಬರಿ 35 ವರ್ಷ ಹೊಟ್ಟೆಯಲ್ಲೇ ಇತ್ತು ಕಲ್ಲಿನ ಮಗು... ವೈದ್ಯರೇ ಶಾಕ್​

    35 ವರ್ಷದ ಹಿಂದೆ ಈ ಮಹಿಳೆಗೆ ಒಮ್ಮೆ ಗರ್ಭಪಾತವಾಗಿತ್ತಂತೆ. ಬಳಿಕ ಗರ್ಭಿಣಿಯಾಗಿದ್ದರೂ ಅರಿವಿಗೆ ಬಂದಿಲ್ಲ. ಮಗು ಬೆಳವಣಿಗೆ ಆಗದೆ ಗರ್ಭಾವಸ್ಥೆ ವಿಫಲವಾಗಿದೆ. ಸಾಕಷ್ಟು ರಕ್ತ ಪೂರೈಕೆಯೂ ಆಗಿಲ್ಲ. ಆ ಭ್ರೂಣವನ್ನು ಹೊರ ಹಾಕಲು ದೇಹಕ್ಕೆ ಯಾವುದೇ ಮಾರ್ಗವಿಲ್ಲದೆ 6-7 ತಿಂಗಳ ಮಗು ನಿಧಾನವಾಗಿ ಕಲ್ಲಾಗಿ ಪರಿವರ್ತನೆಯಾಗಿದೆ. ಇದನ್ನು ‘ಲಿಥೋಪಿಡಿಯನ್’ ಎಂದು ವೈಜ್ಞಾಕವಾಗಿ ಕರೆಯುತ್ತಾರೆ. ಇಂತಹ ಕೇಸ್​ಗಳು ಕಂಡು ಬರುವ ಮಹಿಳೆಯರಲ್ಲಿ ಯಾವುದೇ ಬಾಹ್ಯ ಲಕ್ಷಣವೂ ಕಾಣಿಸಿಕೊಳ್ಳದೆ ಅನೇಕ ವರ್ಷ ಅವರ ಹೊಟ್ಟೆಯಲ್ಲೇ ಇರುತ್ತಂತೆ. ಇಂತಹ ಪ್ರಕರಣಗಳು ಇದೇ ಮೊದಲಲ್ಲ. ಪ್ರಪಂಚದಾದ್ಯಂತ ಸುಮಾರು 250ಕ್ಕೂ ‘ಲಿಥೋಪಿಡಿಯನ್’ ಕೇಸ್​ ಪತ್ತೆಯಾಗಿವೆ.

    ತಾಯಿ ಗರ್ಭದಲ್ಲೇ ಕಲ್ಲಾದ 7 ತಿಂಗಳ ಮಗು! ಬರೋಬ್ಬರಿ 35 ವರ್ಷ ಹೊಟ್ಟೆಯಲ್ಲೇ ಇತ್ತು ಕಲ್ಲಿನ ಮಗು... ವೈದ್ಯರೇ ಶಾಕ್​

    2013ರಲ್ಲಿ ಕೊಲಂಬಿಯಾದ 82 ವರ್ಷದ ವೃದ್ಧೆಯ ಹೊಟ್ಟೆಯಲ್ಲೂ ಕಲ್ಲಿನ ಮಗು ಇರುವುದು ಪತ್ತೆಯಾಗಿತ್ತು. 40 ವರ್ಷಗಳ ಕಾಲ ಈ ಮಹಿಳೆಯ ಹೊಟ್ಟೆಯಲ್ಲಿ ಕಲ್ಲಿನ ಮಗು ಇದ್ದರೂ ಅರಿವಿಗೆ ಬಂದಿರಲಿಲ್ಲ. ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ಇದು ಲಿಥೋಪಿಡಿಯನ್ ಕೇಸ್ ಎಂಬುದು ಗೊತ್ತಾಗಿದ್ದನ್ನು ಸ್ಮರಿಸಬಹುದು. (ಏಜೆನ್ಸೀಸ್​)

    ಆನೇಕಲ್​ನಲ್ಲಿ ಮಹಿಳೆಯ ಭೀಕರ ಹತ್ಯೆ! ಇಡೀ ದಿನ ಕಾದು ಆಕೆಯನ್ನ ಹೆದ್ದಾರಿಯಲ್ಲೇ ಕೊಂದ ಪ್ರಿಯಕರ

    ಮನೆ ಅಂಗಳದಲ್ಲೇ ಅಪ್ಪು ಪುತ್ಥಳಿ ನಿರ್ಮಿಸಿಕೊಂಡ ಅಭಿಮಾನಿ! ಭಾವುಕರಾದ ಗ್ರಾಮಸ್ಥರು

    ಹೊಲದಲ್ಲಿ ಮಗುವನ್ನ ಎಸೆದು ಹೋದ ಕಟುಕರು: ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿದ ಬೀದಿನಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts